ರಾಜಕೀಯ

'ಕೈ' ನಲ್ಲಿ ಮುಗಿಯದ ಅಸಮಾಧಾನದ ಬೇಗುದಿ: ಸಿಎಲ್ ಪಿ ಸಭೆಗೆ ಘಟಾನುಘಟಿ ನಾಯಕರ ಗೈರು

Shilpa D
ಬೆಂಗಳೂರು: ನಿನ್ನೆ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಗೆ ಹಲವು ಪ್ರಮಖ ನಾಯಕರು ಗೈರಾಗಿದ್ದರು, ಅದರಲ್ಲೂ ಮುಖ್ಯವಾಗಿ ಸಚಿವ ಸ್ಥಾನದ ಆಕಾಂಕ್ಷಿಗಳು  ಸಭೆಗೆ ಗೈರಾಗುವ ಮೂಲಕ ತಮ್ಮ ಅಸಮಾಧಾನ ವನ್ನು ಹೊರ ಹಾಕಿದ್ದರು.
ಡಿಸೆಂಬರ್ 22 ರಂದು ಸಂಪುಟ ವಿಸ್ತರಣೆ ಮಾಡುವುದಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಆದರೆ ಅಂದು ಕೂಡ ವಿಸ್ತರಣೆ ನಡೆಯುವುದಿಲ್ಲ ಎಂದು ಅತೃಪ್ತ ಕಾಂಗ್ರೆಸ್ ಶಾಸಕರೊಬ್ಬರು ತಿಳಿಸಿದ್ದಾರೆ. ಆದರೆ ಸಿಎಲ್ ಪಿ ಸಭೆಯಲ್ಲಿ ಭಾಗವಹಿಸಿದ್ದವರು ಕಾಂಗ್ರೆಸ್ ನಲ್ಲಿ  ಎಲ್ಲವೂ ಸರಿಯಾಗಿದೆ ಎಂಬ ಮಂತ್ರ ಪಠಿಸುತ್ತಿದ್ದಾರೆ. 
ರಾಮಲಿಂಗಾರೆಡ್ಡಿ, ರೋಷನ್ ಬೇಗ್, ಎಂ.ಬಿ ಪಾಟೀಲ್, ಎಸ್ ಆರ್ ಪಾಟೀಲ್, ಸುಧಾಕರ್, ಬಿ ನಾಗೇಂದ್ರ ಆರ್ ,ವಿ ದೇಶಪಾಂಡೆ, ಪುಟ್ಟರಂಗಶೆಟ್ಟಿ ರಮೇಶ್ ಜಾರಕಿಹೊಳಿ ಸೇರಿದಂತೆ, ಉತ್ತರ ಕರ್ನಾಟಕದ ಬಹುತೇಕ ಶಾಸಕರು ಗೈರು ಹಾಜರಾಗಿದ್ದರು.
ಸಂಪುಟ ವಿಸ್ತರಣೆ ವಿಳಂಬ ಹಾಗೂ ಹಿರಿಯರನ್ನು ಸಂಪುಟದಿಂದ ಕೈಬಿಟ್ಟಿರುವುದು ಹಾಗೂ ಜೆಡಿಎಸ್  ಸಚಿವರ ಕೆಟ್ಟ ವರ್ತನೆ ಬಗ್ಗೆ ಸಭೆಯಲ್ಲಿ ಅಸಮಾಧಾನದ ಹೊಳೆಯನ್ನೇ ಹರಿಸಲಾಗಿದೆ. 
ಕಾಂಗ್ರೆಸ್ ಪಕ್ಷ ನನ್ನನ್ನು ನಡೆಸಿಕೊಳ್ಳುತ್ತಿರುವ ರೀತಿ ಸರಿಯಲ್ಲ,  ರಾಮಲಿಂಗಾ ರೆಡ್ಡಿ ಅವರಂತ ಹಿರಿಯರಿಗೆ ಸಚಿವ ಸ್ಥಾನ ನೀಡದಿರುವುದನ್ನು ಸಹಿಸಲಾಗದು ಎಂದು ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ. ಡಿಸೆಂಬರ್ 22 ರಂದು ಸಂಪುಟ ವಿಸ್ತರಣೆಯಾಗಲಿದೆ ಎಂದು ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಭರವಸೆ ನೀಡಿದ್ದಾರೆ, ಆದರೆ ಯಾವುದೇ ಕಾರಣಕ್ಕೂ  ಸಂಪುಟ ವಿಸ್ತರಣೆ ಆಗುವುದಿಲ್ಲ ಎಂದು ತಿಳಿಸಿದ್ದಾರೆ.
ಡಿಸೆಂಬರ್ 22 ಕ್ಕೆ ಯಾವುದೇ ಕಾರಣಕ್ಕೆ ಸಂಪುಟ ವಿಸ್ತರಣೆಯಾಗುವುದಿಲ್ಲ,. ಏಕೆಂದರೇ ಶೂನ್ಯ ಮಾಸ ಇರುವುದರಿಂದ ಸಂಪುಟ ವಿಸ್ತರಣೆ ಮಾಡಲು ದೇವೇಗೌಡ ಮತ್ತು ಎಚ್ ಡಿ ರೇವಣ್ಣ ಬಿಡುವುದಿಲ್ಲ ಎಂದು  ಕಾಂಗ್ರೆಸ್ ನ ಮಾಜಿ ಸಚಿವರೊಬ್ಬರು ತಿಳಿಸಿದ್ದಾರೆ.
SCROLL FOR NEXT