ರಾಜಕೀಯ

ಈಶ್ವರಪ್ಪ ಪಿ.ಎ ಅಪಹರಣ ಯತ್ನ ಕೇಸ್: ಬಿಎಸ್ ವೈ ಆಪ್ತನಿಗೆ ನೊಟೀಸ್

Shilpa D
ಬೆಂಗಳೂರು: ವಿಧಾನ ಪರಿಷತ್‌ನ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರ ಆಪ್ತ ಸಹಾಯಕ ವಿನಯ್ ಅಪಹರಣ ಯತ್ನ, ಹಲ್ಲೆ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಪಿ.ಎ ಎನ್‌.ಆರ್‌.ಸಂತೋಷ್‌ ಅವರಿಗೆ ತನಿಖಾಧಿಕಾರಿ ಅವರು ನೋಟಿಸ್‌ ನೀಡಿದ್ದಾರೆ.
ಪ್ರಕರಣದಲ್ಲಿ ಭಾಗಿಯಾದ ಆರೋಪ ಸಂತೋಷ್‌ ಮೇಲಿದೆ. ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿರುವ ಅವರಿಗೆ ನಿರೀಕ್ಷಣಾ ಜಾಮೀನು ಸಿಕ್ಕಿದೆ. ಈಗ ಪೊಲೀಸರು ನೋಟಿಸ್‌ ನೀಡಿರುವುದರಿಂದ ಗುರುವಾರ ಬೆಳಗ್ಗೆ  ತನಿಖಾಧಿಕಾರಿ ಎದುರು ಹಾಜರಾಗುವ ಸಾಧ್ಯತೆ ಇದೆ.
ಈ ಹಿಂದೆಯೂ ನೋಟಿಸ್‌ ಕೊಟ್ಟಿದ್ದೆವು. ಅವರು ಗೈರಾಗಿದ್ದರು. ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯವೇ ಷರತ್ತು ವಿಧಿಸಿದೆ. ಅದರನ್ವಯವೇ ಎರಡನೇ ಬಾರಿ ನೋಟಿಸ್‌ ಕೊಟ್ಟಿದ್ದೇವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಯಡಿಯೂರಪ್ಪ ಮತ್ತು ಈಶ್ವರಪ್ಪ ಆಪ್ತರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆಯೇ ಅಥವಾ ಇದರಲ್ಲಿ ನಾಯಕರುಗಳ ಪಾತ್ರ ಇದೆಯೇ ಎಂಬುದನ್ನು ಪತ್ತೆ ಮಾಡಲು ಪೊಲೀಸರು ಯತ್ನಿಸುತ್ತಿದ್ದಾರೆ. ಬಿಜೆಪಿ ನಾಯಕರೊಬ್ಬರ ವಿವಾದಾತ್ಮಕ ವಿಷಯವೊಂದರ ಬಗೆಗಿನ ಸಿಡಿಗಾಗಿ ಈ ಅಪಹರಣ ಯತ್ನ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. 
SCROLL FOR NEXT