ಸದನದಲ್ಲಿ ಸಿಎಂ ಸಿದ್ದರಾಮಯ್ಯ 
ರಾಜಕೀಯ

ಗುಜರಾತ್ ಅಲ್ಲ, ನನ್ನದು ಕರ್ನಾಟಕ ಅಭಿವೃದ್ಧಿ ಮಾದರಿ: ಸಿದ್ದರಾಮಯ್ಯ

: 2017-18ನ ಸಾಲಿನ ಬಜೆಟ್ ಮಂಡಿಸಿರುವ ಸಿಎಂ ಸಿದ್ದರಾಮಯ್ಯ ತಮ್ಮ ಆಯವ್ಯಯದ ಬಗ್ಗೆ ಹೆಮ್ಮೆಯಿಂದ...

ಬೆಂಗಳೂರು: 2017-18ನ ಸಾಲಿನ ಬಜೆಟ್ ಮಂಡಿಸಿರುವ ಸಿಎಂ ಸಿದ್ದರಾಮಯ್ಯ ತಮ್ಮ ಆಯವ್ಯಯದ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ.

ಅಧಿವೇಶನದಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಸಬ್ ಸಾಥ್ , ಸಬ್ ಕಾ ವಿಕಾಸ್ ಎಂಬ ಘೋಷಣೆಯಡಿ ಬಜೆಟ್ ಮಂಡಿಸಲಾಗಿದೆ, ನನ್ನದು ಕರ್ನಾಟಕ ಅಭಿವೃದ್ಧಿ ಮಾದರಿ, ಇದರಲ್ಲಿ ಸಮಾಜದ ಎಲ್ಲಾ ವರ್ಗಗಳ ಜನರ ಅಭಿವೃದ್ಧಿಯಿದೆ ಎಂದು ತಮ್ಮನ್ನು ತಾವೇ ಪ್ರಶಂಸಿಕೊಂಡಿದ್ದಾರೆ.

ಚುನಾವಣೆಯಲ್ಲಿ ಬಿಜೆಪಿಯವರು  ಅವರ ಮೋದಿ ಅಲೆ ಎಂದು ನೀಡುವ ಹೇಳಿಕೆಗೆ ಟಾಂಗ್ ನೀಡಿದ ಸಿದ್ದರಾಮಯ್ಯ ಬಿಜೆಪಿ ಈಗ ಗುಜರಾತ್ ಮಾದರಿ ಅಭಿವೃದ್ಧಿ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ, ಯುಪಿ ಮಾದರಿ ಬಗ್ಗೆ ಜಾಹೀರಾತು ನೀಡುತ್ತಿದ್ದಾರೆ ಎಂದು ಟೀಕಿಸಿದರು.

ನಾವು ನಮ್ಮದೇ ಅಭಿವೃದ್ಧಿ ಮಾದರಿ ಹೊಂದಿದ್ದೇವೆ, ಅದು ಕರ್ನಾಟಕ ಅಭಿವೃದ್ಧಿ ಮಾದರಿ, ಅದರಂತೆಯೇ ನಾವು ನಡೆಯುತ್ತೇವೆ, ನಂಜನಗೂಡು ಮತ್ತು ಗುಂಡ್ಲು ಪೇಟೆ ವಿಧಾನಸಭೆ ಉಪ ಚುನಾವಣೆ ಮತ್ತು ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಅದರ ಅಡಿಯಲ್ಲೇ ಸ್ಪರ್ಧಿಸುತ್ತೇವೆ ಎಂದು ಸಿಎಂ ಹೇಳಿದ್ದಾರೆ.

ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಉಪ ಚುನಾವಣೆಲ್ಲಿ ಜಯ ಗಳಿಸುತ್ತೇವೆ ಎಂಭ ಭ್ರಮೆಯಲ್ಲಿ ಕಾಂಗ್ರೆಸ್ ಮುಳುಗಿದೆ ಎಂದು ಅವರು ವ್ಯಂಗ್ಯವಾಡಿದರು.

ಹಲವು ಯೋಜನೆಗಳನ್ನು ಜಾರಿಗೆ ತಂದಿರುವುದು ಸರ್ಕಾರದ ಕಾರ್ಯ ವೈಖರಿಯನ್ನು ತೋರಿಸುತ್ತದೆ. ನಾವು ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿಯ ಕಡೆ ನಮ್ಮ ಗಮನವ ಹರಿಸಿದ್ದೇವೆ ಎಂದು ಹೇಳಿದ ಸಿದ್ದರಾಮಯ್ಯ, ಚನಾವಣೆ ವೇಳೆ ಪ್ರಣಾಳಿಕೆಯಲ್ಲಿ ನೀಡಿದ್ದ  165 ಆಶ್ವಾಸನೆಗಳ ಪೈಕಿ ಶೇ.90 ರಷ್ಟು ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Parliament special session: ಅಗ್ನಿ ಪರೀಕ್ಷೆಯಲ್ಲಿ ಮೋದಿ ಸರ್ಕಾರ, ಇಂದು ಪಾಸ್ ಆಗುತ್ತಾ ಪ್ರಮುಖ ಮಸೂದೆಗಳು?

'ಇರಾನ್ ತನ್ನ ಸಮೃದ್ಧ ಯುರೇನಿಯಂ ಸಂಗ್ರಹವನ್ನು ಹಸ್ತಾಂತರಿಸಲು ಒಪ್ಪಿಕೊಂಡಿದೆ, ಶಾಂತಿ ಒಪ್ಪಂದ ಹತ್ತಿರದಲ್ಲಿದೆ': Donald Trump

ಕಾಳಿ ಮಾತೆಯ ಬಣ್ಣ ಕಪ್ಪು: ಪ್ರಧಾನಿ ನರೇಂದ್ರ ಮೋದಿಯ 'ಕಾಲ ಟಿಕಾ' ಟೀಕೆ ವಿರುದ್ಧ ಕನ್ನಿಮೋಳಿ ಆಕ್ರೋಶ!

ಇನ್ಮುಂದೆ ನೇಚರ್ ಗೈಡ್, GPS ವಾಕಿಟಾಕಿ ಇಲ್ಲದೆ ಯಾರಿಗೂ ಚಾರಣಕ್ಕೆ ಅವಕಾಶವಿಲ್ಲ: SOP ಬಿಡುಗಡೆ ಮಾಡಿದ ಸಚಿವ ಈಶ್ವರ ಖಂಡ್ರೆ!

ವಿಜ್ಞಾನ-ತಂತ್ರಜ್ಞಾನ ಕ್ಷೇತ್ರ: ಮಹಿಳೆಯರದ್ದು ಪ್ರಧಾನ ಪಾತ್ರ; ಕೇವಲ ಪಾಲ್ಗೊಳ್ಳುವುದಲ್ಲ, ನಾಯಕತ್ವಕ್ಕೂ ಬೇಕು ನಾರಿ ಶಕ್ತಿ

SCROLL FOR NEXT