ರಾಜಕೀಯ

ಕರಪ್ಷನ್ ಪ್ರೊಡಕ್ಷನ್ ಬ್ಯೂರೋ: ಎಸಿಬಿ ಬಗ್ಗೆ ಜಗದೀಶ್ ಶೆಟ್ಟರ್ ವ್ಯಂಗ್ಯ

Shilpa D

ವಿಧಾನಸಭೆ:  ಸರ್ಕಾರ ರಚಿಸಿರುವ ಆ್ಯಂಟಿ ಕರಫ್ಷನ್ ಬ್ಯುರೋ ಕರಪ್ಷನ್ ಪ್ರೊಡಕ್ಷನ್ ಬ್ಯೂರೋ ಆಗಲಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಲೇವಡಿ ಮಾಡಿದ್ದಾರೆ.

2ನೇ ದಿನದ ಬಜೆಟ್ ಅಧಿವೇಶನದ ಕಲಾಪ ಆರಂಭವಾದಾಗ ನಿರೀಕ್ಷೆಯಂತೆಯೇ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸರ್ಕಾರ ಎಸಿಬಿ ರಚನೆ ಮಾಡಲು ಹೊರಟಿರುವ ಸರ್ಕಾರದ ನಿರ್ಧಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಇಡೀ ದೇಶಕ್ಕೆ ಮಾದರಿಯಾಗಿದ್ದ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿಹಾಕಲು ರಾಜ್ಯ ಸರ್ಕಾರ ಹುನ್ನಾರ ನಡೆಸಿದೆ. ಎಸಿಬಿ ರಚನೆಯಿಂದ ಲೋಕಾಯುಕ್ತ ಸಂಸ್ಥೆ ದುರ್ಬಲವಾಗಲಿದೆ. ನಿಜಕ್ಕೂ ರಾಜ್ಯ ಸರ್ಕಾರಕ್ಕೆ ಕಾನೂನಿನ ಅರಿವಿಲ್ಲ ಎಂದು ಶೆಟ್ಟರ್ ವಿಧಾನಸಭೆ ಕಲಾಪದಲ್ಲಿ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.

ಸ್ವತಃ  ವಕೀಲರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾನೂನು ಸಚಿವ ಜಯಚಂದ್ರ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಶೆಟ್ಟರ್ ನಿ ಜಕ್ಕೂ ಇವರಿಗೆ ಕಾನೂನಿನ ಅರಿವು ಇದ್ಯಾ ಎಂದು ಶೆಟ್ಟರ್ ಆಶ್ಚರ್ಯ ವ್ಯಕ್ತ ಪಡಿಸಿದರು.

ಯಾವ ಕೋರ್ಟ್ ಸಹ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿಹಾಕಿ ಎಸಿಬಿ ರಚಿಸಿ ಎಂದು ಹೇಳಿಲ್ಲ. ಆದರೆ ತಮ್ಮ ವಿರುದ್ಧದ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ರಾಜ್ಯ ಸರ್ಕಾರ 1998ರಲ್ಲಿ  ಸುಪ್ರೀಂಕೋರ್ಟ್  ನೀಡಿದ್ದ ನಿರ್ದೇಶನದ ನೆಪವೊಡ್ಡಿ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿ, ಎಸಿಬಿ ರಚಿಸಲು ಮುಂದಾಗಿದೆ ಎಂದು ಆರೋಪಿಸಿದರು.

SCROLL FOR NEXT