ಸಿದ್ದರಾಮಯ್ಯ 
ರಾಜಕೀಯ

ದುಬಾರಿ ವಾಚ್ ಕೊಟ್ಟಿದ್ದು ನನ್ನ ಗೆಳೆಯ: ಸಿಎಂ ಸಿದ್ದರಾಮಯ್ಯ

ದುಬಾರಿ ವಾಚ್ ಬಗ್ಗೆ ಹಲವು ದಿನಗಳಿಂದ ಎದ್ದಿದ್ದ ಎಲ್ಲಾ ವಿವಾದಗಳಿಗೆ ಸಿಎಂ ಸಿದ್ದರಾಮಯ್ಯ ತೆರೆ ಎಳೆಯಲು ಮುಂದಾಗಿದ್ದಾರೆ. ತಾವು ಕಟ್ಟಿದ್ದ ವಾಚ್ ಅನ್ನು ತಮಗೆ...

ಬೆಂಗಳೂರು: ದುಬಾರಿ ವಾಚ್ ಬಗ್ಗೆ ಹಲವು ದಿನಗಳಿಂದ ಎದ್ದಿದ್ದ ಎಲ್ಲಾ ವಿವಾದಗಳಿಗೆ ಸಿಎಂ ಸಿದ್ದರಾಮಯ್ಯ ತೆರೆ ಎಳೆಯಲು ಮುಂದಾಗಿದ್ದಾರೆ. ತಾವು ಕಟ್ಟಿದ್ದ ವಾಚ್ ಅನ್ನು ತಮಗೆ ಯಾರು ನೀಡಿದ್ದರು ಎಂಬುದರ ಬಗ್ಗೆ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.

ಬೆಂಗಳೂರಿನ ತಮ್ಮ ಗೃಹ ಕಚೇರಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಕೇರಳ ಮೂಲದವರಾದ ತಮ್ಮ ಸ್ನೇಹಿತ ಡಾ. ಗಿರೀಶ್ ಚಂದ್ರ ವರ್ಮಾ ತಮಗೆ ವಾಚ್ ಅನ್ನು ಉಡುಗೊರೆಯಾಗಿ ನೀಡಿದ್ದಾಗಿ ಹೇಳಿದ್ದಾರೆ. ದುಬೈನಲ್ಲಿರುವ ಡಾ. ಗಿರೀಶ್ ಚಂದ್ರ ವರ್ಮಾ ಕಳೆದ ಜುಲೈ ನಲ್ಲಿ ಬೆಂಗಳೂರಿಗೆ ಬಂದಿದ್ದರು. ಆ ವೇಳೆ  ತಾವು ಕಟ್ಟಿದ್ದ ವಾಚ್ ಅನ್ನು ತಮಗೆ ಗಿಫ್ಟ್ ಆಗಿ ನೀಡಿದ್ದರು ಮತ್ತು ಇಲ್ಲಿ ಅದರ ಬೆಲೆ 14 ಲಕ್ಷ ಎಂದು ಸಿಎಂ ಹೇಳಿದ್ದಾರೆ.

ನಾನೆಂದೂ ಐಷಾರಾಮಿ ಜೀವನ ನಡೆಸಿದವನಲ್ಲ. ನನ್ನ ಕುಟುಂಬದವರು ಕೂಡ ಯಾರು ಐಷಾರಾಮಿ ಬದುಕು ನಡೆಸುವುದಿಲ್ಲ ಎಂದು ಸಿಎಂ ಸ್ಪಷ್ಟನೆ ನೀಡಿದ್ದಾರೆ.

1983 ರಿಂದಲೂ ಗಿರೀಶ್ ವರ್ಮಾ ತಮ್ಮ ಸ್ನೇಹಿತರಾಗಿದ್ದಾರೆ ಎಂದು ಹೇಳಿದ್ದಾರೆ. ವಾಚ್ ಬಗ್ಗೆ ತಮ್ಮ ಸ್ನೇಹಿತ ಈಗಾಗಲೇ ಅಫಿಡವಿಟ್ ಮಾಡಿಸಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸುವುದಾಗಿಯೂ ಕೂಡ ಸಿಎಂ ಹೇಳಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಕುಮಾರ ಸ್ವಾಮಿ, ಸಿಎಂ ಸಿದ್ದರಾಮಯ್ಯ ಕಾನೂನು ಸಲಹೆಗಾರರ ಸಲಹೆ ಪಡೆದು ಸ್ಪಷ್ಟನೆ ನೀಡಿದ್ದಾರೆ. ತಮ್ಮ ಸ್ನೇಹಿತ ಗಿಫ್ಟ್ ನೀಡಿದ್ದರು ಎಂದು ಅಂದು ಹೇಳಿದ್ದ ಸಿಎಂ, ಆವತ್ತೆ ಇದನ್ನು ಯಾರು ನೀಡಿದರು ಎಂದು ಹೆಸರು ತಿಳಿಸಬಹುದಿತ್ತು, ಸಿಎಂ ಸ್ಪಷ್ಟನೆ ಬಗ್ಗೆ ನನಗೆ ಸಂದೇಹ ವಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel