ಬೆಂಗಳೂರು: ಬೆಂಗಳೂರನ್ನು ನಾಶ ಮಾಡಿದವರು ಕಾಂಗ್ರೆಸ್ಸಿಗರು, ಬೆಂಗಳೂರನ್ನು ಕೊಂದವರು ಕಾಂಗ್ರೆಸ್ಸಿಗರು, ಬೆಂಗಳೂರು ಮುಳುಗುವಂತೆ ಮಾಡಿದವರು ಕಾಂಗ್ರೆಸ್ಸಿಗರು, ಇದು ಮಾಜಿ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಆರೋಪ, ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ಬಿಎಸ್ ವೈ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಮಳೆ ಬಂದರೆ ಬೆಂಗಳೂರು ರಸ್ತೆಗಳು ಪ್ರವಾಹ ದಂತಾಗುತ್ತವೆ, ರಸ್ತೆಗಳ ಗುಂಡಿಗಳಿಂದಾಗಿ ಅನೇಕ ನಾಗರಿಕರು ಜೀವ ಕಳೆದುಕೊಳ್ಳುವಂತಾಗಿದೆ. ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿದೆ, ಬೆಂಗಳೂರು ಮೂಲಭೂತ ಸೌಕರ್ಯ ಹದಗೆಡಿಸಿರುವ ಕಾಂಗ್ರೆಸ್ ಗೆ ನಾಚಿಕೆಯಾಗಬೇಕು ಎಂದು ಆರೋಪಿಸಿದ್ದಾರೆ.
ಬೆಂಗಳೂರು ಅಭಿವೃದ್ಧಿ ಹೆಸರಿನಲ್ಲಿ ಸಿದ್ದರಾಮಯ್ ಸರ್ಕಾರ ಲೂಟಿ ಮಾಡುತ್ತಿದೆ ಎಂದು ದೂರಿದ್ದಾರೆ. ಬೆಂಗಳೂರು ನಗರವೊಂದರಲ್ಲೇ 28 ವಿಧಾನಸಭೆ ಕ್ಷೇತ್ರಗಳಿದ್ದು, ಮಿಷನ್ 150 ಗೆ ಬೆಂಗಳೂರು ನಗರ ಬಹಳ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ಯಡಿಯೂರಪ್ಪ ಅಭಿಪ್ರಾಯ.
ಇನ್ನೂ ಚುನಾವಣಾ ತಂತ್ರದ ಬಗ್ಗೆ ಮಾತನಾಡಿದ ಯಡಿಯೂರಪ್ಪ, ಪರಿವರ್ತನಾ ಯಾತ್ರೆ ಮೂಲಕ ವಿಧಾನಸಭೆ ಚುನಾವಣಾ ಪ್ರಚಾರ ಆರಂಭಿಸುವುದಾಗಿ ಹೇಳಿದ್ದಾರೆ. ನವೆಂಬರ್ 2 ರಿಂದ ಪರಿವರ್ತನಾ ಯಾತ್ರೆ ಆರಂಭವಾಗಲಿದ್ದು, ರಾಜ್ಯದ 224 ವಿಧಾನ ಸಭೆ ಕ್ಷೇತ್ರಗಳಲ್ಲಿನ ಜನತೆಯನ್ನು ತಲುಪುವುದಾಗಿ ತಿಳಿಸಿದ್ದಾರೆ.
ಈ ವೇಳೆ ರಾಜ್ಯದ ಜನತೆಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ, ವಿವಿಧ ಜನಪರ ಕಾರ್ಯಕ್ರಮಗಳ ಬಗ್ಗೆ ಹಾಗೂ ಸಿದ್ದರಾಮಯ್ಯ ಸರ್ಕಾರದ ವೈಫಲ್ಯಗಳ ಬಗ್ಗೆ ಜನರಿಗೆ ತಿಳಿಸಲಾಗುವುದು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics