ಡಿಕೆ ಶಿವಕುಮಾರ್ ಮತ್ತು ಎಚ್ ಡಿ ರೇವಣ್ಣ 
ರಾಜಕೀಯ

'ಪವರ್' ಕಳೆದುಕೊಂಡ ಡಿಕೆಶಿ: ಎಚ್.ಡಿ. ರೇವಣ್ಣ ಮಡಿಲಿಗೆ ಇಂಧನ ಖಾತೆ!

ಬಿಜೆಪಿಯ ಕುದುರೆ ವ್ಯಾಪಾರದಿಂದ ಕಾಂಗ್ರೆಸ್ ಶಾಸಕರನ್ನು ರಕ್ಷಿಸಲು ಡಿ,ಕೆ ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು. ಹೀಗಿದ್ದರು ಸಮ್ಮಿಶ್ರ ಸರ್ಕಾರದಲ್ಲಿ ಅವರಿಗೆ ಇಂಧನ ಖಾತೆ ...

ಬೆಂಗಳೂರು: ಮೇ 19 ರಂದು ಬಿಜೆಪಿ ಮುಖಂಡ ಬಿ,ಎಸ್ ಯಡಿಯೂರಪ್ಪ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಲು ವಿಫಲವಾದರು.
ಆ ಸಮಯದಲ್ಲಿ ಡಿಕೆ ಶಿವಕುಮಾರ್ ಕಾಂಗ್ರೆಸ್ ನ ಹೀರೋ ಆಗಿದ್ದರು. ಜೊತೆಗೆ ಟ್ರಬಲ್ ಶೂಟರ್ ಎಂದೇ ಪರಿಗಣಿಸಲ್ಪಟ್ಟಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಒಕ್ಕಲಿಗರ ಪ್ರಬಲ ಮುಖಂಡರಾಗಿರುವ ಡಿಕೆ ಶಿವಕುಮಾರ್ ಬಲಹೀನರಾದಂತೆ ಕಾಣುತ್ತಿದ್ದಾರೆ.
ಬಿಜೆಪಿಯ ಕುದುರೆ ವ್ಯಾಪಾರದಿಂದ ಕಾಂಗ್ರೆಸ್ ಶಾಸಕರನ್ನು ರಕ್ಷಿಸಲು ಡಿ,ಕೆ ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು. ಹೀಗಿದ್ದರು ಸಮ್ಮಿಶ್ರ ಸರ್ಕಾರದಲ್ಲಿ ಅವರಿಗೆ ಇಂಧನ ಖಾತೆ ನೀಡಲು ನಿರಾಕರಿಸಲಾಗಿದೆ. ಇಂಧನ ಖಾತೆ ಮರಳಿ ಪಡೆಯಲು ಶಿವಕುಮಾರ್ ಪಟ್ಟ ಪ್ರಯತ್ನ ವ್ಯರ್ಥವಾಗಿದೆ. ಇಂಧನ ಖಾತೆ ಜೆಡಿಎಸ್ ಪಾಲಾಗಿದ್ದು, ಮುಖ್ಯಮಂತ್ರಿ ಕುಮಾರ ಸ್ವಾಮಿ ಸಹೋದರ ಎಚ್.ಡಿ ರೇವಣ್ಣ ಆ ಖಾತೆ ವಹಿಸಿಕೊಳ್ಳುವ ಸಾಧ್ಯತೆಯಿದೆ.
ಇಂಧನ ಖಾತೆಗಾಗಿ ಕಳೆದ ಕೆಲವು ದಿನಗಳಿಂದ ರೇವಣ್ಣ ಮತ್ತು ಡಿಕೆಶಿ  ಲಾಬಿ ನಡೆಸಿದ್ದರು. ಆದರೆ ತಾವು ಯಾವುದೇ ಸ್ಥಾನಕ್ಕಾಗಿ ಲಾಬಿ ನಡೆಸಿಲ್ಲ ಎಂದು ಡಿಕೆಶಿ ಹೇಳಿದ್ದಾರೆ, ಆಧರೆ ಅವರು ಇಂಧನ ಖಾತೆ ಪಡೆಯಲು ಹಲವು ರೀತಿಯ ಪ್ರಯತ್ನ ಪಟ್ಟಿದ್ದರು ಎಂದು ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ.
ಹಣಕಾಸು ಖಾತೆ ಜೆಡಿಎಸ್ ಗೆ ಎಂದು ತೀರ್ಮಾನವಾಗಿತ್ತು, ಆದರೆ ಶುಕ್ರವಾರ ಮಧ್ಯಾಹ್ನದವರೆಗೂ ಇಂಧನ ಖಾತೆ ಯಾರಿಗೆ ಎಂಬ ಗೊಂದಲವಿತ್ತು, ಆದರೆ ಅಂತಿಮವಾಗಿ ರಾಹುಲ್ ಗಾಂಧಿ ಮಧ್ಯಸ್ಥಿಕೆಯಿಂದ ಸಮಸ್ಯೆ ಬಗೆಹರಿದಿದೆ.
ಇಂಧನ ಖಾತೆ ಸಿಗದಿದ್ದಕ್ಕೆ ಶಿವಕುಮಾರ್ ಮುಖದಲ್ಲಿ ಅಸಮಾಧಾನ ಎದ್ದು ಕಾಣುತ್ತಿತ್ತು. ಮಾಧ್ಯಮದವರು ಈ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರು ಅದನ್ನು ನಿಬಾಯಿಸುವುದಾಗಿ ತಿಳಿಸಿದ್ದಾರೆ,ತಮ್ಮ ಅಸಮಾಧಾನವನ್ನು ಪಕ್ಷದ ಹಿರಿಯ ಮುಖಂಜಡರಿಗೆ ರವಾನಿಸಿದ್ದಾರೆ ಎನ್ನಲಾಗಿದೆ.
ಇನ್ನು ಡಿಕೆ ಶಿವಕುಮಾರ್ ಗೃಹ ಖಾತೆ ಅಥವಾ ಜಲ ಸಂಪನ್ಮೂಲ ಖಾತೆ ಪಡೆಯಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!