ರಾಜಕೀಯ

ಅಪ್ಪನಾಣೆಗೂ ರಾಜಕಾರಣಿಗಳಿಂದ ದೇಶ ಉದ್ಧಾರವಾಗಲ್ಲ: ಜಿಟಿ ದೇವೇಗೌಡ ಹೇಳಿಕೆ ಚರ್ಚೆಗೆ ಗ್ರಾಸ

Vishwanath S
ಬೆಂಗಳೂರು: ದೇಶ ಅಭಿವೃದ್ಧಿ ಆಗಬೇಕಾದರೆ ಅದು ನಿಮ್ಮಂತಹ ವಿದ್ಯಾರ್ಥಿಗಳಿಂದ ಸಾಧ್ಯವೇ ಹೊರತು ರಾಜಕಾರಣಿಗಳಿಂದ ಅಲ್ಲ ಎಂದು ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಅವರು ಹೇಳಿದ್ದಾರೆ. 
ಬೆಂಗಳೂರಿನ ರೇವಾ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ದೇಶ ಅಭಿವೃದ್ಧಿ ಕಾಣಬೇಕಾದರೆ ನಿಮ್ಮಂತ ವಿದ್ಯಾರ್ಥಿಗಳು ಮುಂದೆ ಬರಬೇಕು. ಅದನ್ನು ಬಿಟ್ಟು ರಾಜಕಾರಣಿಗಳು ದೇಶವನ್ನು ಅಭಿವೃದ್ಧಿ ಮಾಡುತ್ತಾರೆ ಎಂದು ಅದು ಅಸಾಧ್ಯದ ಮಾತು ಎಂದು ಅವರು ಹೇಳಿದ್ದು ಇದೀಗ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. 
ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ಭಾಷಣ ಮಾಡುತ್ತಲೇ ಕೊನೆಯುಸಿರೆಳೆದರು. ಇದು ಶಿಕ್ಷಣದ ಮಹತ್ವ. ರಾಜಕಾರಣಿಗಳಿಂದ ಇದು ಸಾಧ್ಯವಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಮತ್ತು ಯುವಕರು ಆವಿಷ್ಕಾರಗಳನ್ನು ಕೈಗೊಳ್ಳುವ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು. 
ರಾಜಕಾರಣಿಗಳಿಂದ ದೇಶ ಉದ್ಧಾರವಾಗಲ್ಲ ಎಂದು ಜಿಟಿ ದೇವೇಗೌಡ ಅವರು ಹೇಳಿದ್ದು ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. 
SCROLL FOR NEXT