ಸಚಿವ ಜಮೀರ್ ಅಹಮದ್ ಖಾನ್ 
ರಾಜಕೀಯ

ಬೆನ್ಝ್, ಬಿಎಂಡಬ್ಲ್ಯೂ ಕಾರು ಕೇಳಿಲ್ಲ; ಯೂ-ಟರ್ನ್ ಹೊಡೆದ ಸಚಿವ ಜಮೀರ್

ರೈತರ ಸಾಲಮನ್ನಾ ಮಾಡಲು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಒದ್ದಾಡುತ್ತಿದ್ದು, ಇಂತಹ ಸಂದರ್ಭದಲ್ಲಿ ನಾನು ಬೆನ್ಝ್, ಬಿಎಂಡಬ್ಲ್ಯೂ ನಂತರ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಹೊಸ ಕಾರು ಖರೀದಿಸಿಕೊಡಿ ಎಂದು...

ಬೆಂಗಳೂರು: ರೈತರ ಸಾಲಮನ್ನಾ ಮಾಡಲು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಒದ್ದಾಡುತ್ತಿದ್ದು, ಇಂತಹ ಸಂದರ್ಭದಲ್ಲಿ ನಾನು ಬೆನ್ಝ್, ಬಿಎಂಡಬ್ಲ್ಯೂ ನಂತರ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಹೊಸ ಕಾರು ಖರೀದಿಸಿಕೊಡಿ ಎಂದು ಕೇಳಿಲ್ಲ ಎಂದು ಸಚಿವ ಜಮೀರ್ ಅಹಮದ್ ಖಾನ್ ಅವರು ಮಂಗಳವಾರ ಸ್ಪಷ್ಟಪಡಿಸಿದ್ದಾರೆ. 
ತಮಕೆ ಪ್ರಸ್ತುತ ಸರ್ಕಾರ ನೀಡಿರುವ ಕಾರನ್ನು ಬೇಡ ಎನ್ನುತ್ತಿದ್ದೀರಂತಲ್ಲಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿ ಅವರು ಜನರಿಗೆ ಕೊಟ್ಟ ಮಾತಿನಂತೆ ಸಾಲ ಮನ್ನಾ ಮಾಡಲು ಒದ್ದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಾನು ಬೆಂಜ್, ಬಿಎಂಡಬ್ಲ್ಯೂ, ನಂತರ ಕೋಟ್ಯಾಂತರ ಬೆಲೆ ಬಾಳುವ ಕಾರು ಖರೀದಿಸಿ ಕೊಡಿ ಎಂದು ಕೇಳಿಲ್ಲ. ಇಲಾಖೆಯಲ್ಲಿಯೇ ಇರುವ ಬೇರೆ ಕಾರು ಬದಲಿಸಿಕೊಡಿ ಎಂದು ಹೇಳಿದ್ದೇನೆಂದು ಹೇಳಿದ್ದಾರೆ. 
ರೈತರಿಗೆ ಒಳ್ಳೆಯದಾಗುತ್ತದೆ ಎನ್ನುವುದಾದರೆ, ಈಗ ಕೊಟ್ಟಿರುವ ಕಾರೂ ಕೂಡ ಬೇಡ, ಅದನ್ನೂ ಕೂಡ ವಾಪಸ್ ಕೊಡುತ್ತೇನೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್