ರಾಜಕೀಯ

ವಿಧಾನಸಭೆ ಚುನಾವಣೆ, ಬಹುಪಾಲು ಮತಗಳು ಜೆಡಿಎಸ್ ಪರ ಇರಲಿದೆ: ಕುಮಾರಸ್ವಾಮಿ

Raghavendra Adiga
ಮೈಸೂರು: "ಮತಗಳ ಪ್ರಮುಖ ಪಾಲು ನಮ್ಮ ಪರವಾಗಿ ಬರಲಿದೆ. ದಲಿತರು ಮಾತ್ರವಲ್ಲ ಬುದ್ದಿಜೀವಿಗಳು ಸಹ ನಮಗೆ ಬೆಂಬಲ ನೀಡಲಿದ್ದಾರೆ"  ಜಾತ್ಯಾತೀತ ಜನತಾದಳ (ಜೆಡಿಎಸ್) ನಾಯಕ ಎಚ್.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಐಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು ಮೇ 12 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಜೆಡಿಎಸ್ ಜಯಶಾಲಿಯಾಗಿದೆ ಎಂದರು. "ರಾಜ್ಯ ಸರ್ಕಾರದ ನಡೆಗಳಿಂದ ಜನರು 
ನಿರಾಶರಾಗಿದ್ದಾರೆ. ನಮಗೆ ಮತ ನೀಡಲು ನಿರ್ಧರಿಸಿದ್ದಾರೆ.ಜನರು ಜೆಡಿಎಸ್ ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಕಡೆಗೆ ಒಲವು ಹೊಂದಿದ್ದಾರೆ. "ಕುಮಾರಸ್ವಾಮಿ ನುಡಿದರು.
ಮಾಜಿ ಪ್ರಧಾನಿ ದೇವೇಗೌಡರ ಕುರಿತಂತೆ ಅವಮಾನಕರ ಹೇಳಿಕೆ ನಿಡಿದ್ದ ಸಿದ್ದರಾಮಯ್ಯ ನಾನು ಸ್ವ ಇಚ್ಚೆಯಿಂದ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದೆನೆಂದೈದ್ದರು. ಇದಕ್ಕೆ ಪ್ರತಿಕ್ರಯಿಸಿದ ಕುಮಾರಸ್ವಾಮಿ ಪಕ್ಷ ವಿರೋಧಿ ಚಟುವಟುಇಕೆಗಳಲ್ಲಿ ತೊಡಗಿದ್ದ ಸಿದ್ದರಾಮಯ್ಯ  ಜೆಡಿಎಸ್ ನಿಂದ ಅಮಾನತುಗೊಂಡಿದ್ದರು ಎಂದು ಹೇಳಿದರು.
"ದೇವೇಗೌಡರು ಸಿದ್ದರಾಮಯ್ಯನವರನ್ನು ಅಮಾನತುಗೊಳಿಸಿಲ್ಲ, ಪಕ್ಷ ವಿರೋಧಿ ಚಟುವಟಿಕೆಗಳ ಕಾರಣದಿಂದ ಅವರನ್ನು ಅಮಾನತುಗೊಳಿಸಲಾಯಿತು. ಜೆಡಿಎಸ್ ನಾಯಕರಾಗಿದ್ದ ಅವರು ಕಾಂಗ್ರೆಸ್ ಸ್ನೇಹಿತರೊಡನೆ ಪ್ರತ್ಯೇಕ ಸಭೆ ನಡೆಸುತ್ತಿದ್ದರು. ಆದ್ದರಿಂದ ಪಕ್ಷ ಅವರನ್ನು ಅಮಾನತುಗೊಳಿಸಲು ನಿರ್ಧರಿಸಿತು" 
ಬಿಎಸ್ಪಿ ಅಧಿನಾಯಕಿ ಮಾಯಾವತಿ ಕರ್ನಾಟಕದಲ್ಲಿ ಜೆಡಿಎಸ್ ಜತೆಗೂಡಿ ರ್ಯಾಲಿಯಲ್ಲಿ ಪಾಲ್ಗೊಂಡ ಎರಡು ದಿನಗಳ ತರುವಾಯ ಕುಮಾರಸ್ವಾಮಿ ಈ ಹೇಳಿಕೆ ನೀಡಿದ್ದಾರೆ.
ಕರ್ನಾಟಕದಲ್ಲಿ ಹಿಂದುಳಿದ ಜಾತಿಗಳು ಮತ್ತು ಅಲ್ಪಸಂಖ್ಯಾತರನ್ನು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಕಡೆಗಣಿಸಿದೆ ಎಂದು ಮಾಯಾವತಿ ಆರೋಪಿಸಿದ್ದರು. ಪ್ರಸಕ್ತ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಎಸ್ಪಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿವೆ. ಈ ಒಪ್ಪಂದದಂತೆ ಬಿಎಸ್ಪಿ ಕರ್ನಾಟಕದ 20 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
2013 ರ ಚುನಾವಣೆಯಲ್ಲಿ ಜೆಡಿಎಸ್  224ರಲ್ಲಿ  ಕೇವಲ 40 ಸ್ಥಾನಗಳನ್ನು ಗೆದ್ದಿತ್ತು. ಅದೇ ವೇಳೆ ಬಿಎಸ್ಪಿ 175 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೂ ಒಂದು ಕ್ಷೇತ್ರದಲ್ಲಿಯೂ ಜಯ ಸಾಧಿಸಿರಲಿಲ್ಲ.
SCROLL FOR NEXT