ರಾಜಕೀಯ

ಅಂಬಿ, ನಾನು ಸಹೋದರರಿದ್ದಂತೆ, ಪಕ್ಷಕ್ಕೆ ಬರುವುದಾದರೆ ಸ್ವಾಗತ: ಎಚ್ ಡಿ ಕುಮಾರಸ್ವಾಮಿ

Srinivasamurthy VN
ಮಂಡ್ಯ: ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ನಾನು ಸಹೋದರರಿದ್ದಂತೆ. ರಾಜ್ಯ ರೈತರ ಹಿತದದೃಷ್ಟಿಯಿಂದ ಅಂಬರೀಶ್ ಅವರು ನಮ್ಮ ಪಕ್ಷಕ್ಕೆ ಬೆಂಬಲಕೊಟ್ಟರೆ ಸಂಪೂರ್ಣ ಸ್ವಾಗತವಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಮದ್ದೂರು ಪಟ್ಟಣದಲ್ಲಿರುವ ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ಅವರ ನಿವಾಸಕ್ಕೆ ಬುಧವಾರ ಭೇಟಿ ನೀಡಿದ್ದ ಕುಮಾರಸ್ವಾಮಿ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ನಾನು ಸಹೋದರರಿದ್ದಂತೆ. ರಾಜ್ಯ ರೈತರ ಹಿತದದೃಷ್ಟಿಯಿಂದ ಅಂಬರೀಶ್ ಅವರು ನಮ್ಮ ಪಕ್ಷಕ್ಕೆ ಬೆಂಬಲಕೊಟ್ಟರೆ ಸಂಪೂರ್ಣ ಸ್ವಾಗತವಿದೆ. ಅಂಬರೀಶ್ ಅವರಿಗೆ ದೇವೇಗೌಡರ ಜೊತೆ ಉತ್ತಮ ಬಾಂಧವ್ಯ ಹಾಗೂ ಗೌರವ ಇದೆ. ರಾಜ್ಯದಲ್ಲಿ ಒಳ್ಳೆಯ ಸರ್ಕಾರ ತರುವ ದೃಷ್ಟಿಯಿಂದ ಅಂಬರೀಶ್ ನಮ್ಮ ಪಕ್ಷಕ್ಕೆ ಬರುವುದಾದರೆ ಅವರಿಗೆ ನಮ್ಮ ಕಡೆಯಿಂದ ಸ್ವಾಗತವಿದೆ.  ಈ ಬಗ್ಗೆ ಈವರೆಗೂ ನಾವು ಯಾವುದೇ ಮಾತುಕತೆ ನಡೆದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಅಂಬರೀಶ್ ಮತ್ತು ನಾನು ಅಣ್ಣ ತಮ್ಮಂದಿರಿದ್ದ ಹಾಗೆ. ಅವರು ಯಾವುದೇ ಪಕ್ಷದಲ್ಲಿದ್ದರೂ ಅಜಾತಶತ್ರು. ಅವರು ಎಲ್ಲರ ಜೊತೆ ಸ್ನೇಹ ಜೀವಿಯಾಗಿರಬೇಕೆಂದು ಬಯಸುತ್ತಾರೆ. ಅವರು ಕಾಂಗ್ರೆಸ್ ಜೊತೆಯಲ್ಲಿದ್ದರು ನಮ್ಮ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎಂದು ಹೇಳಿದರು.
ಕರ್ನಾಟಕ ವಿಧಾನಸಭೆ ಚುನಾವಣೆಯ ನಾಮಪತ್ರ ಸಲ್ಲಿಕೆ ಮಾಡುವ ಅಂತಿಮ ಕ್ಷಣದಲ್ಲಿ ಅಂಬರೀಶ್ ತಾವು ಸ್ಪರ್ಧೆ ಮಾಡುತ್ತಿಲ್ಲ, ಅಲ್ಲದೆ ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗುವುದಾಗಿ ಘೋಷಣೆ ಮಾಡಿದ್ದರು. ಆದರೆ ಅಂಬಿ ಕಾಂಗ್ರೆಸ್ ಪಕ್ಷದ ವಿರುದ್ಧ ಮುನಿಸಿಕೊಂಡಿದ್ದು, ಜೆಡಿಎಸ್ ಸೇರಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡಿತ್ತು.
SCROLL FOR NEXT