ಚಾಮರಾಜನಗರ: ಏಪ್ರಿಲ್ 9ರಂದು ನಡೆಯಲಿರುವ ಉಪ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಶುಕ್ರವಾರ ಸಂಜೆ ತೆರೆ ಬೀಳುತ್ತಿದ್ದು, ಇದೀಗ ರಾಜಕೀಯ ಪಕ್ಷದ ನಾಯಕರು ಹಣ ಹಂಚಿಕೆಗೆ ಮುಂದಾಗಿರುವುದು ಕಂಡುಬಂದಿದೆ.
ಇಂದು ಬೆಳಗ್ಗೆ ಗುಂಡ್ಲುಪೇಟೆಯ ಖಾಸಗಿ ಹೋಟೆಲ್ ಮುಂಭಾಗ ನಿಲ್ಲಿಸಿದ್ದ ಹುಬ್ಬಳ್ಳಿಯ ವಾಯವ್ಯ ಸಾರಿಗೆ ನಿಗಮದ ನಾಮ ನಿರ್ದೇಶಕ ಮನೋಜ್‌ಕುಮಾರ್ ಕರ್ಜಗಿ ಅವರ ಕಾರಿನಲ್ಲಿ ದಾಖಲೆ ಇಲ್ಲದ 20 ಲಕ್ಷ ರುಪಾಯಿ ನಗದು ಪತ್ತೆಯಾಗಿದ್ದು, ಪೊಲೀಸರು ಹಣ ಹಾಗೂ ಕರ್ಜಗಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕರ್ಜಗಿ ಅವರ ಬಳಿ 2,000 ರುಪಾಯಿ ಮುಖಬೆಲೆಯ ನೋಟಿನ 10 ಕಂತೆಗಳು ಸಿಕ್ಕಿದ್ದು, ಈತ ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವ ವಿನಯ್ ಕುಲಕರ್ಣಿ ಅವರ ಕಟ್ಟಾ ಬೆಂಬಲಿಗ ಎನ್ನಲಾಗಿದೆ.
ಬಿಜೆಪಿ ಕಾರ್ಯಕರ್ತರು ಅನುಮಾನಗೊಂಡು ಕಾರು ತಡೆದು ತಪಾಸಣೆ ನಡೆಸಿದಾಗ ಹಣ ಇರುವುದು ಪತ್ತೆಯಾಗಿದೆ. ಕೂಡಲೇ, ಪೊಲೀಸರು ಮತ್ತು ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮನೋಜ್‌ಕುಮಾರ್ ಕರ್ಜಗಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics