ಬೆಂಗಳೂರು: ಒಬ್ಬ ರಾಜಕಾರಣಿಗಳಿಗೆ ಮತದಾರರನ್ನು ಸೆಳೆಯಲು ಯಾವುದೆಲ್ಲ ಮಾನದಂಡವಾಗುತ್ತದೆ? ಮಾತಿನ ಶೈಲಿ, ರಾಜಕೀಯ ಚತುರತೆ, ತನ್ನ ಕ್ಷೇತ್ರದ ಜನರಿಗೆ ಮಾಡಿದ ಕೆಲಸಗಳು ಇತ್ಯಾದಿಗಳು ಎನ್ನಬಹುದು.
ಆದರೆ ಅವುಗಳ ಜೊತೆಗೆ ರಾಜಕಾರಣಿಗಳ ವೇಷಭೂಷಣ, ತಮ್ಮನ್ನು ಜನರ ಮುಂದೆ ಪ್ರಸ್ತುತಪಡಿಸಿಕೊಳ್ಳುವ ರೀತಿ, ಸಾಮಾಜಿಕ ಮಾಧ್ಯಮದಲ್ಲಿ ತಮ್ಮನ್ನು ತೋರಿಸಿಕೊಳ್ಳುವಿಕೆ ಕೂಡ ಮುಖ್ಯವಾಗುತ್ತದೆ.
ನಗರದಲ್ಲಿರುವ ವ್ಯಕ್ತಿತ್ವ ಸಲಹಾ ಸೇವೆ ನೀಡುವ ಸಂಸ್ಥೆಗಳನ್ನು(Image consultants)ಸಂಪರ್ಕಿಸುವ ರಾಜಕೀಯ ನಾಯಕರು ತಾವು ಯಾವ ರೀತಿಯ ಉಡುಪನ್ನು ಧರಿಸಬೇಕು, ಹೇಗೆ ಕಾಣಿಸಿಕೊಳ್ಳಬೇಕು ಎಂಬ ಸಲಹೆಯನ್ನು ಪಡೆಯುತ್ತಿದ್ದಾರಂತೆ. ಯುವ ಮತದಾರರನ್ನು ಸೆಳೆಯಲು 40ರಿಂದ 50 ವರ್ಷ ಆಸುಪಾಸಿನ ರಾಜಕೀಯ ನಾಯಕರು ಮೇಕ್ಓವರ್ ಗಳನ್ನು ಸಂಪರ್ಕಿಸುತ್ತಿದ್ದಾರೆ. ಸಲಹಾ ಸಂಸ್ಥೆಗಳು ತಮ್ಮ ಸೇವೆಗಳಿಗೆ ಅನುಗುಣವಾಗಿ 1.5 ರಿಂದ 6 ಲಕ್ಷದವರೆಗೆ ದರ ವಿಧಿಸುತ್ತಾರೆ ಎಂದು ಏಸ್ ಇನ್ಫಿನಿಟಿ ಸಂಸ್ಥೆಯ ರೆಂಜು ಜೋಸೆಫ್ ತಿಳಿಸಿದ್ದಾರೆ.
ಇದು ಚುನಾವಣೆ ಸಮಯವಾಗಿರುವುದರಿಂದ ವಾರಕ್ಕೆ ಕನಿಷ್ಠ ಮೂವರು ರಾಜಕಾರಣಿಗಳು ಬರುತ್ತಾರೆ. ಪಕ್ಷಗಳ ಬದಲಾಗಿ ಸ್ವತಃ ಅವರೇ ಬರುತ್ತಾರೆ. ಹಲವು ವರ್ಷಗಳಿಂದ ರಾಜಕೀಯದವರ ಜೊತೆ ಕೆಲಸ ಮಾಡುತ್ತಿದ್ದೇನೆ. ತಮ್ಮ ಉದ್ದೇಶಿತ ಜನರ ಮುಂದೆ ನಿಗದಿತ ಶಾರೀರಿಕ ಭಾಷೆಯ ಮೂಲಕ ಜನರಿಗೆ ಬಹಳ ಹತ್ತಿರವಾಗಲು ನೋಡುತ್ತಾರೆ. ಅದರಲ್ಲಿ ದೈಹಿಕ ಭಾಷೆ, ಧ್ವನಿ ಮತ್ತು ಧ್ವನಿಯನ್ನು ಹೊರಹಾಕುವ ವಿಧಾನವನ್ನು ಒಳಗೊಂಡಿರುತ್ತದೆ. ತಮ್ಮ ಬಾಡಿ ಲ್ಯಾಂಗ್ವೇಜ್ ಮೂಲಕ ಇತ್ತೀಚೆಗೆ ಹಿರಿಯ ರಾಜಕಾರಣಿಯೊಬ್ಬರು ಯುವ ಮತದಾರರನ್ನು ಸೆಳೆಯಲು ಸಲಹೆ ಪಡೆಯಲು ನಮ್ಮನ್ನು ಸಂಪರ್ಕಿಸಿದರು ಎನ್ನುತ್ತಾರೆ ಸಲಹಗಾರ್ತಿ ಶ್ರೇಯಾ ದಿಂಗ್ರಾ.
