ರಾಜಕೀಯ

ವಿಧಾನಸಭೆ ಚುನಾವಣೆ: ಮಹಿಳಾ ಪರ ಪ್ರಣಾಳಿಕೆ ಬಿಡುಗಡೆ ಮಾಡಿದ ಎಂಇಪಿ

Sumana Upadhyaya

ಬೆಂಗಳೂರು: ಮೇ 12ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಅಖಿಲ ಭಾರತ ಮಹಿಳಾ ಸಶಕ್ತೀಕರಣ ಪಕ್ಷ(ಎಂಇಪಿ) ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
 
ಪಕ್ಷ ಅಧಿಕಾರಕ್ಕೆ ಬಂದರೆ ಸ್ಥಳೀಯ ಸಂಸ್ಥೆಗಳಲ್ಲಿ ಶೇಕಡಾ 50ರಷ್ಟು ಸ್ಥಾನ ಮಹಿಳೆಯರಿಗೆ ಮೀಸಲು, ಎಲ್ಲಾ ಜಿಲ್ಲೆಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಆಸ್ಪತ್ರೆಗಳು ಮತ್ತು ಮಹಿಳಾ ಉದ್ಯಮಿಗಳಿಗೆ ಬಡ್ಡಿರಹಿತ ಸಾಲಗಳ ಭರವಸೆ ನೀಡಿದೆ.

ಎಂಇಪಿ ಅಧ್ಯಕ್ಷೆ ನೌಹೆರಾ ಶೇಕ್ ಮಾತನಾಡಿ, ಸಮಾಜದಲ್ಲಿನ ನಿರ್ಗತಿಕ ಮತ್ತು ತುಳಿತಕ್ಕೊಳಗಾದ ಜನರನ್ನು ಅಭಿವೃದ್ಧಿಪಡಿಸುವುದು ಪಕ್ಷದ ಪ್ರಮುಖ ಗುರಿಯಾಗಿದೆ. ಧ್ವನಿಯಿಲ್ಲದ ಮಹಿಳೆಯರಿಗೆ ಧ್ವನಿಯಾಗುವುದು ಮತ್ತು ಸಮಾಜದಲ್ಲಿ ತಾರತಮ್ಯ ಎದುರಿಸುತ್ತಿರುವ ಆರ್ಥಿಕವಾಗಿ ದುರ್ಬಲರಾಗಿರುವ ಮಹಿಳೆಯರ ಏಳಿಗೆ ನಮ್ಮ ಆದ್ಯತೆಯಾಗಿದೆ ಎಂದು ಪ್ರಣಾಳಿಕೆ ಬಿಡುಗಡೆ ಮಾಡಿದ ನಂತರ ಹೇಳಿದರು.

ಬಿಪಿಎಲ್ ವರ್ಗದವರ ಮಕ್ಕಳಿಗೆ ಸ್ನಾತಕೋತ್ತರ ಪದವಿಯವರೆಗೆ ಉಚಿತ ಶಿಕ್ಷಣ, ಉಚಿತ ತರಬೇತಿ ಮತ್ತು ಬಡ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಉಚಿತ ತರಬೇತಿ ಮತ್ತು ಪ್ರತಿವರ್ಷ ರಾಜ್ಯದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಯ ಭರವಸೆಯನ್ನು ಮಹಿಳಾ ಸಶಕ್ತೀಕರಣ ಪಕ್ಷ ನೀಡಿದೆ.

ಮುಂಬರುವ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಪಕ್ಷ ಸ್ಪರ್ಧಿಸಲಿದೆ.

SCROLL FOR NEXT