ರಾಜಕೀಯ

ವಯಕ್ತಿಕ ಸಾಮರ್ಥ್ಯ ಸಾಬೀತುಪಡಿಸಲು 3 ಪಕ್ಷಗಳು ಸಜ್ಜು: ರಿಯಾಲಿಟಿ ಚೆಕ್ ಗೆ ಬಿಜೆಪಿ ಮುಂದು!

Shilpa D
ಬೆಂಗಳೂರು: ರಾಜ್ಯದ 21 ಜಿಲ್ಲೆಗಳ 105  ನಗರ ಸ್ಥಳೀಯ ಸಂಸ್ಥೆಗಳಿಗೆ ಆಗಸ್ಟ್ 31 ರಂದು ಚುನಾವಣೆ ನಡೆಯಲಿದೆ.  ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳು ಸೀಟು ಹಂಚಿಕೆಗೆ ಈ ಚುನಾವಣೆ ಆಧಾರವಾಗಲಿದೆ. 
ಇನ್ನೂ ಬಿಜೆಪಿ ಕೂಡ ಈ ಚುನಾವಣೆ ಮೂಲಕ ರಿಯಾಲಿಟಿ ಚೆಕ್ ಮಾಡಲಿದ್ದು. ತಳ ಮಟ್ಟದಲ್ಲಿ ತನ್ನ ಸ್ಥಾನ ಏನು ಎಂಬುದರ ಬಗ್ಗೆ ತಿಳಿದುಕೊಳ್ಳಲಿದೆ. 
ಪಟ್ಟಣ ಪಂಚಾಯಿತಿಯ 2,529 ವಾರ್ಡ್ ಗಳಿಗೆ 8,340 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ, ನಗರ ಸ್ಥಳೀಯ ಸಂಸ್ಥೆಯ 135 ವಾರ್ಡ್ ಗಳಿಂದ 814 ಮಂದಿ ಸ್ಪರ್ದಿಸಿದ್ದಾರೆ.  ವಿಧಾನಸಭೆ ಚುನಾವಣೆ ನಂತರ ಮೂರು ರಾಜಕೀಯ ಪಕ್ಷಗಳಿಗೂ ಸ್ಥಳೀಯ ಸಂಸ್ಥೆ ಚುನಾವಣೆ ಬಹು ದೊಡ್ಡ ಸವಾಲಾಗಿದೆ.ತಳ ಮಟ್ಟದಸಲ್ಲಿ ತಮ್ಮ ವಯಕ್ತಿಕ ಸಾಮರ್ಥ್ಯ ಸಾಬಿತು ಪಡಿಸಲು ಇದೊಂದು ವೇದಿಕೆಯಾಗಿದೆ, ಹೀಗಾಗಿ ಮೂರು ಪಕ್ಷಗಳು ಸ್ವತಂತ್ರ್ಯವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
ಸ್ಥಳೀಯ ಸಂಸ್ಥೆ ಚುನಾವಣೆ ಪಕ್ಷಗಳ ಸಾಮಾಜಿಕ ನೆಲೆ ಭದ್ರಗೊಳಿಸುತ್ತದೆ, ಹೀಗಾಗಿ ಎಲ್ಲಾ ಪಕ್ಷಗಳು ಸ್ವತಂತ್ರ್ಯವಾಗಿ ಕಣಕ್ಕಿಳಿದಿವೆ, ಜನ ಸಾಮಾನ್ಯರಲ್ಲಿ ಅವರ ಗುರುತನ್ನು ಹಾಗೇಯೆ ಮುಂದುವರಿಸಿಕೊಂಡು ಹೋಗುವುದು, ಬಹಳ ಮುಖ್ಯ,ತಮ್ಮ ನೆಲೆ ಎಲ್ಲಿ ಭದ್ರವಾಗಿದೆ ಎಂಬುದನ್ನು ಈ ಚುನಾವಣೆ ನಿರ್ಧರಿಸಲಿದೆ. ಜೊತೆಗೆ ಲೋಕಸಭೆ ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರದ ದೋಸ್ತಿ ಪಕ್ಷಗಳ ನಡುವೆ ಸೀಟು ಹಂಚಿಕೆಗೆ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ ನಿರ್ಣಾಯಕವಾಗಲಿದೆ.
ವಿಧಾನಸಭೆ ಚುನಾವಣೆ ನಡೆದ 3 ತಿಂಗಳ ತರುವಾಯ ಸ್ಥಳೀಯ ಸಂಸ್ಥೆ ಚುನಾವಣೆ ಎದುರಾಗಿದೆ. ಇದು ಮಗಿದ ನಂತಕ ಲೋಕಸಭೆ ಚುನಾವಣೆ ಬರಲಿದೆ. ಆಗಸ್ಟ್ 31ಕ್ಕೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯಲಿದ್ದು, ಸೆಟ್ಪಂಬರ್ 3ಕ್ಕೆ ಫಲಿತಾಂಶ ಪ್ರಕಟವಾಗಲಿದೆ. 
SCROLL FOR NEXT