ವೈಯಕ್ತಿಕ ಅಥವಾ ವೃತ್ತಿಪರ ಕಾರಣಗಳಿಗಾಗಿ ತಮ್ಮ ನೋಟವನ್ನು ಸುಧಾರಿಸಲು ಸಹಾಯ ಮಾಡುವ ಸಂಸ್ಥೆಗಳೇ ಇಮೇಜ್ ಕನ್ಸಲ್ಟೆಂಟ್ ಗಳು.
ಸಿ.ವಿ.ರಾಮನ್ ನಗರದ ಬಿಜೆಪಿ ನಾಯಕ ಬಾಬು ಕುಮಾರ್, ಯುವ ಮತದಾರರನ್ನು ಸೆಳೆಯಲು ಆಕರ್ಷಕವಾಗಿ ಉಡುಪು ಧರಿಸುವುದು ಕೂಡ ಮುಖ್ಯವಾಗುತ್ತದೆ. ನಾನು ಹರುಕು ಮುರುಕು ಬಟ್ಟೆ ಧರಿಸಿಕೊಂಡು ಹೋದರೆ ನನ್ನ ಕ್ಷೇತ್ರದ ಜನತೆಗೆ ಏನು ಸಂದೇಶ ತಲುಪಿಸಿದಂತೆ ಆಗುತ್ತದೆ?
ರಾಜಕಾರಣಿಗಳ ಧಿರಿಸನ್ನು ಆರಿಸುವ ಮುನ್ನ ಅವರ ಕ್ಷೇತ್ರದ ಜನರ ಆರ್ಥಿಕ ಸ್ಥಿತಿಗತಿಯನ್ನು ಕೂಡ ನೋಡುತ್ತೇವೆ ಎನ್ನುತ್ತಾರೆ ಏಸ್ ಇನ್ಫಿನಿಟಿಯ ರೆಂಜು ಜೋಸೆಫ್. ಡಿಫೆನ್ಸ್ ಕಾಲೊನಿಯಾದರೆ ಶಿಸ್ತು, ಸೇನೆಗೆ ಸಂಬಂಧಿಸಿದ ದಿರಿಸನ್ನು ನಮ್ಮಲ್ಲಿ ಬರುವ ರಾಜಕಾರಣಿಗಳಿಗೆ, ಹಲಸೂರಿನಂತಹ ಮಧ್ಯಮ ವರ್ಗದವರು ವಾಸಿಸುವ ಜನರಿರುವ ಕ್ಷೇತ್ರದ ರಾಜಕಾರಣಿಗೆ ಆ ಪ್ರದೇಶಕ್ಕೊಪ್ಪುವ ಧಿರಿಸನ್ನು ಶಿಫಾರಸು ಮಾಡುತ್ತೇವೆ. ಕೆಳ ಮಧ್ಯಮ ವರ್ಗದ ಜನರು ತಮ್ಮ ಕ್ಷೇತ್ರದ ರಾಜಕೀಯ ಮುಖಂಡರು ತಮಗೆ ಹತ್ತಿರವಾಗುವ ರೀತಿಯಲ್ಲಿಯೇ ಕಾಣುತ್ತಾರೆ.
ಇನ್ನು ಕೆಲವು ರಾಜಕಾರಣಿಗಳು ತಮ್ಮ ಪತ್ನಿಗೆ ತರಬೇತಿ ನೀಡುವಂತೆ ಕೋರಿ ತಮ್ಮ ಬಳಿಗೆ ಬರುತ್ತಾರೆ ಎನ್ನುತ್ತಾರೆ ಶ್ರೇಯಾ ದಿಂಗ್ರಾ. ಪತ್ನಿಯ ಮೂಲಕ ಕ್ಷೇತ್ರದಲ್ಲಿ ಪ್ರಚಾರ ಹೆಚ್ಚಿಸುವ ಉದ್ದೇಶದಿಂದ ಅವರನ್ನು ಕೂಡ ತಮ್ಮ ರಾಜಕೀಯದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು ರಾಜಕಾರಣಿಗಳು ಪ್ರಯತ್ನಿಸುತ್ತಾರೆ ಎನ್ನುತ್ತಾರೆ ಅವರು.