ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ (ಸಂಗ್ರಹ ಚಿತ್ರ) 
ರಾಜಕೀಯ

ಸಿಎಂ ಬಳಿ ಇದ್ದದ್ದು ಕದ್ದ ವಾಚ್?: ಮತ್ತೆ ಎಚ್ ಡಿಕೆ ಹೊಸ ಬಾಂಬ್

ವಾಚ್ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ನೀಡಿರುವ ಸ್ಪಷ್ಟನೆ ಕೇವಲ ಕಟ್ಟುಕತೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಶುಕ್ರವಾರ ಹೇಳಿದ್ದಾರೆ...

ಬೆಂಗಳೂರು: ವಾಚ್ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ನೀಡಿರುವ ಸ್ಪಷ್ಟನೆ ಕೇವಲ ಕಟ್ಟುಕತೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಶುಕ್ರವಾರ  ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿಎಂ ಹೇಳಿಕೆಗೂ ತಮಗೆ ಬಂದ ಮಾಹಿತಿ ಒಂದಕ್ಕೊಂದು ಸಂಬಂಧವೇ ಇಲ್ಲ. ಪ್ರಕರಣವನ್ನು ಮುಚ್ಚಿ ಹಾಕುವ ಸಲುವಾಗಿ ಸಿದ್ದರಾಮಯ್ಯ ಅವರು  ಕಟ್ಟಕಥೆ ಕಟ್ಟಿದ್ದಾರೆ. ಪ್ರಕರಣದ ಹಿಂದೆ ಹಲವು ಅನುಮಾನಗಳು ಇದ್ದು, ಕೂಡಲೇ ಸೂಕ್ತ ತನಿಖೆಯಾಗಬೇಕು. ಆಗಮಾತ್ರ ಸತ್ಯಾಂಶ ಹೊರಬರಲು ಸಾಧ್ಯ ಎಂದು ಕುಮಾರಸ್ವಾಮಿ  ಒತ್ತಾಯಿಸಿದರು.

"ನಾನು ಸಿದ್ಧರಾಮಯ್ಯನವರ ದುಬಾರಿ ವಾಚ್ ಬಗ್ಗೆ ಫೋಟೋಗಳನ್ನು ಬಿಡುಗಡೆ ಮಾಡಿದ ದಿನದಂದು ಮಧ್ಯರಾತ್ರಿ ಡಾ. ಸುಧಾಕರ್‌ಶೆಟ್ಟಿ ಎಂಬುವರ ಗೆಳೆಯರೊಬ್ಬರು ದೂರವಾಣಿ ಕರೆ ಮಾಡಿ  ಈ ವಾಚ್ ಡಾ. ಸುಧಾಕರ್ ಶೆಟ್ಟಿ ಅವರ ವಾಚನ್ನೇ ಹೋಲುತ್ತದೆ. ಕುವೈತ್‌ನಿಂದ ಹಿಂತಿರುಗಿ ಬೆಂಗಳೂರಿನಲ್ಲಿ ನೆಲೆಸಿದ್ದ ಡಾ. ಸುಧಾಕರ್‌ಶೆಟ್ಟಿ ಅವರ ಮನೆಯಲ್ಲಿ ಇಂತಹುದೆ ಗಡಿಯಾರ  ಸೇರಿದಂತೆ 4 ವಸ್ತುಗಳು ಕಳುವಾಗಿರುವ ಬಗ್ಗೆ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ನಮ್ಮ ಗಮನಕ್ಕೆ ತಂದರು. ಹೀಗಾಗಿ ಈ ಬಗ್ಗೆ ಸಿಬಿಐ  ತನಿಖೆಯಿಂದ ಮಾತ್ರ  ಸಾಧ್ಯ ಎಂದು ಕುಮಾರಸ್ವಾಮಿ ಹೇಳಿದರು.

