ರಾಜಕೀಯ

ಚುನಾವಣೆ: ಮಧ್ಯಪ್ರದೇಶ, ಗುಜರಾತ್ ಸರ್ಕಾರದ ಸಾಧನೆಗಳನ್ನು ಬಿಂಬಿಸಲು ರಾಜ್ಯ ಬಿಜೆಪಿ ಯೋಜನೆ

Shilpa D
ನವದೆಹಲಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಏರಬೇಕೆಂಬ ಹವಣಿಕೆಯಲ್ಲಿರುವ ಬಿಜೆಪಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಹಲವು ರ್ಯಾಲಿಗಳನ್ನು ಹಮ್ಮಿಕೊಂಡಿದೆ.
ಫೆಬ್ರವರಿ ತಿಂಗಳಲ್ಲಿ 2 ರ್ಯಾಲಿಗಳು ನಡೆಯಲಿವೆ. ವಿಧಾನಸಭೆ ಚುನಾವಣೆಯಲ್ಲಿ  ಮಧ್ಯಪ್ರದೇಶ ಮತ್ತು ಗುಜರಾತ್  ಬಿಜೆಪಿ ಸರ್ಕಾರಗಳ ಸಾಧನೆಯನ್ನು ಕರ್ನಾಟಕದ ಜನತೆ ಮುಂದೆ ಬಿಂಬಿಸಲು ಮಾಸ್ಟರ್ ಪ್ಲಾನ್ ನಡೆಸಿದೆ. 
ಚುನಾವಣೆಗೂ ಮುನ್ನ 7 ರ್ಯಾಲಿಗಳನ್ನು ಬಿಜೆಪಿ ಆಯೋಜಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ, ಫೆಬ್ರವರಿ್ 18 ರಂದು ಮೈಸೂರಿನಲ್ಲಿ ಹಾಗೂ ಫೆಬ್ರವರಿ 28 ರಂದು ದೇವನಗಿರಿಯಲ್ಲಿ ರ್ಯಾಲಿ ಆಯೋಜಿಸಲಾಗಿದೆ.
ರಾಜ್ಯದಲ್ಲಿ ಚುನಾವಣಾ ಪ್ರಚಾರ ನಡೆಸಲು ಸಜ್ಜಾಗಿರುವ ಬಿಜೆಪಿ ಮಧ್ಯ ಪ್ರದೇಶ ಮತ್ತು ಗುಜರಾತ್ ಸರ್ಕಾರಗಳ ನಿರ್ಧರಿಸಿದೆ, ಪ್ರಚಾರದ ವೇಳೆ ನಗರ ಸಾರಿಗೆ ಬಗ್ಗೆ ಯೋಜನೆ, ರಾಜ್ಯದ ರೈತರ ಸಮಸ್ಯೆ, ಬರ ಪರಿಸ್ಥಿತಿ, ಕಾನೂನು ಮತ್ತು ಸುವ್ಯವಸ್ಥೆ,ಹಾಗೂ ಸರ್ಕಾರದ ವಿರೋದಿ ಅಲೆಯನ್ನು ಬಂಡವಾಳ ವಾಗಿಸಿಕೊಳ್ಳಲು ಪಕ್ಷ ನಿರ್ಧರಿಸಿದೆ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪ್ರಮುಖ ಸ್ಚಾರ್ ಪ್ರಚಾರಕರಾಗಿದ್ದಾರೆ. ರಾಜ್ಯದಲ್ಲಿ ಗರಿಷ್ಠ ಸೀಟುಗಳನ್ನು ಪಡೆಯಬೇಕು ಎಂದು ಉದ್ದೇಶಿಸಿರುವ ಬಿಜೆಪಿ, ಸರ್ಕಾರಗಳ ಸಾಧನೆಗಳನ್ನು ತೋರಿಸಲು ಸಿದ್ದತೆ ನಡೆಸುತ್ತಿದೆ
SCROLL FOR NEXT