ಚಳಿಗಾಲದ ಅಧಿವೇಶನಕ್ಕೆ ರಾಜಕೀಯ ಪಕ್ಷಗಳ ಯಾತ್ರೆಗಳ ಅಡ್ಡಿ!
ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರಬರುತ್ತಿರುವ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳು ಜನರ ಮನವೊಲಿಸಲು ಸಾಕಷ್ಟು ಕಸರತ್ತುಗಳನ್ನು ಮಾಡುತ್ತಿದೆ. ಇದರಂತೆ ಜೆಡಿಎಸ್ ಹಾಗೂ ಬಿಜೆಪಿ ತಮ್ಮ ರಾಜಕೀಯ ಯಾತ್ರೆಗಳನ್ನು ಆರಂಭಿಸಿದ್ದು, ರಾಜಕೀಯ ಪಕ್ಷಗಳ ರಾಜಕೀಯ ಯಾತ್ರೆ ಇದೀಗ ಬೆಳಗಾವಿ ಸುವರ್ಣಸೌಧದದಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದ ಮೇಲೆ ಪರಿಣಾಮ ಬೀರತೊಡಗಿದೆ.
ಕುಂದಾ ನಗರಯಲ್ಲಿ ಆರಂಭಗೊಂಡ ವಿಧಾನಮಂಡಲದ ಅಧಿವೇಶನದ ಬಗ್ಗೆ ಉತ್ತರ ಕರ್ನಾಟಕ ಕುತೂಹಲದಿಂದ ಕಾದಿತ್ತಾದರೂ ಶಾಸಕರಲ್ಲಿ ಮಾತ್ರ ಇದರ ಬಗ್ಗೆ ಉತ್ಸಾಹ ಕಂಡು ಬಂದಿರಲಿಲ್ಲ. ಮೊದಲ ದಿನಗ ಕಲಾದಲ್ಲಿ ವಿಧಾನಸಭೆಗೆ ಬಂದ ಶಾಸಕರ ಸಂಖ್ಯೆ 224ರಲ್ಲಿ 74 ಮಾತ್ರ ಕಂಡು ಬಂದಿತ್ತು.
ಚಳಿಗಾಲ ಅಧಿವೇಶನದ ಮೊದಲ ದಿನವೇ ವಿಧಾನಸಭೆಯಲ್ಲಿ ಶಾಸಕರ ಸಂಖ್ಯೆಯ ಕೊರತೆ ಎದುರಾದ ಕಾರಣ ಸ್ಪೀಕರ್ ಕೆ.ಬಿ. ಕೋಳಿವಾಡ ಸರ್ಕಾರದ ವಿರುದ್ಧ ಸಾತ್ವಿಕ ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆಯನ್ನು ಆರಂಭಿಸಿದ್ದರೆ, ಜೆಡಿಎಸ್ ಕರ್ನಾಟಕ ವಿಕಾಸ ಯಾತ್ರೆಯನ್ನು ಆರಂಭಿಸಿದೆ. ರಾಜಕೀಯ ಪಕ್ಷಗಳು ರಾಜಕೀಯ ಯಾತ್ರೆಗಳನ್ನು ಆರಂಭಿಸಿರುವ ಹಿನ್ನಲೆಯಲ್ಲಿ ಆಯಾ ಪಕ್ಷದ ಶಾಕರು ಯಾತ್ರೆಗಳಲ್ಲಿ ತೊಡಗಿಕೊಂಡಿರುವುದರಿಂದ ಅಧಿವೇಶನದ ಮೇಲೆ ಇದರ ಗಂಭೀರ ಪರಿಣಾಮ ಬಿದ್ದಿದೆ ಎಂದು ಹೇಳಲಾಗುತ್ತಿದೆ.
ಕರ್ನಾಟಕ ವಿಕಾಸ ಯಾತ್ರೆ ನಡೆಸುತ್ತಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿಯವಲು ಇಂದು ಬೆಳಗಾವಿಗೆ ಭೇಟಿ ನೀಡಲಿದ್ದಾರೆ. ಬೆಳಗಾವಿಯಲ್ಲಿ ಕುಮಾರ ಪರ್ವ ಯಾತ್ರೆಯನ್ನುದ್ದೇಶಿಸಿ ಕುಮಾರಸ್ವಾಮಿಯವರು ಭಾಷಣ ಮಾಡಲಿದ್ದಾರೆ. ರ್ಯಾಲಿಯನ್ನು ಯಶಸ್ವಿಗೊಳಿಸಲು ಪಕ್ಷದ ಶಾಸಕರು ಭಾಗಿಯಾಗುತ್ತಿದ್ದಾರೆಂದು ಹೇಳಲಾಗುತ್ತಿದೆ.
ಜೆಡಿಎಸ್ ಎಂಎಲ್'ಸಿ ರಮೇಶ್ ಬಾಬು ಅವರು ಮಾತನಾಡಿ, ರ್ಯಾಲಿಯಲ್ಲಿ ಜೆಡಿಎಸ್ ಶಾಸಕರು ಪಾಲ್ಗೊಳ್ಳುತ್ತಿದ್ದಾರೆ. ಮಧ್ಯಾಹ್ನದ ಬಳಿಕ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆಂದು ಹೇಳಿದ್ದಾರೆ.
ಇನ್ನು ರಾಜ್ಯದಲ್ಲಿ ಪರಿವರ್ತನಾ ರ್ಯಾಲಿ ನಡೆಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ನ.16 ರಂದು ಬೆಳಗಾವಿಗೆ ಭೇಟಿ ನೀಡಲಿದ್ದಾರೆ. ಬೆಳಗಾವಿಯಲ್ಲಿ ನಡೆಯಲಿರುವ ಪರಿವರ್ತನಾ ರ್ಯಾಲಿಯಲ್ಲಿ ಬಿಜೆಪಿ ಪಕ್ಷದ ಬಹುತೇಕ ನಾಯಕರು ಪಾಲ್ಗೊಳ್ಳಳಿದ್ದಾರೆ. ಬೆಳಗಾವಿಯಲ್ಲಿ ಒಟ್ಟು 4 ದಿನಗಳ ಕಾಲ ರ್ಯಾಲಿ ನಡೆಯಲಿದ್ದು, ಅಧಿವೇಶನದ ನಡುವೆಯೂ ರ್ಯಾಲಿಗೆ ಭಾರೀ ಸಿದ್ಧತೆಗಳು ನಡೆಯುತ್ತಿವೆ.