ಅಂತೆಯೇ "ಸಿದ್ಧರಾಮಯ್ಯನವರು ಧರಿಸಿದ್ದ ವಾಚ್ ಮತ್ತು ಕಳುವಾಗಿರುವ ಡಾ. ಶೆಟ್ಟಿ ಅವರ ವಾಚ್ ಎರಡೂ ಒಂದೇ ಎಂದು ನಾನು ಹೇಳುವುದಿಲ್ಲ. ಡಾ. ಶೆಟ್ಟಿ ಅವರ ಗೆಳೆಯರು ಈ ರೀತಿಯ  ಅನುಮಾನ ವ್ಯಕ್ತಪಡಿಸಿದ್ದನ್ನು ನಿಮ್ಮ ಗಮನಕ್ಕೆ ತಂದಿದ್ದೇನೆ. ಇದರಲ್ಲಿ ಪೊಲೀಸರ ಕೈವಾಡವೂ ಇರಬಹುದು. ಸಮಗ್ರ ತನಿಖೆಯಾದರೆ ಎಲ್ಲವೂ ಬಹಿರಂಗವಾಗುತ್ತದೆ ಎಂದು ಹೇಳಿದರು.  ಅಲ್ಲದೆ "ಪ್ರಕರಣ ಸಂಬಂಧ ಡಾ.ಸುಧಾಕರ್ ಶೆಟ್ಟಿ ಅವರನ್ನು ತಾವು ಸಂಪರ್ಕಿಸಿದಾಗ ಅವರು "ನನಗೆ ಈಗ 70 ವರ್ಷ ಈ ವಯಸ್ಸಿನಲ್ಲಿ ನನಗೆ ಈ ಉಸಾಬರಿ ಬೇಡ ಎಂದು ಹೇಳಿದರು. ಆದರೂ  ನಾನು ಡಾ. ಶೆಟ್ಟಿ ಅವರಿಗೆ ಧೈರ್ಯ ಹೇಳಿ, ನೀವು  ಹೆದರಬೇಡಿ. ಸತ್ಯಾಂಶವನ್ನು ಬಹಿರಂಗಪಡಿಸಿ ಎಂದು ಕೇಳಿದ್ದೆ ಎಂದು ಕುಮಾರಸ್ವಾಮಿ ಹೇಳಿದರು.

ಡಾ.ಶೆಟ್ಟಿ ಅವರ ಮನೆಯಲ್ಲಿ ಕಳವಾಗಿರುವ ಕುರಿತು  2015 ರ ಮೇ 7 ರಂದು ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಜ್ರಖಚಿತ ಗಡಿಯಾರ, 2 ರೋಲೆಕ್ಸ್  ಗಡಿಯಾರಗಳು, ಕೈ ಉಂಗುರ ಮುಂತಾದ ವಸ್ತುಗಳು ಕಳುವಾಗಿದೆ ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ. ಈ ವಿಚಾರವನ್ನು ಡಾ. ಶೆಟ್ಟಿ ಅವರ ಕಾರು ಚಾಲಕ ಆನಂದ್‌ಪೂಜಾರಿ ತಮಗೆ  ತಿಳಿಸಿದ್ದಾರೆ. ಡಾ. ಸುಧಾಕರ್‌ಶೆಟ್ಟಿ ಅವರು ಕುವೈತ್‌ನಿಂದ ಬೆಂಗಳೂರಿಗೆ ವಾಪಸ್ಸಾದ ಸಂದರ್ಭದಲ್ಲಿ ಅವರು ತಂದಿರುವ ವಜ್ರಖಚಿತ ಗಡಿಯಾರ ಮುಂತಾದವುಗಳ ಬಗ್ಗೆ ಪಾಸ್‌ಪೋರ್ಟ್‌ನಲ್ಲಿ  ದಾಖಲಾಗಿರುತ್ತವೆ. ಯಾವ ಮಾಡೆಲ್, ಎಷ್ಟು ಬೆಲೆ ಎಂಬಿತ್ಯಾದಿ ಅಂಶಗಳೂ ಅದರಲ್ಲಿರುತ್ತವೆ. ಈ ಬಗ್ಗೆ ತನಿಖೆಯಾದರೆ ಎಲ್ಲವೂ ತಿಳಿಯಲಿದೆ. ಬಿಜೆಪಿಯವರು ಈಗಾಗಲೇ ಜಾರಿ  ನಿರ್ದೇಶನಾಲಯಕ್ಕೆ ದೂರು ಕೊಂಡೊಯ್ದಿದ್ದಾರೆ ಎಂದು ಕುಮಾರ ಸ್ವಾಮಿ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT