ರಾಜಕೀಯ

ಕಲಾಪಕ್ಕೆ ಅಡ್ಡಿಪಡಿಸಲು ಆಡಳಿತಾರೂಢ ಮೈತ್ರಿ ಸರ್ಕಾರದಿಂದ ಷಡ್ಯಂತ್ರ: ಬಿ.ಎಸ್.ಯಡಿಯೂರಪ್ಪ

Manjula VN
ಬೆಳಗಾವಿ: ಅಧಿವೇಶನ ಸುಸೂತ್ರವಾಗಿ ನಡೆಯದಂತೆ ಆಡಳಿತಾರೂಢ ಮೈತ್ರಿ ಸರ್ಕಾರವು ವ್ಯವಸ್ಥಿತವಾಗಿ ಷಡ್ಯಂತ್ರ ಸೂಪಿಸಿದ್ದು, ಮುಖ್ಯಮಂತ್ರಿಗಳ ನಡೆಯನ್ನು ಗಮನಿಸಿದರೆ ಅಧಿಕಾರದ ಮದ ನೆತ್ತಿಗೇರಿರುವುದು ಸ್ಪಷ್ಟವಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ಟೀಕಾಪ್ರಹಾರ ನಡೆಸಿದ್ದಾರೆ. 
ಗುರುವಾರ ಸದನದ ಕಲಾಪ ಮುಂದೂಡಿದ ಬಳಿಕ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷದ ಸದಸ್ಯರ ಬಗ್ಗೆ ಮುಖ್ಯಮಂತ್ರಿಗಳ ಮಾತುಗಳು ದುರಹಂಕಾರದಿಂದ ಕೂಡಿದೆ. ಅಧಿವೇಶನ ನಡೆಸಲು ಪ್ರತಿಪಕ್ಷ ಸಹಕಾರ ನೀಡಲು ಸಿದ್ಧವಿದ್ದರೂ, ಆಡಳಿತ ಪಕ್ಷಕ್ಕೆ ಮನಸ್ಸಿಲ್ಲ. ಸದನದಲ್ಲಿ ಮುಖ್ಯಮಂತ್ರಿಗಳ ಮಾತುಗಳು ದುರಹಂಕಾರದಿಂದ ಕೂಡಿದೆ. ಅಧಿವೇಶನ ನಡೆಸಲು ಪ್ರತಿಪಕ್ಷ ಸಹಕಾರ ನೀಡಲು ಸಿದ್ಧವಿದ್ದರೂ, ಆಡಳಿತ ಪಕ್ಷಕ್ಕೆ ಮನಸ್ಸಿಲ್ಲ. ಸದನದಲ್ಲಿ ಮುಖ್ಯಮಂತ್ರಿಗಳ ನಡೆಯನ್ನು ಗಮನಿಸಿದರೆ, ಅವರಿಗೆ ಅಧಿಕಾರದ ಮದ ನೆತ್ತಿಗೇರಿರುವುದು ಸ್ಪಷ್ಟವಾಗಿದೆ ಎಂದು ಕಿಡಿಕಾರಿದರು. 
ಪ್ರತಿಪಕ್ಷಗಳು ಧರಣಿ ನಡೆಸಿದರೆ ಅಥವಾ ಸಭಾತ್ಯಾಗ ಮಾಡಿದರೆ ಸರ್ಕಾರದ ಸಂಸದೀಯ ಸಚಿವರು ಬಂದು ಮನವೊಲಿಕೆ ಮಾಡಿ ಕಲಾಪ ನಡೆಸಲು ಅನುವು ಮಾಡಿಕೊಡುವಂತೆ ಮನವಿ ಮಾಡುವುದು ಸಂಪ್ರದಾಯ. ಆದರೆ, ಮೈತ್ರಿ ಸರ್ಕಾರದಲ್ಲಿ ಯಾವೊಬ್ಬ ಸಚಿವರೂ ಪ್ರತಿಪಕ್ಷ ಸದಸ್ಯರ ಮನವೊಲಿಕೆ ಮಾಡುವ ಪ್ರಯತ್ನ ಮಾಡಿಲ್ಲ. ಸಭಾಧ್ಯಕ್ಷರ ಮುಂದೆ ಕರೆದುಕೊಂಡು ಹೋಗಿ ಸಮಾಧಾನದ ಮಾತುಗಳನ್ನಾಡುವ ಪ್ರಯತ್ನ ಮಾಡಿಲ್ಲ. ಸಮಸ್ಯೆ ಬಗೆಹರಿಸುವ ಸೌಜನ್ಯವನ್ನು ಸಹ ತೋರಿಲ್ಲ ಎಂದು ವಾಗ್ದಾಳಿ ನಡೆಸಿದರು. 
SCROLL FOR NEXT