ರಾಜಕೀಯ

ಸಿಎಂ ಕುಮಾರಸ್ವಾಮಿ ಕಣ್ಣೀರಿಗೆ ಕಾಂಗ್ರೆಸ್ ಮುಖಂಡರೇ ಕಾರಣ: ಕೆಬಿ ಕೋಳಿವಾಡ

Vishwanath S
ಬೆಂಗಳೂರು: ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ವಿಷಕಂಠ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಹೇಳಿಕೆ ಕುರಿತಂತೆ ರಾಜಕೀಯ ಮುಖಂಡರಿಂದ ಪರ ವಿರೋಧ ಹೇಳಿಕೆಗಳು ಬರುತ್ತಿವೆ. 
ಕುಮಾರಸ್ವಾಮಿ ಅವರು ಕಾರ್ಯಕ್ರಮವೊಂದರಲ್ಲಿ ನಾನು ವಿಷಕಂಠನಂತೆ ವಿಷವನ್ನು ನುಂಗಿಕೊಂಡಿದ್ದೇನೆ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನ ಹಿರಿಯ ಮುಖಂಡ ಕೆಬಿ ಕೋಳಿವಾಡ ಅವರು ಕುಮಾರಸ್ವಾಮಿ ಅವರ ಕಣ್ಣೀರಿಗೆ ಕಾಂಗ್ರೆಸ್ ಮುಖಂಡರೇ ಕಾರಣ ಎಂದು ಹೇಳಿದ್ದಾರೆ. 
ಯಾರಿಂದ ಕುಮಾರಸ್ವಾಮಿ ಅವರು ಕಣ್ಣೀರು ಹಾಕುತ್ತಿದ್ದಾರೆ ಎಂದು ನಾನು ಹೇಳುವುದಿಲ್ಲ. ಆದರೆ ಮುಂದಿನ ದಿನಗಳಲ್ಲಿ ಅದು ಎಲ್ಲರಿಗೂ ತಿಳಿಯಲಿದೆ ಎಂದು ಹೇಳಿದರು. 
ಮೈತ್ರಿ ಸರ್ಕಾರದಲ್ಲಿ ನಾನು ವಿಷಕಂಠನಾಗಿದ್ದೇನೆ. ನಾನು ಸಂತಸದಿಂದ ಇಲ್ಲ. ಮುಳ್ಳಿನ ಆಸನದಲ್ಲಿ ಕುಳಿತ್ತಿದ್ದೇನೆ. ಹಿಂದಿನ ಸರ್ಕಾರದ ಸಾಲಮನ್ನಾದ ಹೊರೆಯೂ ನನ್ನ ಮೇಲಿದೆ. ಈಗ ಸಾಲಮನ್ನಾ ಮಾಡಿದರೂ ಎಲ್ಲರನ್ನು ತೃಪ್ತಿ ಪಡಿಸಲು ಸಾಧ್ಯವಾಗಿಲ್ಲ ಎಂದು ಸಮಾರಂಭವೊಂದರಲ್ಲಿ ಹೇಳುತ್ತಲೇ ಕುಮಾರಸ್ವಾಮಿ ಅವರು ಕಣ್ಣೀರು ಹಾಕಿದ್ದರು.
SCROLL FOR NEXT