ರಾಜಕೀಯ

ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಅವರನ್ನು ಕೂಡಲೇ ವಜಾಗೊಳಿಸಬೇಕು: ಬಿಜೆಪಿ

Shilpa D

ಬೆಂಗಳೂರು: ಪೊಲೀಸರು ಸ್ವತಂತ್ರ್ಯವಾಗಿ ಕಾರ್ಯ ನಿರ್ವಹಿಸಬೇಕೆಂದರೇ ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಅವರನ್ನು ಕೂಡಲೇ  ಸ್ಥಾನದಿಂದ ಕಿತ್ತೊಗೆಯಬೇಕು ಎಂದು ಬಿಜೆಪಿಯ ವಿ.ಸೋಮಣ್ಣ ಆಗ್ರಹಿಸಿದ್ದಾರೆ.

ವಿಧಾನ ಪರಿಷತ್ ನಲ್ಲಿ ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಸರ್ಕಾರದ ವಿರುದ್ ಹರಿಹಾಯ್ದ ವಿ. ಸೋಮಣ್ಣ, ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಶೂಟೌಟ್ ನಲ್ಲಿ ಮೃತ ಪಟ್ಟ ನಂತರವೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ ಎಚ್ಚೆತ್ತುಕೊಳ್ಳಲಿಲ್ಲ, ಹೀಗಾಗಿ ಇಬ್ಬರು ಡಿವೈಎಸ್ಪಿಗಳು ಆತ್ಮಹತ್ಯೆ ಮಾಡಿಕೊಂಡರು. ಮತ್ತೊಬ್ಬ ಮಹಿಳಾ ಡಿವೈಎಸ್ ಪಿ ರಾಜಿನಾಮೆ ನೀಡಿದರು ಎಂದು ಸೋಮಣ್ಣ ಆರೋಪಿಸಿದರು.

ರಾಜ್ಯದ ಪೊಲೀಸ್ ಇಲಾಖೆ ಸ್ವತಂತ್ರ್ಯವಾಗಿ ಕಾರ್ಯ ನಿರ್ವಹಿಸುತ್ತಿಲ್ಲ, ಗೃಹ ಇಲಾಖೆ ಯಾರದ್ದೊ ಹಿಡಿತದಲ್ಲಿದೆ ಎಂದು ದೂರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪೊಲೀಸ್ ಅಧಿಕಾರಿಗಳು ಯಾವುದೇ ಹಿರಿಯ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಹೆದರುತ್ತಿಲ್ಲ, ಬದಲಾಗಿ ಕೆಂಪಯ್ಯ ಅವರನ್ನು ನೋಡಿದರೇ ತುಂಬಾ ಹೆದರುತ್ತಾರೆ ಎಂದು ಸೋಮಣ್ಣ ಆಪಾದಿಸಿದ್ದಾರೆ.

ಇನ್ನೂ ಈ ವೇಳೆ ಮಾತನಾಡಿದ ಪರಿಷತ್ ವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ, ಮುಖ್ಯಮಂತ್ರಿ ಸೇರಿದಂತೆ ಇಡೀ ಸರ್ಕಾರವೇ ಜಾರ್ಜ್ ಅವರನ್ನು ರಕ್ಷಿಸಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗಣಪತಿ ಸಾವು ಒಂದು ವ್ಯವಸ್ಥಿತ ಕೊಲೆ. ಗಣಪತಿ ಕುಟುಂಬಕ್ಕೆ ನ್ಯಾಯ  ಸಿಗುವವರೆಗೂ ತಾವು ಹೋರಾಟ ನಡೆಸುವುದಾಗಿ ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ. 

SCROLL FOR NEXT