ರಾಹುಲ್ ಗಾಂಧಿ ಮತ್ತು ಶೋಭಾ ಕರಂದ್ಲಾಜೆ
ಕಲಬುರಗಿ: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬಚ್ಚಾ, ಅವರಿಗೆ ದೇಶದ ಪ್ರಧಾನಿ ಬಗ್ಗೆ ಟೀಕೆ ಮಾಡುವ ನೈತಿಕ ಹಕ್ಕಿಲ್ಲ, ಅವರಿಂದ ಪ್ರಧಾನಿ ಅವರು ಕಲಿಯುವುದು ಏನು ಇಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.
ನಿನ್ನೆ ರಾಹುಲ್ ಗಾಂಧಿ ಅವರು ಮೋದಿ ಒಬ್ಬ ದುರ್ಬಲ ಪ್ರಧಾನಿ ಎಂದು ನೀಡಿರುವ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಯಿಂದ ಇಡೀ ಪ್ರಪಂಚವೇ ಇಂದು ಭಾರತದತ್ತ ತಿರುಗಿ ನೋಡುತ್ತಿದೆ. ಅವರ ಬಗ್ಗೆ ರಾಹುಲ್ ಗಾಂಧಿಯಂತಹ ಒಬ್ಬ ಬಚ್ಚಾ ಗೆ ಟೀಕಿಸುವ ಹಕ್ಕಿಲ್ಲ ಎಂದು ಕಿಡಿಕಾರಿದ್ದಾರೆ. ಮೊದಲು ಸಿದ್ದರಾಮಯ್ಯ ಅವರ ಜೊತೆ ಮಾತನಾಡಿ ರಾಜ್ಯದ ರೈತರ ಸಮಸ್ಯೆ ಬಗೆಹರಿಸಲಿ ಎಂದು ಆಗ್ರಹಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕದಲ್ಲಿ ಹೇಗೆ ಸ್ವಾಗತಿಸಿ ಗೌರವ ನೀಡಲಾಯಿತು ಎನ್ನುವುದನ್ನು ವಿಶ್ವವೇ ನೋಡಿದೆ. ಅವರು 70 ವರ್ಷಗಳಲ್ಲಿ ಇಸ್ರೇಲ್ ಪ್ರವಾಸ ಮಾಡುವ ಎದೆಗಾರಿಕೆ ತೋರಿಸಿದ್ದಾರೆ. ಗಡಿ ರಕ್ಷಣೆ, ಸಶಸ್ತ್ರ ಸ್ವಾವಲಂಬನೆ ಮಾಡುವತ್ತ ಹೊರಟಿದ್ದಾರೆ ಎಂದು ಮೋದಿಯನ್ನು ಶ್ಲಾಘಿಸಿದ ಶೋಭಾ, ಮೊದಲು ಕಾಂಗ್ರೆಸ್ ಪಕ್ಷದಲ್ಲಿರುವ ಹುಳುಕನ್ನು ಸರಿಪಡಿಸಲಿ ಎಂದು ಟೀಕಿಸಿದ್ದಾರೆ.