ಮಂಗಳೂರು : ಬಿಜೆಪಿಯ ಮೂರನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೂ ಮುಂಚಿತವಾಗಿ ಇಲ್ಲಿನ ಬಂಟ್ಸ್ ಹೋಟೆಲ್ ಸರ್ಕಲ್ ನಲ್ಲಿರುವ ಅದೃಷ್ಟದ ಕಟ್ಟಡ ಎಂದೇ ಭಾವಿಸಲಾದ ಕಚೇರಿಯಿಂದ ಬಿಜೆಪಿ ರಣಕಹಳೆ ಮೊಳಗಿಸುತ್ತಿದೆ.
ಈ ಬಾರಿಯ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಒಳ್ಳೆಯದಾಗಲಿದೆ ಎಂಬ ನಂಬಿಕೆಯಿಂದ ಬಿಜೆಪಿ ಅಭ್ಯರ್ಥಿಗಳು ಈ ಕಟ್ಟಡವನ್ನು ಚುನಾವಣಾ ಕಚೇರಿಗಳನ್ನಾಗಿ ಮಾಡಿಕೊಂಡಿದ್ದಾರೆ.
ಶಿಥಿಲಗೊಂಡ ಹೆಂಚುಗಳ ಮನೆಯನ್ನು 2004ರ ಚುನಾವಣೆಯಲ್ಲಿ ಮೊದಲ ಬಾರಿಗೆ ಬಳಸಿಕೊಳ್ಳಲಾಗಿತ್ತು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳುತ್ತಾರೆ.
2004ರಲ್ಲಿ ಏಕಕಾಲದಲ್ಲಿ ಲೋಕಸಭೆ ಹಾಗೂ ವಿಧಾನಸಭೆಗೆ ಚುನಾವಣೆ ನಡೆದ್ದಾಗ ಬಿಜೆಪಿ ಚುನಾವಣಾ ಕಚೇರಿಯನ್ನಾಗಿ ಈ ಕಟ್ಟಡವನ್ನು ಬಳಸಿಕೊಂಡಿತ್ತು. ಆಗ ಮಂಗಳೂರು ಲೋಕಸಭಾ ಕ್ಷೇತ್ರದ 8 ಕ್ಷೇತ್ರಗಳ ಪೈಕಿ 6ರಲ್ಲಿ ಬಿಜೆಪಿ ಜಯಗಳಿಸಿತ್ತು
ವೀರಪ್ಪಮೊಯ್ಲಿ ಅವರನ್ನು ಸೋಲಿಸಿ ಸದಾನಂದಗೌಡ ಸಂಸದರಾಗಿ ಆಯ್ಕೆಯಾಗಿದ್ದರು.
2009ರಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಿಂದ ತಮ್ಮನ್ನು ಬಿಜೆಪಿ ಅಭ್ಯರ್ಥಿಯಾಗಿ ಮಾಡಿತ್ತು ಎಂದು ಕಟೀಲ್ ಹೇಳುತ್ತಾರೆ.
2013ರ ವಿಧಾನಸಭಾ ಚುನಾವಣೆಯಲ್ಲಿ ಪಿವಿಎಸ್ ವೃತ್ತದಲ್ಲಿರುವ ಬಿಜೆಪಿ ಪಕ್ಷದ ಕಚೇರಿಯನ್ನು ಚುನಾವಣಾ ಕಚೇರಿಯನ್ನಾಗಿ ಬಳಸಿಕೊಳ್ಳಲಾಗಿತ್ತು, ಇದರಿಂದಾಗಿ ಹಾನಿಕಾರಿಕ ರೀತಿಯ ಫಲಿತಾಂಶ ಬಂದಿತ್ತು .
2014ರ ಲೋಕಸಭಾ ಚುನಾವಣೆಯಲ್ಲಿ ಈ ಕಟ್ಟಡವನ್ನು ಬಿಜೆಪಿ ಕಚೇರಿಯನ್ನಾಗಿ ಮಾಡಿಕೊಂಡಿದ್ದರಿಂದ ಒಂದೂವರೆ ಲಕ್ಷ ಮತಗಳಿಂದ ಜಯಗಳಿಸಿದ್ದಾಗಿ ನಳಿನ್ ಕುಮಾರ್ ಕಟೀಲ್ ನೆನಪು ಮಾಡಿಕೊಳ್ಳುತ್ತಾರೆ.