ಗೌರಿ ಲಂಕೇಶ್ 
ರಾಜಕೀಯ

'ಚಡ್ಡಿಗಳ ಮಾರಣ ಹೋಮ' ಎಂದು ಬರೆಯದಿದ್ದರೆ ಗೌರಿ ಲಂಕೇಶ್ ಹತ್ಯೆಯಾಗ್ತಿತ್ತಾ?: ಬಿಜೆಪಿ ಶಾಸಕ ಜೀವರಾಜ್ ವಿವಾದಾತ್ಮಕ ಹೇಳಿಕೆ

ಪತ್ರೆಕರ್ತೆ ಗೌರಿ ಲಂಕೇಶ್ ಅವರು 'ಚಡ್ಡಿಗಳ ಮಾರಣ ಹೋಮ' ಎಂದು ತಮ್ಮ ಪತ್ರಿಕೆಯಲ್ಲಿ ಬರೆಯದಿದ್ದರೆ ಇವತ್ತು ಅವರ ಹತ್ಯೆಯಾಗುತ್ತಿತ್ತಾ?....

ಚಿಕ್ಕಮಗಳೂರು: ಪತ್ರೆಕರ್ತೆ ಗೌರಿ ಲಂಕೇಶ್ ಅವರು 'ಚಡ್ಡಿಗಳ ಮಾರಣ ಹೋಮ' ಎಂದು ತಮ್ಮ ಪತ್ರಿಕೆಯಲ್ಲಿ ಬರೆಯದಿದ್ದರೆ ಇವತ್ತು ಅವರ ಹತ್ಯೆಯಾಗುತ್ತಿತ್ತಾ? ಎಂದು ಪ್ರಶ್ನಿಸುವ ಮೂಲಕ ಶೃಂಗೇರಿಯ ಬಿಜೆಪಿ ಶಾಸಕ ಡಿ.ಎನ್. ಜೀವರಾಜ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಿನ್ನೆ ಕೊಪ್ಪದಲ್ಲಿ 'ಮಂಗಳೂರು ಚಲೋ' ಜಾಥಾಗೆ ಚಾಲನೆ ನೀಡಿದ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದು, ಶಾಸಕರ ವಿವಾದಾತ್ಮಕ ಹೇಳಿಕೆ ಈಗ ವೈರಲ್ ಆಗಿದೆ.
ಬಹಿರಂಗ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದ ಡಿ.ಎನ್. ಜೀವರಾಜ್ ಅವರು "ಪತ್ರಿಕೆಯಲ್ಲಿ 'ಚಡ್ಡಿಗಳ ಮಾರಣ ಹೋಮ' ಎಂದು ಬರಿಯದ್ದಿದ್ರೆ ಇವತ್ತು ಗೌರಿ ಲಂಕೇಶ್ ಹತ್ಯೆಯಾಗ್ತಿತ್ತಾ? ಇವತ್ತು ಗೌರಿ ಲಂಕೇಶ್ ಉಳಿಯುತ್ತಿದ್ದರಲ್ಲಾ?," ಎಂದು ವೀರಾವೇಷದ ಭಾಷಣ ಮಾಡಿದ್ದಾರೆ. 
ಇನ್ನು ಬಿಜೆಪಿ ಶಾಸಕರ ಹೇಳಿಕೆ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, "ತಮ್ಮ ಪತ್ರಿಕೆಯಲ್ಲಿ ಗೌರಿ ಅವರು ಸಂಘ ಪರಿವಾರದ ಅವಹೇಳನ ಮಾಡದೇ ಹೋಗಿದ್ದರೆ ಹತ್ಯೆ ಆಗುತ್ತಿರಲಿಲ್ಲ ಎಂದು ಬಿಜೆಪಿ ಶಾಸಕರೇ ಹೇಳಿರುವುದು ಏನು ಸಂದೇಶ ನೀಡುತ್ತದೆ?" ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಜೀವರಾಜ್ ಹೇಳಿಕೆ ಕುರಿತು ಗೃಹ ಕಚೇರಿ ಕೃಷ್ಣಾದಲ್ಲಿ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಶಾಸಕರ ಈ ಹೇಳಿಕೆಯ ಅರ್ಥವೇನು? ಹತ್ಯೆ ಹಿಂದೆ ಯಾರಿದ್ದಾರೆ ಎಂಬುದು ಇದರಿಂದ ಅರ್ಥ ಆಗುವುದಿಲ್ಲವೇ? ಎಂದರು.
ವಿವಾದಾತ್ಮಕ ಹೇಳಿಕೆ ವೈರಲ್ ಆಗುತ್ತಿದ್ದಂತೆ ಸಮಜಾಯಿಷಿ ನೀಡಿರುವ ಜೀವರಾಜ್, ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ, "ಗೌರಿ ಲಂಕೇಶ್ ಹತ್ಯೆಯನ್ನು ನಾನು ಖಂಡಿಸುತ್ತೇನೆ. ಗೌರಿ ಲಂಕೇಶ್ ಮತ್ತು ಸಿದ್ದರಾಮಯ್ಯ ಆಪ್ತರಾಗಿದ್ದರು. ಕಲಬುರ್ಗಿ ಹಂತಕರನ್ನು ಬಂಧಿಸಿದ್ದರೆ ಈ ಅಪರಾಧ ತಡೆಯಬಹುದಾಗಿತ್ತು," ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವರ್ತನೆ ಬದಲಿಸಿಕೊಳ್ಳಿ, ಒಪ್ಪಂದ ಸಂಪೂರ್ಣವಾಗಿ ಪಾಲಿಸಬೇಕು: ಇರಾನ್‌ಗೆ JD ವ್ಯಾನ್ಸ್ ಎಚ್ಚರಿಕೆ

ಕರ್ನಾಟಕ ವಿಧಾನ ಪರಿಷತ್ ಚುನಾವಣೆ: 7ರಲ್ಲಿ 5 ಸ್ಥಾನ ಕಾಂಗ್ರೆಸ್ ಪಾಲು, ಬಿಜೆಪಿಗೆ 2, ಜೆಡಿಎಸ್‌ಗೆ ಅಡ್ಡ ಮತದಾನದ ಆಘಾತ

ಪರಿಷತ್ ಚುನಾವಣೆ: ಬಿಜೆಪಿಯ 3 ಶಾಸಕರಿಂದ ಅಡ್ಡಮತದಾನ, ಸಿಕ್ಕೇ ಸಿಗ್ತಾರೆ.. ಶಿಸ್ತುಕ್ರಮ ಗ್ಯಾರಂಟಿ: R Ashok

BJP-JDS ಅಡ್ಡ ಮತದಾನದಿಂದ Congress 5ನೇ ಅಭ್ಯರ್ಥಿ ಜಯ; ಇದು ಪ್ರಜಾಪ್ರಭುತ್ವದ ಗೆಲುವು: ಸುರ್ಜೇವಾಲಾ

Bihar Horror: ಯಜಮಾನನ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ, ಗುಪ್ತಾಂಗದಲ್ಲಿ ಜೀವಂತ ಬುಲೆಟ್, ಕಲ್ಲು, ಮರದ ತುಂಡು ಪತ್ತೆ!

SCROLL FOR NEXT