ಬೆಂಗಳೂರು: ವ್ಯವಸಾಯದಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ನಂಬಿರುವ ಮೋದಿ ವಿದೇಶಿ ಆರ್ಥಿಕ ನೀತಿ ಆಶಾ ಗೋಪುರ ಕಟ್ಟಿಕೊಂಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಟೀಕಿಸಿದ್ದಾರೆ,.
ಜೆಡಿಎಸ್ ಕಚೇರಿಯಲ್ಲಿ ಮಂಗಳವಾರ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ದೇಶದಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗುತ್ತಿದೆ. ಬಹುಶಃ ಈ ತನಕ 10.000 ಕ್ಕೂ ಹೆಚ್ಚು ರೈತರಕು ಸತ್ತಿದ್ದು, ಕರ್ನಾಟಕದಲ್ಲೇ 1.000 ಆತ್ಮಹತ್ಯೆಗಳು ಮೀರಿವೆ. ಆದರೆ ಪ್ರಧಾನಿ ಮೋದಿ ಅವರು ಹೂಡಿಕೆದಾರರಿಗೋಸ್ಕರ ಹೊರ ದೇಶಗಳಿಗೆ ಪ್ರವಾಸ ಮಾಡುತ್ತಿದ್ದಾರೆ. ಮೇಕ್ ಇನ್ ಇಂಡಿಯಾ ಆಶಾ ಗೋಪುರ ಅವರದ್ದಾಗಿದ್ದು ಪಾಶ್ಚಾತ್ಯ ರಾಷ್ಟ್ರಗಳ ಆರ್ಥಿಕ ನೀತಿ ಅವರ ಚಿಂತನೆಯಾಗಿದೆ ಎಂದು ಗೌಡರು ಮಾರ್ಮಿಕವಾಗಿ ಹೇಳಿದರು.
ಒಟ್ಟಾರೆ ವ್ಯವಸಾಯದಿಂದ ದೇಶದಲ್ಲಿ ಅಭಿವದ್ಧಿ ಸಾಧ್ಯವಿಲ್ಲ ಎಂದು ಮೋದಿ ಭಾವಿಸಿದ್ದಾರೆ. ಇದರಿಂದ ರೈತರ ನಿರ್ಲಕ್ಷ್ಯ ಹೆಚ್ಚಾಗುತ್ತಿದೆ, ಇದೊಂದು ರೀತಿ ಅಪರಾಧ ಇದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಮಾಡುತ್ತಿವೆ ಎಂದು ಟೀಕಿಸಿದರು