ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ರಾಜ್ಯ ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಕಸರತ್ತು ಕೊನೆಗೂ ಅಂತ್ಯವಾಗಿದ್ದು ಕಾಂಗ್ರೆಸ್ ನ 8 ಶಾಸಕರಿಗೆ ಸಚಿವಗಿರಿ ನೀಡಲು ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗಿದೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ನಿವಾಸದಲ್ಲಿ ರಾಜ್ಯ ನಾಯಕರೊಂದಿಗೆ ನಡೆಸಿದ್ದ ಸಭೆ ಅಂತ್ಯವಾಗಿದ್ದು ನೂತನ ಸಚಿವರ ಹೆಸರುಗಳ ಪಟ್ಟಿ ಫೈನಲ್ ಮಾಡಿದ್ದಾರೆ.
ಹಾಲಿ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಹಾಗೂ ಶಂಕರ್ ಗೆ ಕೊಕ್ ಕೊಟ್ಟು ಒಟ್ಟು 8 ಶಾಸಕರಿಗೆ ಮಂತ್ರಿ ಭಾಗ್ಯ ನೀಡುವುದು ಖಚಿತವಾಗಿದ್ದು ನಾಳೆ ಸಂಜೆ ನೂತನ ಸಚಿವರ ಪ್ರಮಾಣ ವಚನ ಸಮಾರಂಭ ನಡೆಯಲಿದೆ.
ಯಾರಿಗೆ ಶನಿವಾರದ ಶಾಕ್? ಯಾರಿಗೆ ಮಂತ್ರಿ ಚಾನ್ಸ್?
ಸತೀಶ್ ಜಾರಕಿಹೊಳಿ, ಆರ್ ಬಿ ತಿಮ್ಮಾಪುರ, ಸಿಎಸ್ ಶಿವಳ್ಳಿ, ಇ ತುಕಾರಾಂ, ಎಂಟಿಬಿ ನಾಗರಾಜ್, ರಹೀಂಖಾನ್, ಪಿಟಿ ಪರಮೇಶ್ವರ್ ನಾಯ್ಕೆ ಮತ್ತು ಎಂಬಿ ಪಾಟೀಲ್ ಗೆ ಮಂತ್ರಿ ಸೀಟು ಪಕ್ಕಾ ಆಗಿದೆ. ಇನ್ನು ಮಂತ್ರಿ ಸ್ಥಾನ ಪ್ರಬಲ ಆಕಾಂಕ್ಷಿಯಾಗಿದ್ದ ಬಿಸಿ ಪಾಟೀಲ್ ನಿರಾಸೆಯಾಗಿದೆ.