ಕೆ.ಜೆ ಜಾರ್ಜ್ 
ರಾಜಕೀಯ

ಗಣಪತಿ ಕೇಸ್ ನಲ್ಲಿ ಕ್ಲೀನ್ ಚಿಟ್: ಮತ್ತೆ ಮಂತ್ರಿ ಗದ್ದುಗೆ ಏರಲಿದ್ದಾರೆ ಕೆ.ಜೆ ಜಾರ್ಜ್?

ಮಂಗಳೂರು ಡಿವೈಎಸ್ಪಿ ಎಂಕೆ ಗಣಪತಿ ಆತ್ಮಹತ್ಯೆ ಕೇಸ್ ನಲ್ಲಿ ಕೆ.ಜೆ. ಜಾರ್ಜ್ ಗೆ ಕ್ಲೀನ್ ಚಿಟ್ ಸಿಕ್ಕಿದ ಕೂಡಲೇ ಮತ್ತೆ ಸಂಪುಟ ಸೇರುವ ಎಲ್ಲಾ ಸಿದ್ಧತೆಗಳು ..

ಬೆಂಗಳೂರು: ಮಂಗಳೂರು ಡಿವೈಎಸ್ಪಿ ಎಂಕೆ ಗಣಪತಿ ಆತ್ಮಹತ್ಯೆ ಕೇಸ್ ನಲ್ಲಿ ಕೆ.ಜೆ. ಜಾರ್ಜ್ ಗೆ ಕ್ಲೀನ್ ಚಿಟ್ ಸಿಕ್ಕಿದ ಕೂಡಲೇ ಮತ್ತೆ ಸಂಪುಟ ಸೇರುವ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ.

ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿದ್ದ ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಜೆ. ಜಾರ್ಜ್, ಐಪಿಎಸ್ ಅಧಿಕಾರಿಗಳಾದ ಪ್ರಣವ್ ಮೊಹಂತಿ ಮತ್ತು ಎ.ಎಂ. ಪ್ರಸಾದ್‌ಗೆ ಕ್ಲೀನ್‌ ಚಿಟ್ ಸಿಕ್ಕಿದ್ದು, ಜಾರ್ಜ್ ಸಂಪುಟ ಸೇರ್ಪಡೆಗೆ ಗ್ರೀನ್‍ ಸಿಗ್ನಲ್‍ ಸಿಕ್ಕಂತಾಗಿದೆ. ಸೆ.23ಕ್ಕೆ ಮರಳಿ ಸಚಿವರಾಗಲು ವೇದಿಕೆ ಸಿದ್ಧವಾಗುತ್ತಿದೆ.

ಪ್ರಕರಣದ ಆರಂಭದಲ್ಲೇ ರಾಜ್ಯ ಸರ್ಕಾರ ಜಾರ್ಜ್‌ಗೆ ಕ್ಲೀನ್‍ ಚಿಟ್ ನೀಡಿತ್ತು. ಆದರೆ ಪ್ರತಿಪಕ್ಷಗಳ ಆಗ್ರಹ, ಗಣಪತಿ ಕುಟುಂಬ ಸದಸ್ಯರ ಒತ್ತಡ, ಸಾರ್ವಜನಿಕ ಹೋರಾಟಗಳಿಗೆ ಬೆಲೆ ಕೊಟ್ಟು ಜಾರ್ಜ್ ರಾಜೀನಾಮೆ ಪಡೆದು, ಸಿಐಡಿ ತನಿಖೆ ಮುಂದುವರಿಸಲಾಗಿತ್ತು. ಈಗ ಮಡಿಕೇರಿ ಕೋರ್ಟ್‌ಗೆ ಸಿಐಡಿಯೇ ಬಿ ರಿಪೋರ್ಟ್ ಸಲ್ಲಿಸಿರುವುದು ಜಾರ್ಜ್ ಹಾದಿ ಸುಗಮವಾಗಿಸಿದೆ.

ಜಾರ್ಜ್ ರಾಜೀನಾಮೆ ನಂತರ ನಗರಾಭಿವೃದ್ಧಿ ಖಾತೆಯನ್ನು ಸಿಎಂ ಸಿದ್ದರಾಮಯ್ಯ ತಮ್ಮ ಬಳಿಯೇ ಉಳಿಸಿಕೊಂಡಿದ್ದರು. ಇವಾಗ ಮತ್ತೆ ಜಾರ್ಜ್ ಸಂಪುಟ ಸೇರುವ ಸಮಯ ಸಮೀಪಿಸಿದ್ದು, ಅದೇ ಖಾತೆಯನ್ನು ವಾಪಸ್ ಅವರಿಗೆ ವಹಿಸಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಹೈ ಕಮಾಂಡ್ ಸೋನಿಯಾ ಗಾಂಧಿಗೆ ಜಾರ್ಜ್ ತೀರಾ ಬೇಕಾದವರಿಗಾರುವುದರಿಂದ ಬೆಂಗಳೂರಿನ ಪ್ರಭಾವಿ ಶಾಸಕರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

'ವಿರಾಟ್ ಕೊಹ್ಲಿ ಬೇಗ ಔಟಾದರೆ ನನಗೆ ಊಟವೇ ಸೇರಲ್ಲ': ಸ್ಟಾರ್ ಬ್ಯಾಟರ್ ಬಗ್ಗೆ ನಾನಾ ಪಾಟೇಕರ್ ಹೇಳಿಕೆಯ ಹಳೆಯ ವಿಡಿಯೋ ವೈರಲ್

ಬೆಂಗಳೂರಿನಲ್ಲಿ CJP ಪ್ರತಿಭಟನೆ: ಪ್ರಕಾಶ್ ರಾಜ್, YouTuber ಧ್ರುವ್ ರಾಠಿ ಭಾಗಿ; CEC ರಾಜೀನಾಮೆಗೆ ಬಿಗಿಪಟ್ಟು..!

ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