ಮಂಗಳೂರು: ಬಿಜೆಪಿ ಕೋರ್ ಸಮಿತಿ ಜತೆ ತುರ್ತು ಸಭೆ ಹಿನ್ನಲೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮಂಗಳೂರು ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.
ಬುಧವಾರ ಅಮಿತ್ ಶಾ ಅವರು ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ದೆಹಲಿಯಲ್ಲಿ ತುರ್ತು ಸಭೆ ಹಿನ್ನೆಲೆಯಲ್ಲಿ ಮಂಗಳೂರಿಗೆ ಆಗಮಿಸಿದ ಅಮಿತ್ ಶಾ ಅವರು ರಾತ್ರಿಗೆ ದೆಹಲಿಗೆ ಪ್ರಯಾಣಿಸಲಿದ್ದು ನಾಳಿನ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ದಕ್ಷಿಣ ಕನ್ನಡ ಬಿಜೆಪಿ ಅಧ್ಯಕ್ಷ ಸಜೀವ್ ಮಟಂದೂರ್ ಹೇಳಿದ್ದಾರೆ.
ಮಂಗಳೂರಿನ ಟಿಎಂಎ ಪೈ ಹಾಲ್ ನಲ್ಲಿ ಅಮಿತ್ ಶಾ ಅವರು ನಾಳೆ ವೈದ್ಯರು, ವಕೀಲರು ಹಾಗೂ ವೃತ್ತಿಪರರು ಸೇರಿದಂತೆ 2 ಸಾವಿರ ಮಂದಿ ಜತೆ ಮಾತುಕತೆ ನಡೆಸಬೇಕಿತ್ತು. ಈಗಾಗಲೇ 1800 ಮಂದಿ ನೋಂದಾಯಿಸಿಕೊಂಡಿದ್ದರು ಎಂದು ಸಜೀವ್ ಹೇಳಿದ್ದಾರೆ.