ಸಿದ್ದರಾಮಯ್ಯ 
ರಾಜಕೀಯ

ರಾಜಕೀಯ ಕಾರಣಕ್ಕಾಗಿ ಪದೇ ಪದೇ ಬೆಳಗಾವಿ ವಿಚಾರವಾಗಿ ಖ್ಯಾತೆ: ಸಿಎಂ

ರಾಜ್ಯದಲ್ಲಿ ಗಡಿ ಕ್ಯಾತೆ ಮತ್ತೆ ಆರಂಭವಾಗಿದೆ. ಈ ಬಾರಿ ಶುರು ಮಾಡಿದ್ದು ಸ್ವತಃ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್...

ಬೆಳಗಾವಿ/ ಮಂಡ್ಯ: ರಾಜ್ಯದಲ್ಲಿ ಗಡಿ ಕ್ಯಾತೆ ಮತ್ತೆ ಆರಂಭವಾಗಿದೆ. ಈ ಬಾರಿ ಶುರು ಮಾಡಿದ್ದು ಸ್ವತಃ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್! ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್ ನಮ್ಮದೇ. ಕಟ್ಟ ಕಡೆಯ ಮರಾಠಿ ಭಾಷಿಕ ಜೀವಂತವಾಗಿರುವವರೆಗೆ ಬೆಳಗಾವಿ ಗಡಿ ಹೋರಾಟ ಮುಂದುವರೆಯಲಿದೆ ಎಂದು ಹೇಳಿದ್ದಾರೆ. ಇದಕ್ಕೆ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಅದು ಮಹಾಜನ್ ವರದಿಯಲ್ಲೇ ನಿರ್ಧಾರವಾಗಿದೆ ಎನ್ನುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಗೇಟು ನೀಡಿದ್ದಾರೆ.

ಮಹಾ ಸರ್ಕಾರದ ಬೆಂಬಲವಿದೆ: ``ಬೆಳಗಾವಿ ಮಹಾರಾಷ್ಟ್ರದ ಅವಿಭಾಜ್ಯ ಅಂಗವಾಗಿದ್ದು, ಬೆಳಗಾವಿ ಸೇರಿದಂತೆ ಗಡಿಭಾಗದಲ್ಲಿರುವ ಮರಾಠಿ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡುವಂತೆ ಮರಾಠಿಗರು ನಡೆಸುತ್ತಿರುವ ಹೋರಾಟಕ್ಕೆ ಮಹಾರಾಷ್ಟ್ರ ಸರ್ಕಾರ ಹಾಗೂ ಜನತೆಯ ಬೆಂಬಲವಿದೆ'' ಎಂದು ಮಹಾರಾಷ್ಟ್ರದ ಪುಣೆಯ ಪಿಂಪ್ರಿಯ ಚಿಂಚವಾಡದಲ್ಲಿ ಭಾನುವಾರ ನಡೆದ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಫಡ್ನವೀಸ್ ಹೇಳಿದ್ದಾರೆ. ಬೆಳಗಾವಿ ಮರಾಠಿಗರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ನಾವೆಲ್ಲರೂ ಮರಾಠಿಗರ ಸೇವಕರು. ಮರಾಠಿಗರ ಮೇಲಿನ ಅನ್ಯಾಯ, ದೌರ್ಜನ್ಯವನ್ನು ನಾವು ಎಂದಿಗೂ ಸಹಿಸಿಕೊಳ್ಳುವುದಿಲ್ಲ. ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್ ಬಾಲ್ಕಿ ಮತ್ತಿತರ ಗಡಿಭಾಗದಲ್ಲಿರುವ ಮರಾಠಿ ಬಹುಭಾಷಿಕ ಪ್ರದೇಶಗಳೆಲ್ಲವೂ ಮಹಾರಾಷ್ಟ್ರದ ಅಂಗ. ಮಹಾರಾಷ್ಟ್ರ ಸರ್ಕಾರ ಗಡಿ ಮರಾಠಿಗರ ಬೆಂಗಾವಲಿಗಿದೆ.

