ರಾಜಕೀಯ

ಇಂದಿರಾ, ಅಪ್ಪಾಜಿ, ರಮ್ಯಾ ಕ್ಯಾಂಟೀನ್ ಆಯ್ತು, ಈಗ ಯಡಿಯೂರಪ್ಪಾಜಿ ಕ್ಯಾಂಟೀನ್!

Lingaraj Badiger
ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಡವರಿಗಾಗಿ ಇಂದಿರಾ ಕ್ಯಾಂಟೀನ್ ಆರಂಭಿಸಿದ ನಂತರ ಅದಕ್ಕೆ ಪ್ರತಿಸ್ಫರ್ಧಿಯಾಗಿ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಟಿಎ ಶರವಣ ಅವರ ನಮ್ಮ ಅಪ್ಪಾಜಿ ಕ್ಯಾಂಟೀನ್ ಹಾಗೂ ಮಾಜಿ ಸಂಸದೆ ರಮ್ಯಾ ಕ್ಯಾಂಟೀನ್ ನಂತರ ಈಗ ಮಂಡ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕ್ಯಾಂಟೀನ್ ಆರಂಭಿಸಲಾಗುತ್ತಿದೆ.
ಮಂಡ್ಯದಲ್ಲಿ ಯಡಿಯೂರಪ್ಪ ಅಭಿಮಾನಿಗಳ ಸಂಘ ಜಿಲ್ಲಾ ಘಟಕದ ವತಿಯಿಂದ ಯಡಿಯೂರಪ್ಪಜೀ ಕ್ಯಾಂಟೀನ್ ತೆರೆಯಲು ನಿರ್ದರಿಸಿದೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಸ್.ಜಿತೇಂದ್ರ ಅವರು ಹೇಳಿದ್ದಾರೆ.
ಬಡವರು, ರೈತರು, ಆಟೊ ಚಾಲಕರು ಹಾಗೂ ಕಾರ್ಮಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ 5 ರುಪಾಯಿ ಉಪಹಾರ ಹಾಗೂ ಊಟ ನೀಡಲಾಗುವುದು ಜಿತೇಂದ್ರ ತಿಳಿಸಿದ್ದಾರೆ.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಹಲವು ಜನಪರ ಯೋಜನೆ ಜಾರಿಗೆ ತಂದಿದ್ದರು. ಅಲ್ಲದೆ ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವೆಲ್ಲವನ್ನು ಮನಗಂಡು ಹಸಿವು ನೀಗಿಸುವ ಉದ್ದೇಶದಿಂದ ಅವರ ಹೆಸರಿನಲ್ಲಿ ಕ್ಯಾಂಟೀನ್‌ ತೆರೆಯಲು ತೀರ್ಮಾನಿಸಲಾಗಿದ್ದು, ಶೀಘ್ರದಲ್ಲಿಯೇ ನಗರದ ಸುಭಾಷ್‌ ನಗರದ ಒಂದನೇ ತಿರುವಿನಲ್ಲಿ ಕ್ಯಾಂಟೀನ್‌ ತೆರೆಯಲಾಗುವುದು ಎಂದು ಹೇಳಿದ್ದಾರೆ.
SCROLL FOR NEXT