ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ 
ರಾಜಕೀಯ

ಸಿದ್ದರಾಮಯ್ಯ ಬಾಸ್, ಅವರೇ ಮುಂದಿನ ಸಿಎಂ: ರಾಹುಲ್ ಗಾಂಧಿ

: ಒಂದು ವೇಳೆ ಕಾಂಗ್ರೆಸ್ ಪಕ್ಷ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೇ ಸಿದ್ದರಾಮಯ್ಯ ಆವರೇ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ರಾಹುಲ್ ಗಾಂಧಿ ...

ಬೆಂಗಳೂರು: ಒಂದು ವೇಳೆ ಕಾಂಗ್ರೆಸ್ ಪಕ್ಷ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೇ ಸಿದ್ದರಾಮಯ್ಯ ಆವರೇ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ರಾಹುಲ್ ಗಾಂಧಿ ಘೋಷಿಸಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ, ಪರಮೇಶ್ವರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ರಾಹುಲ್, ಪಕ್ಷ ಅಧಿಕಾರಕ್ಕೆ ಬಂದರೇ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ.ಯಾಗಲಿದ್ದಾರೆ ಎಂದು ರಾಹುಲ್ ಘೋಷಿಸಿದ್ದಾರೆ.
ಇನ್ನೂ ಸಿಎಂ ಸಿದ್ದರಾಮಯ್ಯ ಎರಡು ವಿಧಾನಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಎಲ್ಲಾ ಸ್ವಾತಂತ್ರ್ಯವನ್ನು ಸಿದ್ದರಾಮಯ್ಯ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಅವರಿಗೆ ನೀಡಲಾಗಿದೆ ಎಂದು ಹೇಳಿದರು.
ಈ ವೇಳೆ ಮೋದಿ ಸರ್ಕಾರದ ಬಗ್ಗೆ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ನಾಗಪುರದಿಂದ ಆರ್ ಎಸ್ ಎಸ್ ಕೇಂದ್ರ ಸರ್ಕಾರವನ್ನು ನಡೆಸುತ್ತಿದೆ, ಪ್ರಧಾನಿ ನರೇಂದ್ರ ಮೋದಿ ಉತ್ತರ ಭಾರತ ಮತ್ತುಪ ದಕ್ಷಿಣ ಭಾರತ ಎಂದು ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮಹಾತ್ಮ ಗಾಂಧಿಯವರ ಮಿಲಿಯಮ್ ದಂಗೆಗಳು ಎಂಬ ಪ್ರಸ್ತಾಪಿಸಿದ ರಾಹುಲ್, ಇಂದು ಭಾರತದಲ್ಲಿ ಲಕ್ಷಾಂತರ ದಂಗೆಗಳು ನಡೆಯುತ್ತವೆ, ದೇಶವನ್ನು ನಡೆಸಲು ಅಸಕ್ತರಾಗಿದ್ದಾರೆ, ಹೀಗಾಗಿ ದಲಿತರು ಮತ್ತು ಬುಡಕಟ್ಟು ಜನಾಂಗದವರು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

LPG ಗ್ರಾಹಕರಿಗೆ ಕೇಂದ್ರದ ಭರ್ಜರಿ ರಿಲೀಫ್: ಗ್ಯಾಸ್ ಸಿಲಿಂಡರ್ ಬುಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ 25 ದಿನಕ್ಕೆ ಮತ್ತೊಂದು ಸಿಲಿಂಡರ್!

ಹಿಂದು ಧಾರ್ಮಿಕ ನಿಯೋಗ ಭೇಟಿ ವೇಳೆ ಮಹಿಳಾ ಸಿಬ್ಬಂದಿಗೆ ನಿರ್ಬಂಧ? ಪ್ಯಾರಿಸ್‌ನ Eiffel Tower ಬಂದ್, ಭಾರೀ ವಿವಾದ..!

ಮೆಜೆಸ್ಟಿಕ್‌ನಲ್ಲಿ ಜನಜಂಗುಳಿ, ಇಲ್ಲೆಲ್ಲಾ ಬಿಕೋ! ನಮ್ಮ ಮೆಟ್ರೋದ 20ಕ್ಕೂ ಹೆಚ್ಚು ಸ್ಟೇಷನ್‌ಗಳಲ್ಲಿ ಪ್ರಯಾಣಿಕರೇ ಇಲ್ಲ! ಅಸಲಿ ಕಾರಣವೇನು?

ಕೂಲ್.. ಕೂಲ್.. ಬೆಂಗಳೂರಿಗೆ ಏನಾಯ್ತು..? ಸೆಪ್ಟೆಂಬರ್‌ನಲ್ಲೇ ಏಪ್ರಿಲ್‌ ತಿಂಗಳ ಬಿಸಿಲು; 32 ಡಿಗ್ರಿ ದಾಟಿದ ತಾಪಮಾನ, ಸಿಲಿಕಾನ್‌ ಸಿಟಿ ಜನತೆ ಹೈರಾಣ..!

ಸೆ.20 ರಿಂದ 108 ಸೇವೆ ಬಂದ್: ಸರ್ಕಾರಕ್ಕೆ ಸಿಬ್ಬಂದಿ ಡೆಡ್‌ಲೈನ್; 3,500 ನೌಕರರಿಂದ ಸಾಮೂಹಿಕ ರಾಜೀನಾಮೆ ಎಚ್ಚರಿಕೆ!