ಸಂಗ್ರಹ ಚಿತ್ರ 
ರಾಜಕೀಯ

ಬಿಜೆಪಿ ಅಲ್ಲ, ನಾವೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತೇವೆ: ಕಾಂಗ್ರೆಸ್ ನಾಯಕ ಬೇಳೂರು ಗೋಪಾಲಕೃಷ್ಣ

ಬಿಜೆಪಿಯನ್ನು ಸೋಲಿಸಿ ನಾವೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.

ಶಿವಮೊಗ್ಗ: ಬಿಜೆಪಿಯನ್ನು ಸೋಲಿಸಿ ನಾವೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ದಶಕಗಳಿಂದ ಹಿಂದೂ-ಮುಸ್ಲಿಮರ ನಡುವಿನ ತಿಕ್ಕಾಟಕ್ಕೆ ಕಾರಣವಾಗಿರುವ ಅಯೋಧ್ಯೆ ರಾಮಮಂದಿರ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ ಅವರು, '17 ದಿವಸದಲ್ಲಿ ಮಸೀದಿ ಕೆಡವಿದ ಬಿಜೆಪಿಗೆ 17 ವರ್ಷವಾದರೂ ಮಂದಿರ ನಿರ್ಮಿಸಲು ಅಗಿಲ್ಲವೆಂದು ಶಿವಸೇನೆ ಕೂಡ ಟೀಕಿಸಿದೆ. ಮುಸ್ಲಿಮರನ್ನು ಒಳಗೊಂಡಂತೆ ಎಲ್ಲರನ್ನೂ ಪ್ರೀತಿ-ವಿಶ್ವಾಸಕ್ಕೆ ತೆಗೆದುಕೊಂಡು ಮಂದಿರ ಕಟ್ಟಬೇಕಿದೆ. ನಾವೂ ಹಿಂದೂಗಳೇ, ನಾವು ಸಾವಿರಾರು ದೇವಾಲಯ ಕಟ್ಟಿದ್ದೀವಿ, ಮುಸ್ಲಿಂಮರನ್ನು ಸೇರಿಸಿಕೊಂಡು ಮಂದಿರ ಕಟ್ಟುತ್ತೇವೆ ಎಂದು ಹೇಳಿದರು.
ಇದೇವೇಳೆ ಮತ್ತೊಮ್ಮೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಕಿಡಿಕಾರಿದ ಗೋಪಾಲಕೃಷ್ಣ, ಶಿವಮೊಗ್ಗದಲ್ಲಿ ಸ್ಮಾರ್ಟ್​ ಸಿಟಿ ಎಂದರೇ ಯಡಿಯೂರಪ್ಪನವರ ಹೋಟೆಲ್ ಮತ್ತು ಕಾಲೇಜ್. ಮೋದಿ ಹೇಳಿದ ಅಚ್ಛೆ ದಿನ್ ಬಂದಿರುವುದು ಯಡಿಯೂರಪ್ಪ, ಮತ್ತವರ ಮಕ್ಕಳಿಗೆ ಮಾತ್ರ ಎಂದು ವ್ಯಂಗ್ಯವಾಡಿದರು. 
ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿಯು ವಿಧಾನಸೌಧಕ್ಕೆ ಮುತ್ತಿಗೆ ಹಾಕಿದರೆ ನಾವು ಡಿ‌ಸೆಂಬರ್ 10 ರಂದು ಶಿಕಾರಿಪುರದಲ್ಲಿ ಯಡಿಯೂರಪ್ಪ ಮನೆಗೆ ಮುತ್ತಿಗೆ ಹಾಕುತ್ತೇವೆ. ಇಂದು ಪ್ರತಿಭಟನೆಯಲ್ಲಿ ಮಹಿಳೆಯರು ಸಾಂಕೇತಿಕವಾಗಿ ಪೊರಕೆ ಹಿಡಿದು ಬಂದಿದ್ದಾರೆ. ಸಿಲಿಂಡರ್ ಬೆಲೆ ಏರಿಕೆ ಕಂಡಿದ್ದು ಬಿಜೆಪಿಯವರು ಲೋಕಸಭಾ ಚುನಾವಣೆಯಲ್ಲಿ ಓಟ್ ಕೇಳಲು ಮನೆಗೆ ಬಂದರೇ ಮಹಿಳೆಯರು ಇದೇ ಪೊರಕೆಯಲ್ಲಿ ಹೊಡೆಯುತ್ತಾರೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ರಧಾನಿ ಮೋದಿ ಭೇಟಿಯಾದ ಸಿಎಂ; ರಾಯಚೂರಿಗೆ ಏಮ್ಸ್, ಪ್ರವಾಹ ಪರಿಹಾರಕ್ಕೆ ಮನವಿ

ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಆರೋಗ್ಯದಲ್ಲಿ ಏರುಪೇರು, ICU ನಲ್ಲಿ ಚಿಕಿತ್ಸೆ!

ಬೆಂಗಳೂರಿನಿಂದ ತುಮಕೂರಿಗೆ Namma Metro ಯೋಜನೆ ವಿಸ್ತರಣೆಗೆ BJP ಸಂಸದ ತೇಜಸ್ವಿ ಸೂರ್ಯ ಆಕ್ಷೇಪ!

ಬೆಂಗಳೂರಿನಿಂದ ತುಮಕೂರಿಗೆ Namma Metro: ಡಿಪಿಆರ್‌ ಟೆಂಡರ್‌ ಆಹ್ವಾನಿಸಿದ BMRCL; 20 ಸಾವಿರ ಕೋಟಿ ರೂ ವೆಚ್ಚ; ಎಲ್ಲೆಲ್ಲಿ ನಿಲ್ದಾಣ?

Delhi blast: ಆಸ್ಪತ್ರೆಯಲ್ಲಿ ಮತ್ತೆ ಇಬ್ಬರು ಸಾವು; ಸಾವಿನ ಸಂಖ್ಯೆ 15ಕ್ಕೆ ಏರಿಕೆ

SCROLL FOR NEXT