ರಾಜಕೀಯ

ಐಟಿ ಇಲಾಖೆ ಸೀಜ್ ಮಾಡಿರುವ ಗೋವಿಂದರಾಜು ಡೈರಿಯನ್ನು ಸಾರ್ವಜನಿಕರ ಮುಂದೆ ಬಹಿರಂಗಪಡಿಸಿ: ಯಡಿಯೂರಪ್ಪ

Shilpa D

ಕಲಬುರಗಿ: ಕೆಪಿಸಿಸಿ ಖಜಾಂಚಿ ಕೆ. ಗೋವಿಂದರಾಜು ಅವರ ಮನೆಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿ ಸೀಜ್ ಮಾಡಿರುವ ಡೈರಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಬೇಕು ಎಂದು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಆಗ್ರಹಿಸಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ಅವರು ಹೈಕಮಾಂಡ್‌ಗೆ 1,000 ಕೋಟಿ ಹಣ ಸಂದಾಯ ಮಾಡಿದ್ದು ಸುಳ್ಳು ಎಂದು ಸಾಬೀತಾದರೆ ನಾನು ರಾಜಕೀಯ ನಿವೃತ್ತಿ ಪಡೆಯಲು ಸಿದ್ಧ ಎಂದು ಸವಾಲು ಹಾಕಿದ್ದಾರೆ.

ಸ್ಟೀಲ್ ಬ್ರಿಡ್ಜ್ ಗಾಗಿ ಸಿದ್ದರಾಮಯ್ಯ 65 ಕೋಟಿ ರು ಕಿಕ್ ಬ್ಯಾಕ್ ಪಡೆದಿರುವುದು ಕೂಡ ಗೋವಿಂದರಾಜು ಅವರ ಡೈರಿಯಲ್ಲಿ ಉಲ್ಲೇಖವಾಗಿದೆ ಎಂದು ಯಡಿಯೂರಪ್ಪ ಆರೋಪಿಸಿದ್ದಾರೆ.

ಆದಾಯ ತೆರಿಗೆ ಅಧಿಕಾರಿಗಳ ದಾಳಿ ವೇಳೆ ವಿಧಾನ ಪರಿಷತ್‌ ಸದಸ್ಯ ಕೆ. ಗೋವಿಂದರಾಜು ಅವರ ಮನೆಯಲ್ಲಿ ಸಿಕ್ಕ ಡೈರಿ ಹಾಗೂ ಅದರಲ್ಲಿರುವ ಆರೋಪಗಳ ಬಗೆಗೆ ತನಿಖೆ ನಡೆಸುವಂತೆ ಕೇಂದ್ರಕ್ಕೆ ಪತ್ರ ಬರೆಯುವುದಾಗಿ ಅವರು ಹೇಳಿದ್ದಾರೆ.

ಒಂದು ವೇಳೆ ಗೋವಿಂದರಾಜು ಅವರ ಮನೆಯಲ್ಲಿ ಐಟಿ ಅಧಿಕಾರಿಗಳು ಡೈರಿ ಸೀಜ್ ಮಾಡಲಿಲ್ಲ ಎಂದು ಸಿಎಂ ಒಪ್ಪಿಕೊಂಡರೇ ತಾವು ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಹೇಳಿರುವ ಅವರು ಕಾಂಗ್ರೆಸ್ ಹಮ್ಮಿಕೊಂಡಿರುವ ಸತ್ಯಮೇವ ಜಯತೇ ಪ್ರತಿಭಟನಾ ರ್ಯಾಲಿಯನ್ನು ಸ್ವಾಗತಿಸಿದ್ದಾರೆ.

SCROLL FOR NEXT