ರಾಜಕೀಯ

ವಿಧಾನಸಭೆ ಚುನಾವಣೆ: ಟಿಕೆಟ್ ಹಂಚಿಕೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರಲ್ಲಿ ಅಸಮಾಧಾನ

Sumana Upadhyaya
ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದೊಳಗೆ ಭುಗಿಲೆದ್ದಿರುವ ಭಿನ್ನಮತ ತಾರಕಕ್ಕೇರುವ ಲಕ್ಷಣ ಕಾಣುತ್ತಿದೆ. 
ಹಲವು ಸುತ್ತಿನ ಮಾತುಕತೆಯ ನಂತರ ಪಕ್ಷದ ಹಿರಿಯ ನಾಯಕರಿಗೆ ಒಪ್ಪಿಗೆಯಾಗುವ ರೀತಿಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಹೈಕಮಾಂಡ್ ತೀವ್ರ ಸಾಹಸ ಮಾಡುತ್ತಿದೆ. 
ಭಿನ್ನಮತ ಭುಗಿಲೇಳಲು ಪ್ರಮುಖ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಮೇಲುಗೈ ಸಾಧಿಸಲು ನೋಡುತ್ತಿರುವುದು ಎನ್ನಲಾಗುತ್ತಿದೆ. ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಎಂ.ವೀರಪ್ಪ ಮೊಯ್ಲಿ ಮೊದಲಾದವರು ಸಿದ್ದರಾಮಯ್ಯನವರ ಏಕಸ್ವಾಮ್ಯತ್ಯ ಪ್ರಕ್ರಿಯೆಯನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಪಕ್ಷದಲ್ಲಿ ತಮ್ಮ ಅಸ್ಥಿತ್ವವನ್ನು ತೋರಿಸಿಕೊಳ್ಳಲು ಇದು ಸೂಕ್ತ ಸಮಯವಾಗಿದ್ದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ಸಮ್ಮುಖದಲ್ಲಿ ಅದನ್ನು ಮಾಡಿ ತೋರಿಸಲು ಪ್ರಯತ್ನಿಸಲು ಕೆಲವು ನಾಯಕರು ಪ್ರಯತ್ನಿಸಿದ್ದಾರೆ ಕೂಡ ಎಂದು ರಾಜಕೀಯ ವಿಶ್ಲೇಷಕ ಪ್ರೊ.ಸಂದೀಪ್ ಶಾಸ್ತ್ರಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.
ಪಕ್ಷದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಿಗುತ್ತಿರುವ ವಿಶೇಷ ಸ್ಥಾನಮಾನವನ್ನು ಪ್ರಶ್ನಿಸುವ ಅಗತ್ಯವನ್ನು ಮತ್ತು ಸಿದ್ದರಾಮಯ್ಯನವರನ್ನು ಜವಾಬ್ದಾರರನ್ನಾಗಿ ಮಾಡಬೇಕೆಂಬ ಅಭಿಪ್ರಾಯ ಕೆಲವರಲ್ಲಿದೆ. ಅಲ್ಲದೆ ಕೇವಲ ಸಿದ್ದರಾಮಯ್ಯನವರದ್ದು ಮಾತ್ರವಲ್ಲದೆ ಪಕ್ಷದಲ್ಲಿ ಬೇರೆ ಮುಖಂಡರ ಮಾತುಗಳನ್ನು ಸಹ ಕೇಳಬೇಕೆಂಬ ಮಾತುಗಳು ಕೇಳಿಬರುತ್ತಿವೆ ಎನ್ನುತ್ತಾರೆ ಶಾಸ್ತ್ರಿ.
ಪಕ್ಷ ಮುಖ್ಯಮಂತ್ರಿಯವರ ನಾಯಕತ್ವದಲ್ಲಿ ಚುನಾವಣೆಯನ್ನು ಎದುರಿಸಲಿದೆ ಎಂದು ಘೋಷಣೆ ಮಾಡಿದ ನಂತರ ಸಿದ್ದರಾಮಯ್ಯನವರು ಪಕ್ಷದ ಸಂಪೂರ್ಣ ನಿಯಂತ್ರಣವನ್ನು ಹೊಂದಿ ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಟಿಕೆಟ್ ಕೊಡುವ ಭರವಸೆ ನೀಡಿ ಬೇರೆ ಪಕ್ಷಗಳ ಶಾಸಕರನ್ನು ಪಕ್ಷಕ್ಕೆ ಬರ ಮಾಡಿಕೊಂಡಿರುವುದು ಮಲ್ಲಿಕಾರ್ಜುನ ಖರ್ಗೆ ಮೊದಲಾದ ಹಿರಿಯ ನಾಯಕರಿಗೆ ಇಷ್ಟವಾಗಿಲ್ಲ.  ಅಶೋಕ್ ಖೇಣಿಯಂತಹ ವಿವಾದಾತ್ಮಕ ಶಾಸಕರನ್ನು ಸೇರಿಸುವಾಗ ತಮ್ಮ ಸಲಹೆಯನ್ನು ಕೂಡ ಕೇಳಲಿಲ್ಲ ಎನ್ನುತ್ತಾರೆ ಖರ್ಗೆ. 
SCROLL FOR NEXT