ರಾಯಚೂರು: ರಾಜ್ಯದಲ್ಲಿ ಮದ್ಯಪಾನ ನಿಷೇಧ ಸಾಧ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಸಿಂಧನೂರಿನಲ್ಲಿ ನಡೆದ ರೈತರ ಜತೆಗಿನ ಸಂವಾದದಲ್ಲಿ ರೈತ ಮಹಿಳೆಯೊಬ್ಬರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ರಾಜ್ಯದಲ್ಲಿ ಮದ್ಯಪಾನ ಮಾರಾಟ ನಿಷೇಧಿಸುವಂತೆ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ರಾಜ್ಯದಲ್ಲಿ ಮದ್ಯಪಾನ ನಿಷೇಧ ಸಾಧ್ಯವಿಲ್ಲ. ದೇಶದಲ್ಲಿ ಕೆಲ ರಾಜ್ಯಗಳು ಮಾಡಿದ ಮಧ್ಯಪಾನ ನಿಷೇಧ ಯಶಸ್ವಿಯಾಗಿಲ್ಲ. ಬಿಹಾರದಲ್ಲಿ ಸರಾಯಿ ನಿಷೇಧವಿದ್ದರು ಅಕ್ರಮವಾಗಿ ನಡೆಯುತ್ತಿದೆ. ನಾನು ಯಾವುದೇ ವಿಚಾರವನ್ನು ಕರ್ನಾಟಕದ ಮೇಲೆ ಹೇರಲ್ಲ ಎಂದು ಹೇಳಿದರು.
ಕರ್ನಾಟಕದ ಮಹಿಳೆಯರು ಪಾನ ನಿಷೇಧದ ಬಗ್ಗೆ ಒತ್ತಾಯ ಮಾಡುತ್ತಿದ್ದಾರೆ. ಇದರ ಸಾಧಕ ಬಾಧಕಗಳ ಬಗ್ಗೆ ಚರ್ಚೆಯಾಗಬೇಕು. ಇದು ಗಂಭೀರವಾದ ಸಮಸ್ಯೆ ಇದರ ಬಗ್ಗೆ ಚರ್ಚೆಯಾಗೋದು ಮುಖ್ಯ. ಮದ್ಯಪಾನ ನಿಷೇಧದ ಕುರಿತು ಮಹಿಳೆಯರ ಅನಿಸಿಕೆ ತುಂಬಾ ದೃಢವಾಗಿದೆ ಎಂದರು.