ರಾಜಕೀಯ

ಮೈಸೂರು: ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಪಣವಾಗಿದೆ ಪರಿಷತ್ ಚುನಾವಣೆ!

Shilpa D
ಬೆಂಗಳೂರು: ಮೇ 12 ರಂದು ವಿಧಾನಸಭೆ ಚುನಾವಣೆ ನಡೆದು ಮೂರು ವಾರ ಕಳೆಯುವುದರೊಳಗಾಗಿ ಇಂದು ವಿಧಾನ ಪರಿಷತ್ ಆರು ಸ್ಥಾನಗಳಿಗೆ  ಮತದಾನ ನೀಡುತ್ತಿದೆ. 
ಸಮ್ಮಿಶ್ರ ಸರ್ಕಾರದ ದೋಸ್ತಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಗಳ ಪ್ರತ್ಯೇಕವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಬಿಜೆಪಿ ಕೂಡ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. 
ಹಾಲಿ ವಿಧಾನ ಪರಿಷತ್ ಸದಸ್ಯ ಮರಿ ತಿಬ್ಬೇಗೌಡ ನಾಲ್ಕನೇ ಬಾರಿಗೆ ಜಯ ಸಾಧಿಸಲು ಹವಣಿಸುತ್ತಿದ್ದಾರೆ. ಕಾಂಗ್ರೆಸ್ ನ ಎನ್ ಲಕ್ಷ್ಮಣ ಕೂಡ ಜಯದ ಹಾದಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇನ್ನೂ ಬಿಜೆಪಿ ಕೂಡ ಸುಮ್ಮನೆ ಕುಳಿತಿಲ್ಲ, ಬಿ. ನಿರಂಜನ ಮೂರ್ತಿ ಅವರನ್ನು ಕಣಕ್ಕಿಳಿಸಿದೆ, ಉಳಿದ ಆರು ಮಂದಿ ಪಕ್ಷೇತರರಾಗಿದ್ದು ಒಟ್ಟು 9 ಮಂದಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಮರಿತಿಬ್ಬೇಗೌಡ 2000 ದಿಂದಲೂ ಕಾಂಗ್ರೆಸ್ ಟಿಕೆಟ್ ಪಡೆದು ಸತತವಾಗಿ ಆಯ್ಕೆಯಾಗುತ್ತಾ  ಬಂದಿದ್ದಾರೆ.2006 ರಲ್ಲಿ ಜೆಡಿಎಸ್ ನಿಂದ ಸ್ಪರ್ದಿಸಲು ಬಯಸಿದ್ದರು, ಆದರೆ ಟಿಕೆಟ್ ಸಿಗದ ಕಾರಣ ಪಕ್ಷೇತರರಾಗಿ ಸ್ಪರ್ಧಿಸಿ ಜಯ ಗಳಿಸಿದ್ದರು,.2012 ರಲ್ಲಿ ಜೆಡಿಎಸ್ ನಿಂದ ಪುನಾರಾಯ್ಕೆ ಬಯಸಿದರು. 
SCROLL FOR NEXT