ರಾಜಕೀಯ

ರಾಯಣ್ಣ ಬ್ರಿಗೇಡ್ ಅಧ್ಯಕ್ಷ ವಿರೂಪಾಕ್ಷಪ್ಪ, ಕೊಪ್ಪಳ ಮಾಜಿ ಸಂಸದ ಶಿವರಾಮೇಗೌಡ ಕಾಂಗ್ರೆಸ್ ಸೇರ್ಪಡೆ

Raghavendra Adiga
ಬೆಂಗಳೂರು: ರಾಯಣ್ಣ ಬ್ರಿಗೇಡ್ ಅಧ್ಯಕ್ಷರಾದ ವಿರೂಪಾಕ್ಷಪ್ಪ ಹಾಗೂ ಕೊಪ್ಪಳ ಕ್ಷೇತ್ರದ ಮಾಜಿ ಸಂಸದ ಶಿವರಾಮೇಗೌಡ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಕ್ಷಮದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾದ ನಾಯಕರು ಭಾರತೀಯ ಜನತಾ ಪಕ್ಷದ ಸಿದ್ದಾಂತ, ನೀತಿಗಳ ಕುರಿತು ಟೀಕಿಸಿದ್ದಾರೆ. "ಹಿಂದುಳಿದ ವರ್ಗಕ್ಕೆ ಬಿಜೆಪಿ ಯಾವ ಅನುಕೂಲಗಳನ್ನೂ ಕಲ್ಪಿಸಲಿಲ್ಲ. ಯಡಿಯೂರಪ್ಪ, ಈಶ್ವರಪ್ಪ ಇಬ್ಬರೂ ನನ್ನನ್ನು ಕೈಬಿಟ್ಟಿದ್ದಾರೆ. ನನ್ನ ನಿರೀಕ್ಷೆ ಹುಸಿಯಾಗಿದೆ  ಹೀಗಾಗಿ ನಾನು ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ" ವಿರೂಪಾಕ್ಷಪ್ಪ ಹೇಳಿದ್ದಾರೆ.
"ಬ್ರಿಗೇಡ್ ಒಂದು ಸ್ವತಂತ್ರ ಸಂಘಟನೆ. ಚುನಾವಣೆ ಮುಗಿದ ಬಳಿಕ ಮತ್ತೆ ಬ್ರಿಗೇಡ್ ತನ್ನ ಚಟುವಟಿಕೆಗಳನ್ನು ಮುಂದುವರಿಸಲಿದೆ. ಆಗ ಮತ್ತೆ ಸಭೆ ಸೇರಲಿದ್ದೇವೆ. ಈಶ್ವರಪ್ಪ ಅವರಿಗೆ ಸಹ ಆಹ್ವಾನ ನೀಡುತ್ತೇವೆ. ಆದರೆ ಅವರು ಸಭೆಗೆ ಹಾಜರಾಗುವುದು, ಬಿಡುವುದು ಅವರಿಗೆ ಸೇರಿದ್ದಾಗಿದೆ" ಅವರು ಹೇಳಿದರು.
"ಪ್ರಾಮಾಣಿಕ ಕಾರ್ಯಕರ್ತರಿಗೆ ಬಿಜೆಪಿಯಲ್ಲಿ ಬೆಲೆ ಇಲ್ಲ.ಕರಡಿ ಸಂಗಣ್ಣ, ಅವರ ಪುತ್ರ ಕೊಪ್ಪಳದಲ್ಲಿ ಬಿಜೆಪಿ ಟಿಕೆಟ್ ಪಡೆದಿದ್ದಾರೆ. ನಮಗೆ ಯಾವ ಬೆಲೆ ಇಲ್ಲ, ಗೌರವವಿಲ್ಲದ ಕಡೆ  ನಾವೇಕೆ ಇರಬೇಕು? ನಾನು ಈ ಚುನಾವಣೆಯಲ್ಲಿ ಕೊಪಳ ಕಾಂಗ್ರೆಸ್ ಅಭ್ಯರ್ಥಿಯ ಪರ ಪ್ರಚಾರ ನಡೆಸಲು ಬಯಸಿದ್ದೇನೆ" ಶಿವರಾಮೇಗೌಡ ಹೇಳಿದ್ದಾರೆ.
SCROLL FOR NEXT