ರಾಜಕೀಯ

ಯಾವ ಇಲಾಖೆಯಲ್ಲೂ ನಾನು ಹಸ್ತಕ್ಷೇಪ ಮಾಡಿಲ್ಲ: ರೇವಣ್ಣ ಸ್ಪಷ್ಟನೆ

Shilpa D
ಹಾಸನ:  ಜಲಸಂಪನ್ಮೂಲ ಇಲಾಖೆ ಸೇರಿದಂತೆ ಯಾವುದೇ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ಅಗತ್ಯವಿದ್ದರೆ ಈ ಸಂಬಂಧ ಸಮನ್ವಯ ಸಮಿತಿಗೆ ಉತ್ತರ ನೀಡುವೆ’ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ  ಹೇಳಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಬೇರೆ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿದ್ದೇನೆ ಎಂಬ ಬಗ್ಗೆ ಮಾಹಿತಿ ಇದ್ದರೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ವೇಣುಗೋಪಾಲ್, ಸಚಿವ ಡಿ.ಕೆ.ಶಿವಕುಮಾರ್ ಅವರೇ ಕರೆದು ನೇರವಾಗಿ ಮಾತನಾಡಲಿ. ಉತ್ತರ ನೀಡಲು ಸಿದ್ಧನಿದ್ದೇನೆ’ ಎಂದರು.
ನನಗೂ ಸ್ವಾಭಿಮಾನ ಇದೆ. ಇಂತಹ ಸುಳ್ಳು ಆರೋಪದಿಂದ ಹೆದರಿ ಓಡಿ ಹೋಗಲ್ಲ. ನನ್ನ ಹಾಗೂ ಸಚಿವ ಡಿ.ಕೆ.ಶಿವಕುಮಾರ್‌ ನಡುವಿನ ಬಾಂಧವ್ಯ ಉತ್ತಮವಾಗಿದೆ. ಸಚಿವನಾಗಿ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ಚರ್ಚೆಯಲ್ಲಿ ಮಾತ್ರ ಭಾಗವಹಿಸುವೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ’ ಎಂದು ಸ್ಪಷ್ಟಪಡಿಸಿದರು.
ಜಲ ಸಂಪನ್ಮೂಲ ಇಲಾಖೆಯ 52 ಎಂಜಿನೀಯರ್ ಗಳನ್ನು  ವರ್ಗಾವಣೆ ಮಾಡಿದ್ದೇನೆ ಎಂಬ ಆರೋಪ ನಿರಾಧಾರವಾದದ್ದು ಎಂದು ಹೇಳಿದ್ದಾರೆ, 
ಹಾಸನದ ಜಲ ಸಂಪನ್ಮೂಲ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ಮುಖ್ಯಮಂತ್ರಿ ವರ್ಗಾವಣೆ ಮಾಡಿದ್ದಾರೆ,  ಬೇರೆ ಎಲ್ಲಾ ಆಧಾರರಹಿತ ಆರೋಪಗಳಿಗೆ ಉತ್ತರಿಸುವ ಅವಶ್ಯಕತೆ ನನಗಿಲ್ಲ ಎಂದು ತಿಳಿಸಿದ್ದಾರೆ. 
SCROLL FOR NEXT