ರಾಜಕೀಯ

ಸಿಎಂ ಮಾಧ್ಯಮ ಸಲಹೆಗಾರ ಮಟ್ಟು ಹೇಳಿಕೆಗೆ ಬಿಜೆಪಿ ಖಂಡನೆ

Shilpa D

ಬೆಂಗಳೂರು: ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರು ಭಯೋತ್ಪಾದನೆ ಕುರಿತಂತೆ ನೀಡಿರುವ ಹೇಳಿಕೆ ಅತ್ಯಂತ ಅಪಾಯಕಾರಿ ಧೋರಣೆಯಿಂದ ಕೂಡಿದ್ದು ಇದು ಖಂಡನೀಯ. ಸರ್ಕಾರದ ನಿಲುವನ್ನು ಪ್ರಶ್ನಿಸುವ  ರೀತಿಯಲ್ಲಿ ಹೇಳಿರುವುದರಿಂದ ಈ ಬಗ್ಗೆ ಮುಖ್ಯಮಂತ್ರಿ ಸ್ಪಷ್ಟನೆ ನೀಡಬೇಕು ಎಂದು ಬಿಜೆಪಿ ಶಾಸಕ. ಎಸ್ . ಸುರೇಶ್ ಕುಮಾರ್ ಆಗ್ರಹಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲ ಮಾತನಾಡಿದ ಅವರು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ  ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಅವರು ಪ್ರತಿ ಗಣ ರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಮುಸ್ಲಿಂ ಯುವಕರನ್ನು ಬಂಧಿಸಲಾಗುತ್ತಿದೆ. ಆ ಮೂಲಕ ಅವರು ಉಗ್ರರೆಂಬ ಭಾವನೆ ಹಿಂದೂಗಳಲ್ಲಿ ಮೂಡಿಸಲಾಗುತ್ತಿದೆ ಎಂದು ಹೇಳಿಕ ನೀಡಿದ್ದಾರೆ.

ರಾಜ್ಯ ಸಚಿವರ ಸ್ಥಾನಮಾನ ಹೊಂದಿರುವ ಮಾಧ್ಯಮ ಸಲಹೆಗಾರರು ಸರ್ಕಾರದ ಎಲ್ಲಾ ನಿಲುವುಗಳಿಗೆ ಬದ್ಧರಾಗಿರಬೇಕು. ಇತಿಮಿತಿಯಲ್ಲಿ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.

ಪಠಾಣ್ ಕೋಟ್ ವಿದ್ಯಮಾನದ ಬಳಿಕ ಮುಂಜಾಗ್ರತಾ ಕ್ರಮವಾಗಿ ಎನ್ಐಎ ಹಾಗೂ ರಾಜ್ಯ ಪೊಲೀಸರು ಆರೇಳು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಇಂತ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರು ನೀಡಿರುವ ಹೇಳಿಕೆ ಅಪಾಯಕಾರಿ ಧೋರಣೆಯದು. ಶಂಕಿತ ಉಗ್ರರನ್ನು ಬಂಧಿಸಿರುವ ಪೊಲೀಸರ ನೈತಿಕ ಸ್ಥೈರ್ಯ ಏನಾಗಬಾರದು ಎಂದು ಸುರೇಶ್ ಕುಮಾರ್ ಪ್ರಶ್ನಿಸಿದರು.

SCROLL FOR NEXT