ರಾಜಕೀಯ

ಉದ್ಯಾನಕ್ಕೆ ಮೀಸಲಿಟ್ಟ ಜಾಗ ಮುಖ್ಯಮಂತ್ರಿಯಿಂದ ಡಿನೋಟಿಫೈ: ಆರ್.ಅಶೋಕ್ ಆರೋಪ

Sumana Upadhyaya
ಬೆಂಗಳೂರು: ನಗರದ ಜಯನಗರ ಒಂದನೇ ಹಂತದಲ್ಲಿ ಉದ್ಯಾನಕ್ಕೆ ಮೀಸಲಿಟ್ಟ 2 ಎಕರೆ 39 ಗುಂಟೆ ಜಾಗವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಡಿನೋಟಿಫೈ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಆರ್. ಅಶೋಕ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಲ್ ಬಾಗ್ ಪಕ್ಕದಲ್ಲಿ ಬರುವ ಸರ್ವೆ ನಂ 27/1, 28/ 4, 28/5 ಹಾಗೂ 28/ 6 ನಲ್ಲಿ 1 ಲಕ್ಷ 30 ಸಾವಿರದ 689 ಚದರ ಅಡಿಗಳಷ್ಟು ಜಾಗವನ್ನು ಡಿನೋಟಿಫೈ ಮಾಡಲಾಗಿದೆ ಎಂದು ಅಪಾದಿಸಿದರು. 
ಮೈಸೂರು ಅರಸರು ಉದ್ಯಾನಕ್ಕಾಗಿ ಮೀಸಲಿಟ್ಟ ಜಾಗವನ್ನು ಹಲವಾರು ಕಾಲದಿಂದ ಸಂರಕ್ಷಿಸುತ್ತಾ ಬಂದಿತ್ತಾದರೂ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿನೋಟಿಫೈ ಮಾಡುವ ಮೂಲಕ ಭೂಮಿ ಕಬಳಿಸುವ ಯತ್ನ ಮಾಡಿದ್ದಾರೆ ಎಂದು ಅವರು ದೂರಿದರು.
SCROLL FOR NEXT