ರಾಜಕೀಯ

ಜಾತಿಗಳ ಮಧ್ಯೆ ಭಿನ್ನಾಭಿಪ್ರಾಯ ಸೃಷ್ಟಿಸುವ ಸಿಎಂ ಸಿದ್ದರಾಮಯ್ಯಗೆ ನೊಬೆಲ್ ಕೊಡಬೇಕು: ಈಶ್ವರಪ್ಪ

Sumana Upadhyaya
ಶಿವಮೊಗ್ಗ: ಲಿಂಗಾಯತರಿಗೆ ಪ್ರತ್ಯೇಕ ಧಾರ್ಮಿಕ ಸ್ಥಾನಮಾನ ನೀಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಪಹಾಸ್ಯ ಮಾಡಿದ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ಜಾತಿಗಳ ಮಧ್ಯೆ ಭಿನ್ನತೆಯನ್ನು ಸೃಷ್ಟಿಸುತ್ತಿರುವ ಮುಖ್ಯಮಂತ್ರಿಯವರಿಗೆ ನೊಬೆಲ್ ಬಹುಮಾನ ನೀಡಬೇಕು ಎಂದು ಹೇಳಿದ್ದಾರೆ.
ಶಿವಮೊಗ್ಗದಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯವರು ಅನಗತ್ಯವಾಗಿ ಲಿಂಗಾಯತ, ವೀರಶೈವ ವಿಷಯಗಳಲ್ಲಿ ತಮ್ಮ ಮೂಗು ತೂರಿಸಿ ಆ ಮೂಲಕ ಎರಡೂ ಜಾತಿಗಳ ಜನರನ್ನು ಬೇರೆ ಬೇರೆ ಮಾಡುತ್ತಿದ್ದಾರೆ. ವೀರಶೈವ ಮತ್ತು ಲಿಂಗಾಯತರ ಮಧ್ಯೆ ವಿಭಜನೆಯುಂಟಾಗಲು ಮುಖ್ಯಮಂತ್ರಿಯವರೇ ಕಾರಣ. ವಿಧಾನಸಭೆ ಚುನಾವಣೆ ಹತ್ತಿರದಲ್ಲಿರುವುದರಿಂದ ಆ ವಿಷಯವನ್ನೀಗ ಎತ್ತಿದ್ದಾರೆ ಎಂದರು.
ಬೀದರ್, ಕಲಬುರಗಿ, ಕೊಡಗು ಮತ್ತು ಇತರ ಜಿಲ್ಲೆಗಳಲ್ಲಿ ಕುರುಬ ಜನಾಂಗದವರಿಗೆ ಬುಡಕಟ್ಟು ಜನಾಂಗದ ಪ್ರಮಾಣಪತ್ರ ನೀಡಲಾಗುತ್ತಿದೆ. ಇದನ್ನು ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಬೇಕೆಂದು ಇದೀಗ ಕುರುಬ ಸಮುದಾಯದವರು ಒತ್ತಾಯಿಸುತ್ತಿದ್ದಾರೆ ಎಂದರು.
ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕು ಪತ್ರ ನೀಡಲು ಕಾಂಗ್ರೆಸ್ ಸರ್ಕಾರ ಹಿಂಜರಿಯುತ್ತಿದೆ ಎಂದು ಈಶ್ವರಪ್ಪ ಆರೋಪಿಸಿದರು.
SCROLL FOR NEXT