ರಾಜಕೀಯ

ಪ್ರವಾಹ, ಸಾಲಮನ್ನಾ, ದೋಸ್ತಿ ಪಕ್ಷದ ಬೆದರಿಕೆ: ಬಸವಳಿದಿದ್ದ ಸಿಎಂ ಗೆ ಕೊಂಚ ನೆಮ್ಮದಿ ಕೊಟ್ಟ ಸಿಟಿ ಸಿವಿಲ್ ಕೋರ್ಟ್!

Shilpa D
ಬೆಂಗಳೂರು: ರೈತರ ಸಾಲಮನ್ನಾ, ಪ್ರವಾಹ ಪೀಡಿತ ಕೊಡಗಿನ ಪರಿಹಾರ ಕಾರ್ಯದ ಜೊತೆಗೆ ಎಲ್ಲಕ್ಕಿಂತ ಮುಖ್ಯವಾಗಿ ಸಮ್ಮಿಶ್ರ ಸರ್ಕಾರದ ದೋಸ್ತಿ ಪಕ್ಷದ ನಿರಂತರ ಬೆದರಿಕೆ ಸಿಎಂ ಕುಮಾರ ಸ್ವಾಮಿ ಅವರ ನಿದ್ದೆಗೆಡಿಸಿದೆ,  ಇವೆಲ್ಲದರ ನಡುವೆ  ಸೋಮವಾರ ಸಿಟಿ ಸಿವಿಲ್ ಕೋರ್ಟ್ ನೀಡಿದ ತೀರ್ಪು ಕುಮಾರ ಸ್ವಾಮಿ ಪಾಲಿಗೆ ಸ್ವಲ್ಪ ನೆಮ್ಮದಿ ತಂದಿದೆ.  ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಸಿಎಂ ಕುಮಾರ ಸ್ವಾಮಿ ಅವರನ್ನು ಕೋರ್ಟ್ ಆರೋಪ ಮುಕ್ತ ಗೊಳಿಸಿದೆ. 
ಕಳೆದ 10 ವರ್ಷಗಳಿಂದ ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣ ಸಂಬಂಧ ಕುಮಾರ ಸ್ವಾಮಿ ಮೇಲೆ ತೂಗುಗತ್ತಿಯಾಗಿ ನೇತಾಡುತ್ತಿತ್ತು. ಆದರೆ ನಿನ್ನೆ ಸಿಟಿ ಸಿವಿಲ್ ಕೋರ್ಟ್ ನೀಡಿರುವ ತೀರ್ಪು ಕೇವಲ ಕುಮಾರ ಸ್ವಾಮಿಗೆ ಮಾತ್ರವಲ್ಲ ಇಡಿ ಜೆಡಿಎಸ್ ಪಕ್ಷವೇ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ,
ಪ್ರಕರಣದಿಂದ ಸಿಎಂ ಅವರನ್ನು ಖುಲಾಸೆಗೊಳಿಸಿರುವುದು ಆಶ್ಚರ್ಯವೇನಲ್ಲ ಎಂದು ಜೆಡಿಎಸ್ ವಕ್ತಾರ ತನ್ವಿರ್ ಆಹ್ಮದ್ ಪ್ರತಿಕ್ರಿಯಿಸಿದ್ದಾರೆ. ಕುಮಾರ ಸ್ವಾಮಿ ಅವರನ್ನು ಈ ಪ್ರಕರಣದಲ್ಲಿ ರಾಜಕೀಯ ದ್ವೇಷದಿಂದಾಗಿ ಉದ್ದೇಶ ಪೂರ್ವಕವಾಗಿ ಸೇರಿಸಲಾಗಿತ್ತು ಎಂದು ಜೆಡಿಎಸ್ ಪಕ್ಷ ಹಾಗೂ ಪಕ್ಷದ ಮುಖಂಡರು ಹೇಳಿದ್ದಾರೆ. 
105 ಸ್ಥಳೀಯ ಸಂಸ್ಥೆ ಚುನಾವಣೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇರುವಾಗ ಕೋರ್ಟ್ ನೀಡಿರುವ ಈ ತೀರ್ಪು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಈಗ ಯಾವದೇ ಆತಂಕವಿಲ್ಲದೇ ಕುಮಾರ ಸ್ವಾಮಿ ತಮ್ಮ ಸಮಯವನ್ನು ರಚನಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಬಹುದು, ಕೊಡಗು ನಿರಾಶ್ರಿತರಿಗೆ ಪರಿಹಾರ,  ಸಾಲಮನನ್ನಾ ಮುಂತಾಗ ಸಮಸ್ಯೆಗಳ ಬಗ್ಗೆ ಗಮನ ಹರಿಸಬಹುದಾಗಿದೆ ಎಂದು ಅಹ್ಮದ್ ಹೇಳಿದ್ದಾರೆ.
ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆ ಸಾರ್ವಜನಿಕವಾಗಿ ಮಾತನಾಡುತ್ತಿದ್ದ ಸಿಎಂ ಕುಮಾರ ಸ್ವಾಮಿಗೆ ತಾವು ಈ ಪ್ರಕರಣದಿಂದ ಖುಲಾಸೆಯಾಗಿರುವುದು ಮತ್ತಷ್ಟು ಬಲ ತಂದಿದ್ದು, ತಮ್ಮ ಕ್ಲೀನ್ ಇಮೇಜ್ ಬಗ್ಗೆ ಹೆಮ್ಮೆ ಪಡಬಹುದಾಗಿದೆ,. ಎಲ್ಲಾ ಒತ್ತಡ ಹಾಗೂ ಸವಾಲಗಲ ನಡುವೆ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಮುಂದುವರಿಯಲು ಕುಮಾರ ಸ್ವಾಮಿಗೆ ಮತ್ತಷ್ಟು ನೈತಿಕ ಬೆಂಬಲ ಸಿಕ್ಕಂತಾಗಿದೆ.
SCROLL FOR NEXT