ಡಿ.ಸಿ ತಮ್ಮಣ್ಣ, ಹಾಗೂ ಎಂ,ಸಿ ಮನಗೂಳಿ 
ರಾಜಕೀಯ

ಜೆಡಿಎಸ್ ಡ್ಯಾಮೇಜ್ ಕಂಟ್ರೋಲ್ : ಕೊನೆ ಕ್ಷಣದಲ್ಲಿ ಡಿಸಿ ತಮ್ಮಣ್ಣ, ಮನಗೂಳಿ ಸಂಪುಟ ಸೇರ್ಪಡೆ

ಕಳೆದ 14 ದಿನಗಳ ಹಗ್ಗ ಜಗ್ಗಾಟದ ನಂತರ ಸಮ್ಮಿಶ್ರ ಸರ್ಕಾರದ ಸಂಪುಟ ರಚನೆಯಾಗಿದೆ, ಕೊನ ಗಳಿಗೆವರೆಗೂ ಯಾರು ಅಧಿಕಾರ ಪಡೆಯುತ್ತಾರೆ ಎನ್ನುವ ...

ಬೆಂಗಳೂರು: ಕಳೆದ 14 ದಿನಗಳ ಹಗ್ಗ ಜಗ್ಗಾಟದ ನಂತರ ಸಮ್ಮಿಶ್ರ ಸರ್ಕಾರದ ಸಂಪುಟ ರಚನೆಯಾಗಿದೆ, ಕೊನ ಗಳಿಗೆವರೆಗೂ ಯಾರು ಅಧಿಕಾರ ಪಡೆಯುತ್ತಾರೆ ಎನ್ನುವ ಮಾಹಿತಿಯನ್ನು ರಹಸ್ಯವಾಗಿಯೇ ಇಡಲಾಗಿತ್ತು. 
ಪ್ರಮಾಣ ವಚನ ಸ್ವೀಕಾರ ಸಮಯದ ಕೊನಕ್ಷಣದಲ್ಲಿ ಜೆಡಿಎಸ್ ಡಿ,ಸಿ ತಮ್ಮಣ್ಣ ಮತ್ತು ಮನಗೂಳಿ ಅವರ ಹೆಸರನ್ನು ಸೇರಿಸಿತು. ಈ ಮೊದಲು ಕೇವಲ 8 ಮಂದಿ ಪ್ರಮಾಣ ವಚನಕ್ಕೆ  ಜೆಡಿಎಸ್ ಸಿದ್ಧತೆ ನಡೆಸಲಾಗಿತ್ತು.
ಮದ್ದೂರು ಶಾಸಕ ಡಿ.ಸಿ ತಮ್ಮಣ್ಣ  ಅವರಿಗೆ ಸಚಿವ ಸ್ಥಾನ ನೀಡಬೇಕೆಂಬುದು ದೇವೇಗೌಡರ ಕುಟುಂಬಸ್ಥರ ಆಸೆಯಾಗಿತ್ತು. ಏಕೆಂದರೇ ತಮ್ಮಣ್ಣ ದೇವೇಗೌಡರ ಸಂಬಂಧಿಕರಾಗಿದ್ದಾರೆ, ತಮ್ಮಣ್ಣ ಅವರ ಮಗ ದೇವೇಗೌಡರ ಸೋದರ ಸೊಸೆಯನ್ನು ವಿವಾಹವಾಗಿದ್ದಾರೆ, ಹೀಗಾಗಿ ಕಳೆದ ಕೆಲವು ದಿನಗಳಿಂದ ತಮ್ಮಣ್ಣ ಹೆಸರು ಕೇಳಿ ಬರುತ್ತಿತ್ತು.
ಆದರೆ ಜೆಡಿಎಸ್ ಈ ಮೊದಲು ಸಿದ್ಧ ಪಡಿಸಿದ್ದ 8 ಮಂದಿ ಶಾಸಕರ ಪಟ್ಟಿಯಲ್ಲಿ ತಮ್ಮಣ್ಣ ಅವರ ಹೆಸರು ಇರಲಿಲ್ಲ, ಕೊನೆ ಕ್ಷಣದಲ್ಲಿ ಅಂದರೆ ಬುಧವಾರ ಬೆಳಗ್ಗೆ ತಮ್ಮಣ್ಣ ಹೆಸರನ್ನು ಸೇರಿಸಿ ರಾಜಭವನಕ್ಕೆ ಕಳುಹಿಸಲಾಯಿತು.
ಡಿಎಸ್ ಶಾಸಕ ಡಿ.ಸಿ. ತಮ್ಮಣ್ಣ ಹೆಸರು ಇಲ್ಲವೆಂದು ಆಕ್ರೋಶಗೊಂಡ ಅವರ ಬೆಂಬಲಿಗರು ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದರಿಂದಾಗಿ ಮೈಸೂರು–ಬೆಂಗಳೂರು ರಸ್ತೆಯಲ್ಲಿ ಎರಡು ಗಂಟೆಗೂ  ಹೆಚ್ಚು ಹೊತ್ತು ಸಂಚಾರ ಅಸ್ತವ್ಯಸ್ತವಾಗಿತ್ತು.
ಇನ್ನು ಸಿಂಧಗಿಯ ಲಿಂಗಾಯತ ಶಾಸಕ ಎಂ,ಸಿ ಮನಗೂಳಿ ಹೆಸರು ಕೇಳಿ ಬಂದಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಜೆಡಿಎಸ್ ನ ಹಿರಿಯ ಲಿಂಗಾಯತ ಶಾಸಕ ಬಸವರಾಜ ಹೊರಟ್ಟಿ ಅವರನ್ನು ನಿರ್ಲಕ್ಷ್ಯಿಸಲಾಗಿದೆ,. ಜೊತೆಗೆ ಹಿರಿಯ ಮುಖಂಡರಾದ ಹೊರಟ್ಟಿ, ಎಚ್. ವಿಶ್ವನಾಥ್, ಎ,ಟಿ ರಾಮಸ್ವಾಮಿ, ಶಿವಲಿಂಗೇಗೌಡ ಮತ್ತು ಬಿ.ಎಂ ಫರೂಕ್ ಅವರು ಸಚಿವ ಸ್ಥಾನದಿಂದ ಹೊಂಚಿತರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!