ಗಡಿಭಾಗದಲ್ಲಿ ಒಬ್ಬ ಮರಾಠಿಗನಿದ್ದರೂ ಹೋರಾಟ ನಿಲ್ಲಲ್ಲ ಎಂದರು. ಗಡಿ ಪ್ರದೇಶ ಕರ್ನಾಟಕಕ್ಕೆ ಸೇರಿದ್ದರೂ ಈ ಪ್ರದೇಶದಲ್ಲಿರುವ ಮರಾಠಿ ಭಾಷಿಕರ ಮನಸ್ಥಿತಿ ಮರಾಠಿ ಹಾಗೂ ಮಹಾರಾಷ್ಟ್ರದ್ದೇ ಆಗಿದೆ. ಬೆಳಗಾವಿ ಗಡಿ ಪ್ರದೇಶಗಳಲ್ಲಿ ಸ್ಥಳೀಯ ಸಂಸ್ಥೆಗಳು ಹಾಗೂ ವಿಧಾನಸಭೆಗೆ ಮಹಾರಾಷ್ಟ್ರ ಏಕೀಕರಣ ಸಮಿತಿ ಅಭ್ಯರ್ಥಿಗಳೇ ಆಂಯ್ಕೆಯಾಗುತ್ತಾ ಬಂದಿದ್ದಾರೆ. ಆದರೆ, ಬಹುತೇಕ ಗಡಿ ಪ್ರದೇಶ ಕರ್ನಾಟಕಕ್ಕೆ ಸೇರಿದೆ ಎಂದರು.

ಸಿಎಂ ತಿರುಗೇಟು: ``ಮಹಾರಾಷ್ಟ್ರದವರು ರಾಜಕೀಯ ಕಾರಣಕ್ಕಾಗಿ ಪದೇ ಪದೆ ಬೆಳಗಾವಿ ವಿಚಾರವಾಗಿ ಖ್ಯಾತೆ ತೆಗೆಯುತ್ತಿದ್ದಾರೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಅದು ಮಹಾಜನ್ ವರದಿಯಲ್ಲಿ ನಿರ್ಧಾರವಾಗಿದೆ'' ಎಂದು ಮುಖ್ಯ-ಮಂತ್ರಿ ಸಿದ್ದರಾಮಯ್ಯ ಸೋಮವಾರ ಮಂಡ್ಯದಲ್ಲಿ ಕಿಡಿಕಾರಿದ್ದಾರೆ. ಜತೆಗೆ, ಬೆಳಗಾವಿ ವಿಷಯ ಈಗಾಗಲೇ ಇತ್ಯರ್ಥವಾಗಿದೆ. ಮಹಾರಾಷ್ಟ್ರದವರು ಎಷ್ಟೇ ರಾಜಕೀಯ ಮಾಡಿದರೂ ಬೆಳಗಾವಿ ನಮ್ಮದೇ ಎಂದು ಹೇಳಿದ್ದಾರೆ.

ಮರಾಠಿ ಟೈಗರ್ಸ್ ಬಿಡುಗಡೆ ಖಚಿತ
: ಕೊಲ್ಲೆ ವಿವಾದಾತ್ಮಕ ಮರಾಠಿ ಟೈಗರ್ಸ್ ಮರಾಠಿ ಚಲನಚಿತ್ರವನ್ನು ಫೆ.5ರಂದು ಮಹಾರಾಷ್ಟ್ರ ಸೇರಿದಂತೆ ಗಡಿ ಪ್ರದೇಶದಲ್ಲಿ ಬಿಡುಗಡೆ ಮಾಡಿಯೇ ತೀರುತ್ತೇವೆ ಎಂದು ಚಿತ್ರನಟ ಅಮೋಲ ಕೊಲ್ಲೆ ಹೇಳಿದ್ದಾರೆ. ವಿವಾದಾತ್ಮಕ
ಮರಾಠಿ ಟೈಗರ್ಸ್ ಚಿತ್ರ ನಿಷೇಧಿಸುವಂತೆ ಕನ್ನಡ ಸಂಘಟನೆಗಳು ಆಗ್ರಹಿಸುತ್ತಿರುವ ಬೆನ್ನಲ್ಲೇ, ಬೆಳಗಾವಿಗೆ ಪ್ರಚಾರಕ್ಕೆ ಸೋಮವಾರ ಆಗಮಿಸಿದ ಚಿತ್ರ ತಂಡದ ಸದಸ್ಯರು ಈ ಹೇಳಿಕೆ ನೀಡಿದ್ದಾರೆ. ಗಡಿಭಾಗದಲ್ಲಿರುವ ಮರಾಠಿ ಭಾಷಿಕರು ಕಳೆದ 60 ವರ್ಷಗಳಿಂದ ಅನ್ಯಾಯ, ದೌರ್ಜನ್ಯ ಎದುರಿಸುತ್ತಿದ್ದಾರೆ. ಸೆನ್ಸಾರ್ ಮಂಡಳಿ ಅನುಮತಿ ನೀಡಿದೆ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT