ರಾಜಕೀಯ

ಶಾಪವಾಗಲಿದೆಯೇ ನಲಪಾಡ್ ಹಲ್ಲೆ ಪ್ರಕರಣ: ಶಾಂತಿನಗರ ಶಾಸಕ ಹ್ಯಾರಿಸ್ ಹಣೆಬರಹ ರಾಹುಲ್ 'ಕೈ'ಯಲ್ಲಿ

Shilpa D
ಬೆಂಗಳೂರು: ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಶಾಂತಿನಗರ ಶಾಸಕ ಎನ್ ಎ ಹ್ಯಾರಿಸ್ ಅವರಿಗೆ  ಟಿಕೆಟ್ ಕೊಡುವಂತೆ ಶಿಪಾರಸು ಮಾಡಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹ್ಯಾರಿಸ್ ಹಣೆ ಬರಹ ನಿರ್ಧರಿಸಲಿದ್ದಾರೆ.
ಕಾಂಗ್ರೆಸ್ ಕೇಂದ್ರ ಸಮತಿ ಏಪ್ರಿಲ್ 13 ರಂದು ಸಭೆ ಸೇರಲಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಿದೆ. ತಮ್ಮ ಪುತ್ರ ಮೊಹಮದ್ ನಲಪಾಡ್ ಫರ್ಜಿ ಕೆಫೆಯಲ್ಲಿ ನಡೆಸಿದ ಹಲ್ಲೆ ಪ್ರಕರಣ ಹ್ಯಾರಿಸ್ ರಾಜಕೀಯ ಭವಿಷ್ಯಕ್ಕೆ ಕುತ್ತು ತರುವ ಸಾಧ್ಯತಿಯಿದೆ ಎಂದು ಹೇಳಲಾಗುತ್ತಿದೆ, ಶಾಸಕ ಹ್ಯಾರಿಸ್ ಹಾಗೂ ಮಾಜಿ ಅಬಕಾರಿ ಸಚಿವ ಎನ್ ಎ ಮೇಟಿ ಅವರುಗಳಿಗೆ ಟಿಕಟ್ ನೀಡುವ ಸಂಬಂಧ ರಾಹುಲ್ ಗಾಂಧಿ  ನಿರ್ಧರಿಸಲಿದ್ದಾರೆ.
ಇನ್ನೂ ಹ್ಯಾರಿಸ್ ಅವರಿಗೆ ಟಿಕೆಟ್ ನೀಡುವಂತೆ ಅವರ ಬೆಂಬಲಿಗರು  ಸಿಎಂ ಸಿದ್ದರಾಮಯ್ಯ ನಿವಾಸದ ಮುಂದೆ ಪ್ರತಿಭಟನೆ ನಡೆಸಿ, ಹ್ಯಾರಿಸ್ ಪರ ಘೋಷಣೆ ಕೂಗಿ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ.
ಇನ್ನೂ ಪಕ್ಷದಲ್ಲಿರುವ ಮುಸ್ಲಿಂ ನಾಯಕರು ಕಾಂಗ್ರೆಸ್ ನಿಂದ 26 ಮಂದಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದಾರೆ, ಅಥವಾ ಹ್ಯಾರಿಸ್ ಬದಲಿಗೆ ಸೂಕ್ತ ಮುಸ್ಲಿಂ ಅಭ್ಯರ್ಥಿಗೆ ಶಾಂತಿನಗರ ಟಿಕೆಟ್ ನೀಡಬೇಕೆಂದು ಹೇಳಿದ್ದಾರೆ.
ಜಯನಗರದಿಂದ ಸೌಮ್ಯ ರೆಡ್ಡಿ ಸ್ಪರ್ಧೆ? 
ಹಲವು ಶಾಸಕರು, ಸಚಿವರುಗಳು ತಮ್ಮ ಮಕ್ಕಳಿಗೆ ಟಿಕೆಟ್ ಕೇಳುತ್ತಿದ್ದು, ಸ್ಕ್ರೀನಿಂಗ್ ಕಮಿಟಿ ಇನ್ನೂ ನಿರ್ಧರಿಸಿಲ್ಲ, ಗೃಹ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಜಯಗನರದಿಂದ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ, ಕಾನೂನು ಸಚಿವ ಟಿ.ಬಿ ಜಯಚಂದ್ರ ತಮ್ಮ ಪುತ್ರನಿಗೆ ಚಿಕ್ಕನಾಯಕನಹಳ್ಳಿಯಿಂದ ಟಿಕೆಟ್ ಕೊಡಿಸಲು ಯಶಸ್ವಿಯಾಗಿದ್ದಾರೆ.
SCROLL FOR NEXT