ಎಚ್.ಡಿ ಕುಮಾರಸ್ವಾಮಿ ಮತ್ತು ಡಿ.ಕೆ ಶಿವಕುಮಾರ್
ಬೆಂಗಳೂರು: ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪರ ಬ್ಯಾಟಿಂಗ್ ಮಾಡಿದ್ದಾರೆ.
ಕುಮಾರಸ್ವಾಮಿ ಅವರನ್ನು ಚಿಕ್ಕಂದಿನಿಂದ ನಾನು ನೋಡಿದ್ದೇನೆ. ಅವರು ಒಂದು ರೀತಿ ಭಾವನಾತ್ಮಕ ಜೀವಿ. ಅವರಿಗೆ ಆಡಳಿತ ನಡೆಸಲು ನಾವೆಲ್ಲ ಅವಕಾಶ ನೀಡೋಣ ಎಂದು ಹೇಳಿದ್ದಾರೆ.
ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದು ಪಕ್ಷದ ಆಂತರಿಕ ವಿಚಾರ. ಇದನ್ನು ಮಾಧ್ಯಮಗಳ ಮುಂದೆ ಯಾರು ಬಹಿರಂಗ ಪಡಿಸಬಾರದು. ಕೆಲವರು ಏನೇನು ಹೇಳಬೇಕೋ ಎಲ್ಲವನ್ನು ಹೇಳಿದ್ದಾರೆ. ಮುಖ್ಯಮಂತ್ರಿ ಕೆಲಸ ಮಾಡಲು ಅವಕಾಶ ಮಾಡಿಕೊಡೋಣ ಎಂದು ತಿಳಿಸಿದ್ದಾರೆ.
ಯಾರೇ ನೊಂದವರು ಮತ್ತು ಬೆಂದವರನ್ನು ಕಂಡರೆ ಕೂಡಲೇ ಭಾವುಕರಾಗುತ್ತಾರೆ, ಅವರ ಪ್ರೀತಿಯ ಕಾರ್ಯಕರ್ತರು, ಅಧಿಕಾರಕ್ಕೆ ತಂದವರು ಅವರನ್ನು ನೋಡಿ ಸ್ವಲ್ಪ ಉದ್ವೇಗಕ್ಕೆ ಒಳಗೊಂಡಿದ್ದಾರೆ. ಅದು ಸ್ವಭಾವಿಕ ಮನುಷ್ಯನ ಕೆಲವು ಗುಣಗಳು ಇರುತ್ತವೆ.
ಕೆಲವು ಸಂದರ್ಭದಲ್ಲಿ ಅಂದರೆ ವಿಕಲಚೇತನರನ್ನು ನೋಡಿ ಹಾಗೂ ಚುನಾವಣೆ ವೇಳೆಯೂ ಅತ್ತಿದ್ದನ್ನು ನಾವು ನೋಡಿದ್ದೇವೆ. ಒಬ್ಬರ ಗುಣ ಒಂದೊಂದು ರೀತಿ ಇರುತ್ತದೆ. ಅದನ್ನು ನಾವು ತಪ್ಪು ಅರ್ಥ ಮಾಡಿಕೊಳ್ಳಬಾರದು ಎಂದು ಸಮರ್ಥಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics