ಬಿ.ಎಸ್ ಯಡಿಯೂರಪ್ಪ 
ರಾಜಕೀಯ

ಶೀಘ್ರವಾಗಿ ರೈತರ ಸಾಲಮನ್ನಾ ಮಾಡದಿದ್ದರೇ ಬೃಹತ್ ಪ್ರತಿಭಟನೆ: ಯಡಿಯೂರಪ್ಪ

: ರಾಜ್ಯ ಸರ್ಕಾರ ಶೀಘ್ರವೇ ರೈತರ ಸಾಲಮನ್ನಾ ಮಾಡದಿದ್ದರೇ ಜುಲೈ7ರಿಂದ 9 ರವರೆಗೆ ರಾಜ್ಯಾದ್ಯಂತ ರೈತರ ಬೃಹತ್ ರ್ಯಾಲಿ ..

ಮೈಸೂರು: ರಾಜ್ಯ ಸರ್ಕಾರ ಶೀಘ್ರವೇ ರೈತರ ಸಾಲಮನ್ನಾ ಮಾಡದಿದ್ದರೇ ಜುಲೈ7ರಿಂದ 9 ರವರೆಗೆ ರಾಜ್ಯಾದ್ಯಂತ ರೈತರ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ಜುಲೈ 10 ರಂದು ಸುಮಾರು 4 ಲಕ್ಷ ರೈತರು ಬೆಂಗಳೂರಿನಲ್ಲಿ ಸೇರಿ ಭಾರೀ ಪ್ರಮಾಣದ ರ್ಯಾಲಿ ನಡೆಸುವುದಾಗಿ ಹೇಳಿದ್ದಾರೆ. 
ಮೈಸೂರಿನಲ್ಲಿ ಮಾತನಾಡಿದ ಅವರು, ಸರ್ಕಾರ ರೈತರ ಸಾಲಮನ್ನಾ ಮಾಡಿದರೇ ನಾನು ಸಿಎಂ ಸಿದ್ದರಾಮಯ್ಯ ಅವರಿಗೆ ಸಾರ್ವಜನಿಕವಾಗಿ ಧನ್ಯವಾದ ಹೇಳುತ್ತೇನೆ ಎಂದು ತಿಳಿಸಿದ್ದಾರೆ,ರಾಷ್ಟ್ರೀಯ ಬ್ಯಾಂಕ್ ಗಳ ಸಾಲ ಮನ್ನಾ ಮಾಡಲಪ ಕೇಂದ್ರ ಸರ್ಕಾರ 32 ಸಾವಿರ ಕೋಟಿ ನೀಡಲಿದೆಯೇ ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದರು.
ವಿವಿಧ ಯೋಜನೆಗಳಡಿ ಕೇಂದ್ರ ಸರ್ಕಾರ ರಾಜ್ಯಕ್ಕೆ 1.95 ಲಕ್ಷ ಕೋಟಿ ಅನುದಾನ ನೀಡಿದೆ ಎಂದು ಬಿಎಸ್ ವೈ ವಿವರಿಸಿದರು. ಆಗಸ್ಟ್ ತಿಂಗಳ ಅಂತ್ಯದೊಳಗೆ ರಾಜ್ಯದ 22 ವಿಧಾನ ಸಭೆ ಕ್ಷೇತ್ರಗಳಲ್ಲೂ ಪ್ರವಾಸ ಮಾಡಲಾಗುವುದು ಎಂದು ಹೇಳಿದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಹಾರ್ಮುಜ್ ಜಲಸಂಧಿ' ದಿಗ್ಬಂಧನ ನಡುವೆ ಟ್ರಂಪ್-ಪ್ರಧಾನಿ ಮೋದಿ ದೂರವಾಣಿ ಸಂಭಾಷಣೆ! ಏನೆಲ್ಲಾ ಮಾತುಕತೆ ಆಯ್ತು?

ಅಮೆರಿಕದ ಹಾರ್ಮುಜ್ ದಿಗ್ಬಂಧನದಿಂದ ಇರಾನ್‌ಗೆ ದಿನಕ್ಕೆ ಅಂದಾಜು $435 ಮಿಲಿಯನ್ ನಷ್ಟ; ಆದರೂ ದೀರ್ಘಾವಧಿಯ ಬ್ಲಾಕೇಡ್ ಕಷ್ಟ!

ತಿರುಪ್ಪೂರ್: ಟಿವಿಕೆ ವಿಜಯ್ ಪ್ರಚಾರ ಕಾರ್ಯಕ್ರಮದಲ್ಲಿ ಮಾತ್ತೊಂದು ಅವಘಡ: ಕುಸಿದುಬಿದ್ದು 15 ಮಂದಿ ಆಸ್ಪತ್ರೆಗೆ ದಾಖಲು!

IPL 2026: ತವರು ನೆಲದಲ್ಲಿ ಕೆಕೆಆರ್ ವಿರುದ್ಧ ಗೆದ್ದು ಬೀಗಿದ CSK!

ನವದೆಹಲಿ: ಸಂಪುಟ ಪುನರ್ ರಚನೆಗೆ ಪಟ್ಟು, ಹಿರಿಯ ನಾಯಕರೊಂದಿಗೆ ಚರ್ಚಿಸದೆ ಬೆಂಗಳೂರಿಗೆ ವಾಪಸ್ ಆಗಲ್ಲ: ಅಶೋಕ್ ಪಟ್ಟಣ್

SCROLL FOR NEXT