ಕಾರವಾರ: ನೀವು ಪ್ಲಾಸ್ಚಿಕ್ ಚೇರ್ ಮೇಲೆ ಕೂತಿದ್ದೀರಿ ಅಲ್ಲವೇ, ಒಂದು ವೇಳೆ ಬಿಜೆಪಿ 70 ವರ್ಷ ಆಡಳಿತ ನಡೆಸಿದ್ದರೇ ನಿಮ್ಮನ್ನು ಬೆಳ್ಳಿ ಕುರ್ಚಿಯಲ್ಲಿ ಕೂರಿಸುತ್ತಿದ್ದೆವು ಎಂದು ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಹೇಳಿದ್ದಾರೆ.
ಕಾರವಾರದಲ್ಲಿ ಬಿಜೆಪಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಇಂದಿನ ಈ ದುಸ್ಥಿತಿಗೆ ಕಾಂಗ್ರೆಸ್ ಕಾರಣ ಎಂದು ಆರೋಪಿಸಿದರು. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಕಾಗೆ, ಕೋತಿ, ನರಿ ಮತ್ತಿತರರು ಒಂದಾಗಿವೆ,
ಆದರೆ ಮತ್ತೊಂದೆಡೆ ಹುಲಿ (ನರೇಂದ್ರ ಮೋದಿ) ಒಂದೇ ನಿಂತಿದೆ, ಮುಂದಿನ ಬಾರಿ ಕತ್ತೆ ಕಿರುಬ ಗೆಲ್ಲಬೇಕೋ ಹುಲಿ ಗೆಲ್ಲಬೇಕೋ ಎಂಬುದನ್ನು ನಿರ್ಧರಿಸಿ ಎಂದು ತಿಳಿಸಿದ್ದಾರೆ.