ರಾಜಕೀಯ

ಕೃಷ್ಣರಾಜ ವಿಧಾನಸಭೆ ಕ್ಷೇತ್ರ: ಟಿಕೆಟ್ ಗಾಗಿ ಬಿಜೆಪಿಯಲ್ಲಿ ಶುರುವಾಗಿದೆ ಲಾಬಿ

Shilpa D
ಮೈಸೂರು: ಮುಂಬರುವ ವಿಧಾನಸಭೆ ಚುನಾವಣೆಗಾಗಿ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಕೆಲವೇ ದಿನಗಳಲ್ಲಿ ಪ್ರಕಟಿಸಲಿದೆ, ಹೀಗಾಗಿ ಕೃಷ್ಣರಾಜ ವಿಧಾನಸಭೆ ಕ್ಷೇತ್ರದ ಟಿಕೆಟ್ ಗಾಗಿ ಲಾಬಿ ಆರಂಭವಾಗಿದೆ,
ಬಿಜೆಪಿಯ ಸುರಕ್ಷಿತ ಕ್ಷೇತ್ರವೆಂದು ಪರಿಗಣಿಸಲ್ಪಟ್ಟಿದ್ದ ಕೃಷ್ಣರಾಜ ಕ್ಷೇತ್ರದಲ್ಲಿ 2013ರಲ್ಲಿ ಕಾಂಗ್ರೆಸ್ ಜಯ ಗಳಿಸಿತ್ತು. ಈ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದ ಬ್ರಾಹ್ಮಣರಿದ್ದು, ಕಳೆದ 8 ಬಾರಿಯೂ  ಬ್ರಾಹ್ಮಣ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದರು. ಎಸ್ ಎ ರಾಮದಾಸ್ ಕೂಡ ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದರು.
ಒಕ್ಕಲಿಗ ಸಮುದಾಯದ ವೆಂಕಟಯ್ಯ ಸಾಹುಕಾರ್ ಚನ್ನಯ್ಯ, ಲಿಂಗಾಯತ ಸಮುದಾಯದ ಗಂಗಾಧಾರಣ ಮತ್ತು ಹಿಂದುಳಿದ ವರ್ಗಗಳ ಸಮುದಾಯದಿಂದ ಎಂ.ಕೆ ಸೋಮಶೇಖರ್ ಕೂಡ ಇದೇ ಕ್ಷೇತ್ರದಿಂದ ಗೆದ್ದು ಬಂದಿದ್ದರು. 
ಚುನಾವಣಾ ಅಕ್ರಮಗಳುಹಾಗೂ ಕಸದ ಸಮಸ್ಯೆಗಳಂತ ವಿಷಯಗಳನ್ನಿಟ್ಟುಕೊಂಡು ಮಾಜಿ ಸಚಿವ ಎಸ್ .ಎ ರಾಮದಾಸ್ ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದಾರೆ. ಆದರೆ ವಿವಿಧ ಕಾರಣಗಳಿಗಾಗಿ ಯಡಿಯೂರಪ್ಪ ಅವರಿಗೆ ರಾಮದಾಸ್ ಹಿಡಿಸುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಮುಡಾ ಮಾಜಿ ಅಧ್ಯಕ್ಷ ಕೆಆರ್ ಮೋಹನ್ ಕುಮಾರ್ ಅವರನ್ನು ಕ್ಷೇತ್ರಕ್ಕೆ ಕರೆತಂದಿರುವ ಶ್ರೀನಿವಾಸ್ ಪ್ರಸಾದ್ ರಾಮದಾಸ್ ಅವರಿಗೆ ಸಮಸ್ಯೆ ಉಂಟು ಮಾಡಿದ್ದಾರೆ,
ಮುಡಾ ಅಧ್ಯಕ್ಷರಾಗಿದ್ದಾಗ ಅವರ ಆಡಳಿತ ವೈಖರಿ, ಕ್ಲೀನ್ ಇಮೇಜ್, ಹಾಗೂ ನರೇಂದ್ರ ಮೋದಿ ಸರ್ಕಾರದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಬಗೆಗಿನ ಪ್ರಚಾರ ಮೋಹನ್ ಕುಮಾರ್ ಅವರಿಗೆ ವರವಾಗಿ ಪರಿಣಮಿಲುವ ಸಾಧ್ಯತೆಯಿದೆ,
ಕ್ಷೇತ್ರದ ಲಿಂಗಾಯತ ಮತ್ತು ದಲಿತ ಸಮುದಾಯಗಳ  ಒಡನಾಟದ ಜೊತೆಗೆ ಬ್ರಾಹ್ಮಣ ಮಹಸಭಾ ಮತ್ತಿತರ ಚಟುವಟಿಗಳಲ್ಲೂ ಭಾಗವಹಿಸಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ತೀರ್ಮಾನಿಸಿರುವ ಶ್ರೀನಿವಾಸ್ ಪ್ರಸಾದ್, ಕೆ.ಆರ್ ಕ್ಷೇತ್ರ, ಕೊಳ್ಳೇಗಾಲ ಮತ್ತು ನಂಜನಗೂಡು ವಿಧಾನಸಭೆ ಕ್ಷೇತ್ರಗಳಲ್ಲಿ  ತಮ್ಮ ಬೆಂಬಲಿಗ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತಯಾರಿ ನಡೆಸಿದ್ದಾರೆ. 
SCROLL FOR NEXT