ಸಿಎಂ ಸಿದ್ದರಾಮಯ್ಯ 
ರಾಜಕೀಯ

ರಾಜಕಾರಣದಲ್ಲಿ ನಾನು ಸಕ್ರಿಯನಾಗಿದ್ದೇನೆ, ಸದ್ಯಕ್ಕೆ ಮಗನ ರಾಜಕೀಯ ಪ್ರವೇಶವಿಲ್ಲ: ಸಿಎಂ

ರಾಕೇಶ್ ಸಿದ್ದರಾಮಯ್ಯ ರಾಜಕೀಯ ಪ್ರವೇಶ ಕುರಿತಂತೆ ಸದ್ಯಕ್ಕೆ ಯಾವುದೇ ತೀರ್ಮಾನ ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ನವದೆಹಲಿ: ತಮ್ಮ ಪುತ್ರ ರಾಕೇಶ್ ಸಿದ್ದರಾಮಯ್ಯ ರಾಜಕೀಯ ಪ್ರವೇಶ ಕುರಿತಂತೆ ಸದ್ಯಕ್ಕೆ ಯಾವುದೇ ತೀರ್ಮಾನ ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸೋಮವಾರ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ''ಕಳೆದ ಎರಡು ಚುನಾವಣೆಗಳಿಂದಲೂ ವಿಧಾನಸಭೆಗೆ ಸ್ಪರ್ಧಿಸಲು ರಾಕೇಶ್ ಬಯಸಿದ್ದಾನೆ. ಇನ್ನೂ ಯಾವುದೂ ನಿರ್ಧಾರ ಆಗಿಲ್ಲ ಎಂದು ಹೇಳಿದ್ದಾರೆ.

ನಾನು ರಾಜಕಾರಣದಲ್ಲಿ ಸಕ್ರಿಯ ಆಗಿರುವ ತನಕ ನನ್ನ ಮಗನನ್ನು ಸಕ್ರಿಯ ರಾಜಕಾರಣಕ್ಕೆ ತರಬಾರದು ಎಂಬುದು ನನ್ನ ವೈಯಕ್ತಿಕ ಅನಿಸಿಕೆ,'' ಎಂದು ಹೇಳಿದ ಅವರು ಯಾವುದೇ ರಾಜಕಾರಣಿಯನ್ನು ಮೇಲಿನಿಂದ ಹೇರ ಬಾರದು. ಜನರ ನಡುವಿನಿಂದ ಆರಿಸಿಬರಬೇಕು. ಜನತೆಯೇ ಬಯಸಿ ಆರಿಸಿ ಕಳಿಸಬೇಕು. ಆತನ ರಾಜಕೀಯ ಪ್ರವೇಶವನ್ನೂ ಜನರೇ ನಿರ್ಧರಿಸಬೇಕು ಎಂದರು.  

ನನಗೆ ಚಾಮುಂಡೀಶ್ವರಿ ಕ್ಷೇತ್ರಕ್ಕೆ ಮರಳಬೇಕು ಎನ್ನಿಸುತ್ತಿಗೆ ಅಂದ ಮಾತ್ರಕ್ಕೆ ವರುಣಾ ಕ್ಷೇತ್ರವನ್ನು ತೊರೆಯುತ್ತೇನೆ ಎಂದು ಅರ್ಥವಲ್ಲ. ಏಳು ಸಲ ಆಯ್ಕೆಯಾಗಿರುವ ಚಾಮುಂಡೇಶ್ವರಿ ಕ್ಷೇತ್ರ ಕುರಿತು ನಾನು ಒಲವು ಹೊಂದಿದ್ದರೆ ಅದು ಸ್ವಾಭಾವಿಕ. ಅದರ ಅರ್ಥ ಮುಂದಿನ ಸಲ ಅಲ್ಲಿಂದಲೇ ಸ್ಪರ್ಧಿಸುತ್ತೇನೆ ಎಂದೇನೂ ಅಲ್ಲ, ಎಂದೂ ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್