ದೇವೇಗೌಡ 
ರಾಜಕೀಯ

ಯಾರಿಂದಲೂ ನನ್ನ ಕುಟುಂಬವನ್ನು ಒಡೆಯಲು ಸಾಧ್ಯವಿಲ್ಲ: ಎಚ್.ಡಿ ದೇವೇಗೌಡ

ನಾನಿರುವ ತನಕ ರಾಜಕೀಯ ಕಾರಣಕ್ಕೆ ನಮ್ಮ ಕುಟುಂಬ ಒಡೆಯೋದಕ್ಕೆ ಬಿಡಲ್ಲ. ಪಕ್ಷದಲ್ಲೂ ನನ್ನದೇ ನಿರ್ಣಯ ಅಂತಿಮ' ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ..

ಬೆಂಗಳೂರು: ನಾನಿರುವ ತನಕ ರಾಜಕೀಯ ಕಾರಣಕ್ಕೆ ನಮ್ಮ ಕುಟುಂಬ ಒಡೆಯೋದಕ್ಕೆ ಬಿಡಲ್ಲ. ಪಕ್ಷದಲ್ಲೂ ನನ್ನದೇ ನಿರ್ಣಯ ಅಂತಿಮ' ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ತಿಳಿಸಿದ್ದಾರೆ. 
ಕೆಂಗೇರಿ ಬಳಿಯ ಎಸ್‌ಡಿಎಂ ಆಯುರ್ವೇದ ಕೇಂದ್ರದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿರುವ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎಚ್‌.ಡಿ.ರೇವಣ್ಣ ನಾನು ಹಾಕಿದ ಗೆರೆ ದಾಟುವುದಿಲ್ಲ. ರೇವಣ್ಣ ಎಂದೂ ತಂದೆಗೆ ವಿರುದ್ಧವಾಗಿ ಹೋಗಲ್ಲ, ನನಗಾಗಿ ಏನು ಬೇಕಾದರೂ ಮಾಡಲು ಅವನು ಸಿದ್ಧ ಎಂದು ತಿಳಿಸಿದರು.
ಕುಮಾರ ಸ್ವಾಮಿ ಮತ್ತು ರೇವಣ್ಣ ನಡುವೆ ಯಾವುದೇ ಮನಸ್ತಾಪವಿಲ್ಲ,  ಅವರಿಬ್ಬರು ಒಳ್ಳೆಯ ಸಹೋದರರು,ಇಬ್ಬರ ನಡುವೆ ಉತ್ತಮ ಸಂಬಂಧವಿದೆ ಎಂದು ದೇವೇಗೌಡ ಸಮರ್ಥಿಸಿಕೊಂಡಿದ್ದಾರೆ. 
ಎಂ ಜತೆ ಒಪ್ಪಂದ ಮಾಡಿಕೊಂಡಿಲ್ಲ ಎಚ್‌.ಡಿ.ರೇವಣ್ಣ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಒಪ್ಪಂದ ಮಾಡಿಕೊಂಡಿಲ್ಲ. ನನ್ನ ಮಾತು ಮೀರಿ ಆವನು ಏನೂ ಮಾಡುವುದಿಲ್ಲ. ನನ್ನ ಮನೆಯಲ್ಲಿ ನನ್ನ ಮಾತೇ ಅಂತಿಮ ಎಂದು ಹೇಳಿದ್ದಾರೆ.
ನಮ್ಮ ಪಕ್ಷದಲ್ಲೇ ಇರುವವರು ನಮ್ಮ ಕುಟುಂಬದಲ್ಲಿ ವೈಮನಸ್ಯ ಉಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅದಕ್ಕೆ ನನ್ನ ಪ್ರಾಣ ಇರುವವರೆಗೂ ಅವಕಾಶ ಕೊಡುವುದಿಲ್ಲ ಎಂದು ತಿಳಿಸಿದರು.
ಮುಲಾಯಂ ಸಿಂಗ್ ಯಾದವ್  ಕುಟುಂಬದಂತೆ ನಮ್ಮ ಕುಟುಂಬ ಆಗಲು ಬಿಡುವುದಿಲ್ಲ ಎಂದು ಹೇಳಿದ ಅವರು, ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲೂ ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಅವರು ಹೇಳಿದ್ದಾರೆ.
ಹಿಂದೊಮ್ಮೆ ಹೊಳೆನರಸಿಪುರದಲ್ಲಿ ನನ್ನ ಪತ್ನಿ ಸ್ಪರ್ಧೆ ಮಾಡಬೇಕು ಎಂದು ಜನರು ಆಗ್ರಹಿಸಿದ್ದರು. ಕೆ.ಆರ್‌. ಪೇಟೆಯಲ್ಲಿ ಮಗಳ ಸ್ಪರ್ಧೆಗೆ ಒತ್ತಾಯಿಸಿದ್ದರು. ನಾನು ಒಪ್ಪಿರಲಿಲ್ಲ. ಈಗಲೂ ಕುಟುಂಬದಲ್ಲಿ ಏನೇ ನಿರ್ಧಾರ ಮಾಡಬೇಕಾದರೂ ನನ್ನದೇ ಅಂತಿಮ ತೀರ್ಮಾನ. ಈಗಲೂ ರೇವಣ್ಣ ಮತ್ತು ಕುಮಾರಸ್ವಾಮಿ ನನ್ನ ಮಾತು ಮೀರಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT